ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಸ್‌ನ ಬೈಕ್‌ ಸರಸ

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

* ಸ್ಟಂಟ್‌ ರೈಡ್‌ ನಿಮ್ಮನ್ನು ಸೆಳೆದಿದ್ದು ಹೇಗೆ?
ಸಿನಿಮಾಗಳನ್ನು ನೋಡಿ ಸ್ಟಂಟ್‌ರೈಡರ್ ಆಗುವ ಆಸೆ ಹುಟ್ಟಿತು. ಮೊದಲು ನನ್ನ ಬಳಿ ಇದ್ದ ಸ್ಕೂಟರ್‌ನಲ್ಲಿ ವ್ಹೀಲಿಂಗ್‌, ಸ್ಟಾಫಿಗಳಂತಹಾ ಸರಳ ಸ್ಟಂಟ್‌ಗಳನ್ನು ಮಾಡುತ್ತಿದ್ದೆ. ನಂತರ ವೃತ್ತಿಪರ ಸ್ಟಂಟ್‌ಮನ್ ಆಗಲು ನಿರ್ಧರಿಸಿ ಪ್ರತಿದಿನ ಅಭ್ಯಾಸ ಮಾಡಿದೆ. ಹೊಸ ರೀತಿಯ ಸ್ಟಂಟ್‌ಗಳನ್ನು ಕಲಿತೆ.

* ಭಾರತದ ಬೈಕ್‌ ಸ್ಟಂಟ್‌ ರೈಡರ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯ?

ಎರಡು ವರ್ಷಗಳಿಂದ ನಾನು ಭಾರತದ ಬೈಕ್‌ ಸ್ಟಂಟ್‌ಮನ್‌ಗಳನ್ನು ಗಮನಿಸುತ್ತಿದ್ದೇನೆ. ಕೆಲವರು ಅತ್ಯುತ್ತಮ ಸ್ಟಂಟ್‌ ರೈಡರ್‌ಗಳು. ಆದರೆ ಹೆಚ್ಚಿನವರು 150ಸಿಸಿ, 200ಸಿಸಿ ಬೈಕ್‌ಗಳಲ್ಲೇ ಸ್ಟಂಟ್‌ ಮಾಡುತ್ತಿದ್ದಾರೆ. ಅವರಲ್ಲಿರುವ ಪ್ರತಿಭೆಗೆ ಇನ್ನೂ ಹೆಚ್ಚಿನ ಸಿಸಿ ಹೊಂದಿರುವ ಬೈಕ್‌ಗಳಲ್ಲಿ ಸ್ಟಂಟ್‌ ಮಾಡಬಹುದು.

* ನಿಮ್ಮ ಪ್ರಕಾರ ಸ್ಟಂಟ್‌ ರೈಡಿಂಗ್‌ಗೆ ಸೂಕ್ತವಾದ ಬೈಕ್‌ ಯಾವುದು?

ಸ್ಟಂಟ್‌ ಮಾಡಲು ಯಾವ ಬೈಕ್‌ ಆದರೂ ಪರವಾಗಿಲ್ಲ. ಚಾಲಕನಿಗೆ ಸ್ಟಂಟ್‌ ಮಾಡುವ ಛಾತಿ, ಫಿಟ್‌ನೆಸ್‌ ಮತ್ತು ಕೌಶಲ್ಯ ಬೇಕು. ಆದರೆ ವೃತ್ತಿಪರ ಸ್ಟಂಟರ್‌ ಆಗಲು ಉತ್ತಮ ಸಿಸಿಯುಳ್ಳ ಬೈಕ್‌ ಅಗತ್ಯ.

* ಸ್ಟಂಟ್‌ ರೈಡರ್‌ ವೃತ್ತಿಗೆ ಅವಕಾಶಗಳು ಹೇಗಿವೆ?

