ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಾಲ ಕುರಿತ ತಪ್ಪು ಕಲ್ಪನೆಗಳು

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಗೃಹ ಸಾಲ ಪಡೆಯುವುದು ಮನೆಕಟ್ಟುವವರ ಮತ್ತು ಮನೆ ಕೊಳ್ಳುವವರ ಎದುರಿಗಿರುವ ದೊಡ್ಡ ಸವಾಲು ಆಗಿರುತ್ತದೆ. ಮನೆ ಸ್ವಂತದಾಗಿಸಿಕೊಳ್ಳಬೇಕು ಎಂಬ ಕನಸನ್ನು ನನಸು ಮಾಡಲು ಗೃಹ ಸಾಲವು ಪರ್ಯಾಯ ಮಾರ್ಗವಾಗಿದೆ. ಒಳ್ಳೆಯ ಆಸ್ತಿಗಾಗಿ ಹುಡುಕಾಟ ನಡೆಸುವುದು ಮತ್ತು ಅದಕ್ಕೆ ಸರಿಯಾದ ಗೃಹಸಾಲದ ಮಾರ್ಗ ಆಯ್ಕೆ ಮಾಡಿ ಕೊಳ್ಳುವುದು ಮನೆ ಖರೀದಿದಾರರು ಎದುರಿಸುವ ಪ್ರಮುಖ ಸಮಸ್ಯೆಗಳಾಗಿರುತ್ತವೆ.

ಕಡಿಮೆ ಅವಧಿಯ ಸಾಲ ಮುಂಚಿತ  ಮರುಪಾವತಿಗೆ ಕಾರಣ: ಹೆಚ್ಚಿನ ಸಾಲಗಾರರು ಕಡಿಮೆ ಅವಧಿಯ ಮರುಪಾವತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಹೆಚ್ಚಿನ ಬಡ್ಡಿ ಭರಿಸುವುದು ತಪ್ಪಿಸುವುದು.  ಇದರಿಂದಾಗಿ ಪ್ರತಿ ತಿಂಗಳ ಕಂತು (ಇಎಂಐ) ಹೆಚ್ಚಾಗುತ್ತದೆ. ಅದಕ್ಕಾಗಿ ಸಾಲಗಾರ ಹೆಚ್ಚು ಹಣ ಹೊಂದಿಸಬೇಕಾಗುತ್ತದೆ. ಸಾಲ ಪಡೆದವರು ತಮ್ಮ ಬಜೆಟ್‌ ಅನ್ನು ಸರಿಯಾದ ರೀತಿಯಲ್ಲಿ ಕಾರ್ಯಗರತಗೊಳಿಸದಿದ್ದರೆ ತೊಂದರೆಗೆ ಸಿಲುಕುತ್ತಾರೆ.

ಇದರಿಂದ ಇನ್ನೊಂದು ತೊಂದರೆಯೂ ಇದೆ. ಅದು ಏನೆಂದರೆ, ಸರಿಯಾದ ಸಮಯಕ್ಕೆ ಇಎಂಐ ಪಾವತಿ ಮಾಡಲೇಬೇಕು. ಆದಾಯದಲ್ಲಿ ಏರುಪೇರು ಇದ್ದರಂತೂ ಮತ್ತಷ್ಟು ತೊಂದರೆ ಖಚಿತ. ಇಂತಹ ಸಂದರ್ಭದಲ್ಲಿ ಸಾಲಗಾರ ಸಾಲಪಡೆದವರಿಗೆ ಸಾಲದ ಅವಧಿಯನ್ನು ವಿಸ್ತರಿಸಲು ಕೋರಬೇಕು. ಆಗ ಹೆಚ್ಚಿನ ವೆಚ್ಚ ಭರಿಸಬೇಕಾಗುತ್ತದೆ.

ಕಡಿಮೆ ಬಡ್ಡಿ ಪ್ರಮಾಣದ ಅರ್ಥ ಕಡಿಮೆ ವೆಚ್ಚ: ಸಾಮಾನ್ಯವಾಗಿ ಎಲ್ಲರಲ್ಲೂ  ಇದೇ ರೀತಿ ತಪ್ಪುಕಲ್ಪನೆ ಇದ್ದೇ ಇರುತ್ತದೆ. ಆದರೆ ಇದು ಎಲ್ಲಾ ಸಂದರ್ಭದಲ್ಲಿ ಕಡಿಮೆ ಇಎಂಐಗೆ ಕಾರಣವಾಗುತ್ತದೆ ಎನ್ನಲಾಗದು. ಆಗ ಸಾಲಗಾರರು ಸಾಲದ ದಾಖಲೆ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕಾಗುತ್ತದೆ. ವಿಶೇಷವಾಗಿ ಸಾಲದ  ನಿಯಮ ಮತ್ತು ಕರಾರನ್ನು ನೋಡಬೇಕು. ಇದರಲ್ಲಿ ಎಲ್ಲ ರೀತಿಯ ಶುಲ್ಕ, ವೆಚ್ಚ ಹಾಗೂ ನೀವು ಪಾವತಿಸಬೇಕಾದ ಅಧಿಕ ಹಣದ ಬಗ್ಗೆ ಮಾಹಿತಿ ಇರುತ್ತದೆ. ಆದ್ದರಿಂದ ಸಾಲಗಾರರ  ಹಣಕಾಸು ಪರಿಸ್ಥಿತಿ ನೋಡಿ ಕೊಂಡೇ ಯಾವ ರೀತಿಯ ಯೋಜನೆ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸಬೇಕು.

ಬಡ್ಡಿದರದಲ್ಲಿನ ಹೆಚ್ಚಳದಿಂದಾಗಿ ಇಎಂಐ ಹೆಚ್ಚಳ: ಬಡ್ಡಿದರದಲ್ಲಿ ಹೆಚ್ಚಳವಾದರೆ ಅದು ಇಎಂಐ ಹೆಚ್ಚಳಕ್ಕೆ ದಾರಿಯಾಗುತ್ತದೆ ಎಂದು ಸಾಲಪಡೆದವರು ಚಿಂತೆ ಮಾಡುತ್ತಾರೆ. ಆದರೆ ಇದು ತಪ್ಪುಕಲ್ಪನೆ.    ಬಡ್ಡಿದರದಲ್ಲಿ ಹೆಚ್ಚಳವಾದಂತೆ ಬ್ಯಾಂಕ್‌ ಇಲ್ಲವೇ ಹಣಕಾಸು ಸಂಸ್ಥೆಗಳು  ಸಾಲದ ಅವಧಿಯನ್ನು ಇಎಂಐಯನ್ನು ಗಮನದಲ್ಲಿಟ್ಟುಕೊಂಡು ಬದಲಿಸಲು ಮುಂದಾಗುವುದಿಲ್ಲ.

ಇದರಿಂದ ಸಾಲಪಡೆದವರು ಅಷ್ಟೇ ಇಎಂಐ ಅನ್ನು ಹೆಚ್ಚಿನ ಅವಧಿಗೆ ಪಾವತಿಸುತ್ತಾರೆ. ಒಂದು ವೇಳೆ ಸಾಲಪಡೆದವರು ಸಾಲದ ಅವಧಿಯಲ್ಲಿ ಯಾವುದೇ ಬದಲಾವಣೆ ಬಯಸದೇ ಇದ್ದರೆ ಅವರು ಹೆಚ್ಚಿನ ಇಎಂಐ ಆದರೂ ಪರವಾಗಿಲ್ಲ ಎಂದು ಸಂಬಂಧಿಸಿದ ಬ್ಯಾಂಕ್‌ಗಳಿಗೆ ತಿಳಿಸಬಹುದು.

ಸ್ಥಿರ ಬಡ್ಡಿದರ ಮತ್ತು ಬದಲಾಗುವ ದರ: ಗೃಹಸಾಲಗಳಿಗೆ ಸಂಬಂಧಿಸಿದಂತೆ ಸ್ಥಿರ ಬಡ್ಡಿದರ ಮತ್ತು ಬದಲಾಗುವ ಬಡ್ಡಿದರದ ಬಗ್ಗೆ ಗ್ರಾಹಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಆದರೆ, ಈ ಎರಡರಿಂದಲೂ ಸಾಲಪಡೆದವರಿಗೆ ಲಾಭಗಳು ಇವೆ. ಕಡಿಮೆ ಬಡ್ಡಿದರದಲ್ಲಿ ಸಾಲಗಾರರಿಗೆ ಬದಲಾಗುವ ಬಡ್ಡಿದರಲ್ಲಿ ಲಾಭವಿದೆ. ಏಕೆಂದರೆ ಇದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಅದು ರೆಪೊ ದರ ಕಡಿತ ಮತ್ತು ಶಾಸನಬದ್ಧ ನಗದು ಅನುಪಾತ ಇತ್ಯಾದಿಗಳ ಮೇಲೆ ಅವಲಂಬಿಸಿದೆ.  ಹೆಚ್ಚಿನ ಬಡ್ಡಿ ದರವಿರುವ ಅವಧಿಯಲ್ಲಿ ಸ್ಥಿರ ಬಡ್ಡಿದರವಿದ್ದರೆ ಹೆಚ್ಚಿನ  ನಷ್ಟವಾಗುವುದಿಲ್ಲ. ಸಾಲಪಡೆದ ಅವಧಿಯಲ್ಲಿ ಎಷ್ಟು ಬಡ್ಡಿ ಪಾವತಿ ಮಾಡಬೇಕು ಎಂಬ ನಿಯಮಕ್ಕೆ ಬದ್ಧರಾಗಿದ್ದರೋ ಅಷ್ಟೇ ಬಡ್ಡಿ ಪಾವತಿ ಮಾಡುತ್ತಾರೆ. ಆದ್ದರಿಂದ ಸ್ಥಿರ ಬಡ್ಡಿದರ ಇಲ್ಲವೇ ಬದಲಾಗುವ ಬಡ್ಡಿದರದ ಆಯ್ಕೆಯನ್ನು ಗ್ರಾಹಕರು ಜಾಗರೂಕತೆಯಿಂದ ಮಾಡಬೇಕಾಗುತ್ತದೆ.

ಅವಧಿ ಮುಗಿಯುವ ಮೊದಲೇ ಮುಂಚಿತ ಪಾವತಿ ದಂಡ: ಇದನ್ನು ಕೆಲ ಬ್ಯಾಂಕ್‌ಗಳು ಈ  ಹಿಂದೆ ಅನುಸರಿಸುತ್ತಿದ್ದವು. ಆದರೆ, ಈಗ ಇದು ಚಾಲ್ತಿಯಲ್ಲಿಲ್ಲ. ಭಾರತೀಯ ರಿಸರ್ವ್‌ ಬ್ಯಾಂಕ್ ಮತ್ತು ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌(ಎನ್‌ಎಚ್‌ಬಿ) ಹೊಸ ನಿಯಮ ಜಾರಿಗೆ ತಂದ ನಂತರ ಹಳೆ ಪದ್ಧತಿ ಕೈಬಿಡಲಾಯಿತು.

ಕೊನೆಗೆ ಒಂದಷ್ಟು ಸಲಹೆ: ಹತ್ತು ಹಲವು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಸಾಲ ಯೋಜನೆಗಳನ್ನು ಗ್ರಾಹಕರಿಗೆ ತಲುಪಿಸಲು ಸ್ಪರ್ಧಾತ್ಮಕ ಬಡ್ಡಿದರವನ್ನು ವಿಧಿಸುತ್ತವೆ. ಅತ್ಯುತ್ತಮ ಗೃಹಸಾಲವನ್ನು ಆಯ್ಕೆ ಮಾಡಿಕೊಳ್ಳುವುದು ಇದು ಸವಾಲಿನ ಕೆಲಸ. ಈ ಸಂಬಂಧ ಎದುರಾಗುವ ತಪ್ಪುಕಲ್ಪನೆಗಳನ್ನು ಇಲ್ಲವೇ ಕಟ್ಟುಕಥೆಗಳನ್ನು ನಿವಾರಿಸಿಕೊಳ್ಳುವುದು ಮುಖ್ಯ. ಕನಸಿನ ಮನೆಯನ್ನು ತಮ್ಮದಾಗಿಸಿಕೊಳ್ಳಲು ಬಯಸುವವರು ಮೊದಲು ತಮ್ಮಲ್ಲಿ ಮೂಡಿದ ತಪ್ಪು ತಿಳಿವಳಿಕೆಯನ್ನು ದೂರ ಮಾಡಿಕೊಳ್ಳಲು ಮುಂದಾಗಬೇಕು.

*
-ಹರ್ಷಿಲ್‌ ಮೆಹ್ತಾ, ಸಿಇಒ ಡಿಎಚ್‌ಎಫ್‌ಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT