ನವದೆಹಲಿ: ಜಗತ್ತಿನ ಅತಿ ದುಬಾರಿ ನಗರಗಳಲ್ಲಿ ಸಿಂಗಾಪುರ ಮೊದಲ ಸ್ಥಾನದಲ್ಲಿದ್ದು, ಬೆಂಗಳೂರು ಸೇರಿದಂತೆ ದೇಶದ ನಾಲ್ಕು ನಗರಗಳು ಕಡಿಮೆ ಖರ್ಚಿನ ನಗರಗಳ ಮೊದಲ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್(ಇಐಯು) ವರದಿ ಪ್ರಕಾರ, ಜಗತ್ತಿನ ಹತ್ತು ಕಡಿಮೆ ಖರ್ಚಿನ ನಗರಗಳ ಪೈಕಿ ಬೆಂಗಳೂರು(3ನೇ ಸ್ಥಾನ), ಚೆನ್ನೈ(6ನೇ ಸ್ಥಾನ), ಮುಂಬೈ(7ನೇ ಸ್ಥಾನ) ಹಾಗೂ ನವದೆಹಲಿ(10ನೇ ) ಸ್ಥಾನ ಪಡೆದಿವೆ.

ಕಜಕಸ್ತಾನದ ‘ಆಲ್ಮಟಿ’ ಮೊದಲ ಕಡಿಮೆ ಖರ್ಚಿನ ನಗರವಾಗಿದ್ದು ನೈಜೀರಿಯಾದ ‘ಲಾಗೋಸ್’ ನಂತರದ ಸ್ಥಾನದಲ್ಲಿದೆ.

ಜಾಗತಿಕ ಜೀವನ ನಿರ್ವಹಣಾ ವೆಚ್ಚ 2017ರ ವರದಿಯ ಪ್ರಕಾರ, ವಿಶ್ವದ ದುಬಾರಿ ನಗರಗಳು ಹಾಗೂ ಕಡಿಮೆ ಖರ್ಚಿನ ನಗರಗಳಲ್ಲಿ ಏಷ್ಯಾ ಭಾಗದ ನಗರಳದ್ದು ಪ್ರಮುಖ ಸ್ಥಾನ.

ಸತತ ನಾಲ್ಕು ವರ್ಷಗಳಿಂದ ಸಿಂಗಾಪುರ ವಿಶ್ವದ ದುಬಾರಿ ನಗರವೆನಿಸಿದ್ದು, ಹಾಂಗ್ ಕಾಂಗ್ ಹಾಗೂ ಜೂರಿಕ್ ನಂತರದ ಸ್ಥಾನದಲ್ಲಿವೆ.

ಆಹಾರ, ನೀರು, ಉಡುಗೆ, ಸಂಚಾರ ಮನೆ ಬಾಡಿಗೆ ಸೇರಿದಂತೆ 160 ಉತ್ಪನ್ನ ಹಾಗೂ ಸೇವೆಗಳ ದರ ಗಮನಿಸಿ ಜೀವನ ನಿರ್ವಹಣಾ ವೆಚ್ಚದ ಸಮೀಕ್ಷೆ ನಡೆಸಲಾಗಿದೆ.

ಕಡಿಮೆ ಖರ್ಚಿನ ನಗರಗಳು:
1. ಆಲ್ಮಟಿ
2. ಲಾಗೋಸ್
3. ಬೆಂಗಳೂರು
4. ಕರಾಚಿ
5. ಅಲ್ಜೀರ್ಸ್
6. ಚೆನ್ನೈ
7. ಮುಂಬೈ
8. ಕೀವ್
9. ಬುಚಾರೆಸ್ಟ್
10. ನವದೆಹಲಿ

ದುಬಾರಿ ನಗರಗಳು:
1. ಸಿಂಗಾಪುರ
2. ಹಾಂಗ್ ಕಾಂಗ್
3. ಜುರಿಕ್
4. ಟೋಕಿಯೊ
5. ಒಸಾಕಾ
6. ಸಿಯೋಲ್
7. ಜಿನಿವಾ
8. ಪ್ಯಾರಿಸ್
9. ನ್ಯೂಯಾರ್ಕ್
10. ಕೋಪನ್‌ಹೇಗನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.