ಸ್ಟಂಟ್‌ ರೈಡರ್‌ಗಳಿಗೆ, ಮೋಟಾರ್‌ ಕಂಪೆನಿಗಳು, ಜಾಹೀರಾತು, ಸಿನಿಮಾಗಳಲ್ಲಿ ಅವಕಾಶ ಸಾಕಷ್ಟಿದೆ. ಆದರೆ ಉತ್ತಮ ಸ್ಟಂಟ್‌ ರೈಡರ್‌ ಆಗಲು ಬಹಳ ಪರಿಶ್ರಮ ಪಡಬೇಕು. ಸ್ವಲ್ಪ ಅದೃಷ್ಟವೂ ಜತೆಗಿದ್ದರೆ ಮಾತ್ರ ಈ ವೃತ್ತಿ ಕೈಹಿಡಿಯುತ್ತದೆ.

* ಸ್ಟಂಟ್‌ ವೇಳೆ ಯಾವುದಾದರೂ ಅಹಿತಕರ ಅನುಭವ ಆಗಿದೆಯೇ?

ಅಪಘಾತಗಳು ಈ ವೃತ್ತಿಯ ಭಾಗವೇ ಆಗಿಹೋಗಿವೆ. ಅಭ್ಯಾಸ ಮಾಡುವಾಗ, ಪ್ರದರ್ಶನ ನೀಡುವಾಗ ಹಲವು ಭಾರಿ ಅಪಘಾತಕ್ಕೊಳಗಾಗಿದ್ದೇನೆ. ಕೈಮೂಳೆ, ಕಾಲು ಮೂಳೆ ಮುರಿದುಕೊಂಡಿದ್ದೇನೆ.

* ಸಿನಿಮಾಗಳಿಗೆ ಕೆಲಸ ಮಾಡಿದ್ದೀರಾ?

ಇಲ್ಲ, ಇದುವರೆಗೆ ಮಾಡಿಲ್ಲ. ಆದರೆ ಪ್ರಯತ್ನ ಮಾಡುತ್ತಿದ್ದೇನೆ. ಬಾಲಿವುಡ್‌ನಲ್ಲೂ ನಟಿಸುವ, ಬೈಕ್‌ ಸ್ಟಂಟ್‌ಗಳನ್ನು ಮಾಡುವ ಆಸೆ ಇದೆ.

* ಗ್ರಾಫಿಕ್ಸ್‌ ಬಳಕೆ ಹೆಚ್ಚಾದ ಮೇಲೆ ಸ್ಟಂಟ್‌ಮನ್‌ಗಳಿಗೆ ಅವಕಾಶ ಕಡಿಮೆ ಆಗಿವೆ ಎನಿಸುವುದಿಲ್ಲವೇ?

ಮುಂಚೆ ಸ್ಟಂಟ್‌ಮನ್‌ಗಳು ಒಂದೇ ದೃಶ್ಯವನ್ನು ಹಲವು ಭಾರಿ ಮಾಡಬೇಕಿತ್ತು. ಇದರಿಂದ ಅವರ ಶ್ರಮ ಹೆಚ್ಚು ವ್ಯರ್ಥವಾಗುತ್ತಿತ್ತು. ಗಾಯಗಳಾಗುವ ಸಂಭವವೂ ಹೆಚ್ಚಿತ್ತು. ಈಗ ಗ್ರಾಫಿಕ್ಸ್‌ ಬಳಕೆಯಿಂದ ಒಂದೇ ದೃಶ್ಯವನ್ನು ಪದೇ ಪದೇ ಚಿತ್ರೀಕರಿಸುವುದು ಕಡಿಮೆಯಾಗಿದೆ.

* ಜೀವ ಒತ್ತೆ ಇಡಬೇಕಾಗಿ ಬರುವ ಈ ಕ್ರೀಡೆ ಅಗತ್ಯವೇ?

ಎಲ್ಲಾ ಕ್ರೀಡೆಗಳಲ್ಲೂ ರಿಸ್ಕ್‌ ಇದ್ದದ್ದೇ, ಆದರೆ ಇದರಲ್ಲಿ ಸ್ವಲ್ಪ ಹೆಚ್ಚಿದೆ. ಆದರೆ ನಿರಂತರ ಅಭ್ಯಾಸ, ಸೂಕ್ತ ಜೀವ ರಕ್ಷಕ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಲ್ಲಿ ಅಪಘಾತಗಳನ್ನು ತಪ್ಪಿಸಬಹುದು.

* ಸ್ಟಂಟ್‌ ಬಗ್ಗೆ ತರಬೇತಿ ನೀಡುತ್ತೀರಾ?

ನೇರವಾಗಿ ತರಬೇತಿ ನೀಡುತ್ತಿಲ. ಆದರೆ ಸ್ಟಂಟ್‌ರೈಡರ್‌ಗಳಾಗಲು ಬಯಸುವವರಿಗಾಗಿಯೇ ಕಾರ್ಯಾಗಾರಗಳನ್ನು ಆಯೋಜಿಸುತ್ತಿರುತ್ತೇನೆ. ನನ್ನ ದೇಶದಲ್ಲಿ ಸ್ಟಂಟ್‌ ರೈಡಿಂಗ್ ಸ್ಪರ್ಧೆಗಳನ್ನು ಆಯೋಜಿಸುತ್ತೇನೆ. ಯುವಕರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತೇನೆ. ನಾನು ಹುಡುಗರಿಗೆ ಯಾವಾಗಲೂ ಕಿವಿಮಾತು ಹೇಳುತ್ತಿರುತ್ತೇನೆ... ನನ್ನ ಬೈಕ್‌ ಸ್ಟಂಟ್‌ ಪ್ರದರ್ಶನಗಳನ್ನು ನೋಡಿದ ಎಷ್ಟೋ ಮಂದಿ ನನ್ನನ್ನು ಫಾಲೋ ಮಾಡಿದ್ದಾರೆ. ಕೈಕಾಲು, ಸೊಂಟ, ಬೆನ್ನು ಮುರಿದುಕೊಂಡು ಅಂಗವಿಕಲರಾಗಿರುವುದೂ ಉಂಟು. ಹಾಗಾಗಿ ‘ಡೋಂಟ್‌ ಟ್ರೈ ದಿಸ್ ಅಟ್ ಹೋಮ್’.

* ಎಲ್ಲೆಲ್ಲಿ ಪ್ರದರ್ಶನ ನೀಡಿದ್ದೀರಾ?

ಇಟಲಿ, ಆಸ್ಟ್ರಿಯ, ಜರ್ಮನಿ, ಫ್ರಾನ್ಸ್‌, ಪೋಲೆಂಡ್, ಸ್ವಿಟ್ಜರ್‌ಲೆಂಡ್, ಭಾರತ ಒಳಗೊಂಡು ಸಾಕಷ್ಟು ದೇಶಗಳಲ್ಲಿ ಪ್ರದರ್ಶನ ನೀಡಿದ್ದೇನೆ.

* ಬೆಂಗಳೂರಿಗೆ ಬಂದಿರೋದು ಇದೇ ಮೊದಲಾ?

ಇದು ಎರಡನೇ ಬಾರಿ. ಇಲ್ಲಿನ ವಾತಾವರಣ ನನಗೆ ಬಹಳ ಇಷ್ಟ. ಸಮಶೀತೋಷ್ಣ ವಾತಾವರಣ ಇಲ್ಲಿಯದು. ನಗರವೂ ಸ್ವಚ್ಛವಾಗಿದೆ. ಆದರೆ ಟ್ರಾಫಿಕ್ ಸ್ವಲ್ಪ ಹೆಚ್ಚು.

**

ಬೈಕ್‌ ಸ್ಟಂಟ್‌ ಅಭ್ಯಾಸ

ಮಾಡಲು ಖಾಲಿ ಮೈದಾನಗಳನ್ನು ಆಯ್ಕೆಮಾಡಿಕೊಳ್ಳಬೇಕು. ಸ್ಟಂಟ್‌ಗೆ ಫಿಟ್‌ನೆಸ್‌ ಬಹಳ ಅಗತ್ಯ ರಸ್ತೆ ಅಥವಾ ಜನ ಓಡಾಡುವ ಸ್ಥಳದಲ್ಲಿ ಸ್ಟಂಟ್ ಅಭ್ಯಾಸ ಬೇಡ.

-ಎರಸ್‌ ಗಿಬೀಜಾ, ಅಂತರರಾಷ್ಟ್ರೀಯ ಬೈಕ್‌ ಸ್ಟಂಟ್ ರೈಡರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT