ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊಗಳ ಆಟಕ್ಕೆ ಬಿತ್ತು ಕಡಿವಾಣ

ದಾಖಲಾತಿ ಇಲ್ಲದ ವಾಹನ ವಶಕ್ಕೆ ಪಡೆದ ಪೊಲೀಸರು; ಸಂತ್ರಸ್ತರಿಗೆ ಸಹಾಯಧನ ವಿತರಣೆ
Last Updated 21 ಮಾರ್ಚ್ 2017, 10:40 IST
ಅಕ್ಷರ ಗಾತ್ರ

ಮೊಳಕಾಲ್ಮುರು:  ‘ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು’ ಎಂಬಂತೆ ತಾಲ್ಲೂಕಿನ ರಾಂಪುರದ ಪೊಲೀಸರು ಕೊನೆಗೂ ಎಚ್ಚೆತ್ತು ಕೊಂಡಿ ದ್ದಾರೆ. ಸರಣಿ ಅಪಘಾತದಲ್ಲಿ 14 ಮಂದಿ ಮೃತಪಟ್ಟ ಬಳಿಕ ದಾಖಲೆಗಳಿಲ್ಲದೇ ಓಡಾಡುತ್ತಿದ್ದ ಆಟೊಗಳ ಆಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಪೊಲೀಸರು ಏಕಾಏಕಿ ಕ್ರಮಕ್ಕೆ ಮುಂದಾಗಿರುವುದರಿಂದ ಹೆಚ್ಚಿನ ಆಟೊಗಳು ರಸ್ತೆಗೆ ಇಳಿದಿಲ್ಲ. ವಾರದ ಸಂತೆ ದಿನವಾದ ಸೋಮವಾರ ಆಟೊಗಳಿಲ್ಲದೆ ಹಾಗೂ ಬದಲಿ ವ್ಯವ ಸ್ಥೆಯೂ ಇಲ್ಲದೇ ಸುತ್ತಲಿನ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸಿದರು.

ಸಿಪಿಐ ಶ್ರೀಧರ ಶಾಸ್ತ್ರಿ ಹಾಗೂ ಪಿಎಸ್‌ಐ ಲೋಕೇಶ್‌್ ನೇತೃತ್ವದಲ್ಲಿ ಭಾನುವಾರ ಪ್ರತ್ಯೇಕವಾಗಿ ಕಾರ್ಯಾ ಚರಣೆ ನಡೆಸಿ ಅಗತ್ಯ ದಾಖಲೆಗಳು ಇಲ್ಲದ 20ಕ್ಕೂ ಹೆಚ್ಚು ಆಟೊ ಹಾಗೂ ‘ಟಾಟಾ ಏಸ್‌’ಗಳನ್ನು ವಶಕ್ಕೆ ಪಡೆದು ಠಾಣೆ ಆವರಣಕ್ಕೆ ತಂದು ನಿಲ್ಲಿಸಿದ್ದಾರೆ. ಸಾರಿಗೆ ಅಧಿಕಾರಿಗಳೂ ತಪಾಸಣೆ ನಡೆಸಬಹುದು ಎಂದು ಆತಂಕದಿಂದ ಬಹುತೇಕ ಆಟೊಗಳು ಸೋಮವಾರ ರಸ್ತೆಗೆ ಇಳಿದಿಲ್ಲ.

ಮೀಟರ್ ಬೇಡ:  ಸ್ಥಳೀಯ ಆಟೊ ಚಾಲಕರ ಸಂಘದ ಉಪಾಧ್ಯಕ್ಷ ಸಲೀಂ ಅಹಮದ್‌ ಮಾತನಾಡಿ, ‘ರಾಂಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ 400ಕ್ಕೂ ಹೆಚ್ಚು ಪ್ಯಾಸೆಂಜರ್‌ ಹಾಗೂ ಲಗೇಜ್‌ ಆಟೊಗಳಿವೆ. ಇದರಲ್ಲಿ ಅನೇಕರು ಪರವಾನಗಿ ಹಾಗೂ ದಾಖಲಾತಿ ಹೊಂದಿಲ್ಲ. ನಮ್ಮ ಆಟೊಗಳು ಪಟ್ಟಣ ವ್ಯಾಪ್ತಿ ಪರವಾನಗಿ ಪಡೆಯಬೇಕಾಗಿಲ್ಲ. 15 ಕಿ.ಮೀ ದೂರ ಸಂಚರಿಸುವ ಪರವಾನಗಿ ಹೊಂದಿರುವ ಕಾರಣ ಮೀಟರ್‌ ಕಡ್ಡಾಯ ಕಾನೂನು ಬದ ಲಾಯಿಸಬೇಕು. ಇದರಿಂದಾಗಿ ದಾಖಲೆ ಸಲ್ಲಿಸಲು ತೊಂದರೆಯಾಗಿದೆ. ಇದನ್ನು ಸರಿಪಡಿಸಿದರೆ ತಿಂಗಳ ಒಳಗೆ ಬಹುತೇಕ ಎಲ್ಲ ಆಟೊಗಳು ದಾಖಲಾತಿ ಪೂರ್ಣ ಮಾಡಿಕೊಳ್ಳಲು ಸಿದ್ಧರಿದ್ದಾರೆ’ ಎಂದರು.

‘ಈಗ ಹಳ್ಳಿಗಳಲ್ಲಿ ಜನರು ಗುಳೆ ಹೋಗಿ ಬಿಕೊ ಎನ್ನುತ್ತಿದೆ. ಮೊದಲಿನಷ್ಟು ಪ್ರಯಾಣಿಕರು ಸಿಗುತ್ತಿಲ್ಲ. ಈಗ ನಡೆದಿರುವ ಅಪಘಾತದಲ್ಲಿ ನಮ್ಮದೇನೂ ತಪ್ಪಿಲ್ಲ, ಘಟನೆಯಿಂದ ನಮ್ಮ ಹೊಟ್ಟೆ ಮೇಲೆ ಹೊಡೆದಂತಾಗಿದೆ. ನಾವು ಸಂಚಾರ ನಿಯಮವನ್ನು ಪಾಲಿ ಸುತ್ತೇವೆ’ ಎಂದು ಅವರು ಹೇಳಿದರು.

ಸಹಾಯಧನ:  ಅಪಘಾತದಲ್ಲಿ ಮೃತಪಟ್ಟ ತಾಲ್ಲೂಕಿನ ನಾಗಸಮುದ್ರದ ಮೂವರು, ಹುಚ್ಚಂಗಿದುರ್ಗದ ಮೂವರು, ಜಾಗೀರಬುಡ್ಡೇನಳ್ಳಿಯ ಮೂವರು ಹಾಗೂ ವಡೇರಹಳ್ಳಿಯ ಒಬ್ಬ ಬಾಲಕಿ ಸೇರಿದಂತೆ 10 ಕುಟುಂಬದ ಸದಸ್ಯರಿಗೆ ಕಾಂಗ್ರೆಸ್‌ನಿಂದ ತಲಾ ₹ 5 ಸಾವಿರ ಸಹಾಯಧನವನ್ನು ಸೋಮವಾರ ವಿತರಿಸಲಾಯಿತು.  ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯ ಮುಂಡ್ರಗಿ ನಾಗರಾಜ್‌, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ದಡಗೂಡು ಮಂಜುನಾಥ್‌, ಮುಖಂಡರಾದ ನಾಗಸಮುದ್ರ ಗೋವಿಂದಪ್ಪ, ಹೊನ್ನೂರಪ್ಪ, ಕೊಂಡಾ ಪುರ ಪರಮೇಶ್ವರಪ್ಪ, ಜಗದೀಶ್‌, ಅಡವಿ ಮಾರಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT