ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷದಾಯಕ ರಾಷ್ಟ್ರ : ಭಾರತಕ್ಕೆ122ನೇ ಸ್ಥಾನ

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ವಿಶ್ವಸಂಸ್ಥೆ: ವಿಶ್ವದ ಸಂತೋಷದಾಯಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 122ನೇ ಸ್ಥಾನಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತ ನಾಲ್ಕು ಸ್ಥಾನ ಕುಸಿತಕಂಡಿದ್ದು, ಚೀನಾ, ಪಾಕಿಸ್ತಾನ ಮತ್ತು ನೇಪಾಳದ ನಂತರದ ಸ್ಥಾನದಲ್ಲಿದೆ. 
 
ಸಂತೋಷದಾಯಕ ರಾಷ್ಟ್ರಗಳ ಸಾಲಿನಲ್ಲಿ ನಾರ್ವೆ ಮೊದಲ ಸ್ಥಾನ ಪಡೆದಿದೆ ಎಂದು ‘ದಿ ವರ್ಲ್ಡ್‌ ಹ್ಯಾಪಿನೆಸ್‌ ರಿಪೋರ್ಟ್‌ 2017’ ಹೇಳಿದೆ. 
2013–2015ನೇ ಸಾಲಿನಲ್ಲಿ ಪ್ರಕಟಗೊಂಡ ವರದಿಯಲ್ಲಿ ಭಾರತ 118ನೇ ಸ್ಥಾನಪಡೆದಿತ್ತು.  ಈ ಬಾರಿ 112ನೇ ಸ್ಥಾನ ಪಡೆದಿದೆ.
 
ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ), ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವನ ನಿರೀಕ್ಷೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಉದಾರತೆ ಮತ್ತು ಭ್ರಷ್ಟಾಚಾರದ ಗ್ರಹಿಕೆಗಳ ಆಧಾರ ಮೇಲೆ ವರದಿ ಸಿದ್ಧಪಡಿಸಲಾಗುತ್ತದೆ. ವಿಶ್ವ ಸಂತೋಷದಾಯಕ ದಿನಾಚರಣೆ ಅಂಗವಾಗಿ ಈ ವರದಿ ಬಿಡುಗಡ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT