ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಕ್ಕೆ ಪ್ರವೇಶ ಸಿಗದು: ಹಾಕಿಂಗ್‌

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಲಂಡನ್‌: ‘ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತದ ಅವಧಿ ಯಲ್ಲಿ ನನಗೆ ಅಮೆರಿಕಕ್ಕೆ ಪ್ರವೇಶ ದೊರಕದೆ ಇರಬಹುದು’ ಎಂದು ಬ್ರಿಟಿಷ್‌ ಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್ ಭೀತಿ ವ್ಯಕ್ತಪಡಿಸಿದ್ದಾರೆ. 
 
‘ಮುಕ್ತ ಮನಸ್ಥಿತಿ ಹೊಂದಿಲ್ಲದ  ಹಾಗೂ ತಿಳಿವಳಿಕೆಯೂ ಇಲ್ಲದ’ ತಮ್ಮ ಮತದಾರರನ್ನು ಸಂತೃಪ್ತಿಗೊಳಿಸುವುದೇ ಅಮೆರಿಕದ ಅಧ್ಯಕ್ಷರ ಆದ್ಯತೆಯಾಗುತ್ತಿದೆ ಎಂದು ಹಾಕಿಂಗ್‌ ಹೇಳಿದ್ದಾರೆ. 
 
‘ಪುನಃ ಅಮೆರಿಕಕ್ಕೆ ಹೋಗಿ ಅಲ್ಲಿನ ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಬೇಕು ಎಂಬ ಆಸೆ ಇದೆ. ಆದರೆ ನನಗೆ ಆ ದೇಶಕ್ಕೆ ಪ್ರವೇಶ ಲಭಿಸುವುದೇ ಕಷ್ಟ ಅನ್ನಿಸುತ್ತಿದೆ’ ಎಂದು ಅವರು  ಹೇಳಿದ್ದಾರೆ.
 
ಹಾಕಿಂಗ್‌ ಅವರು ವಿಜ್ಞಾನ ಕ್ಷೇತ್ರಕ್ಕಾಗಿ ಪ್ರತಿಷ್ಠಿತ ಅಮೆರಿಕ ಫ್ರಾಂಕ್‌್ಲಿನ್‌್ ಪದಕ ಹಾಗೂ 2009ರಲ್ಲಿ ಬರಾಕ್‌ ಒಬಾಮ ಅವರಿಂದ ಸ್ವಾತಂತ್ರ್ಯಕ್ಕಾಗಿ ಅಧ್ಯಕ್ಷೀಯ ಪದಕ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT