ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 22–3–1967

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಹರಿಯಾಣಕ್ಕೆ ಸಂಯುಕ್ತ ದಳ ಸರ್ಕಾರ
ನವದೆಹಲಿ, ಮಾ. 21–  ವಿರೋಧ ಪಕ್ಷಗಳು ಮತ್ತು ಭಿನ್ನಮತೀಯ ಕಾಂಗ್ರೆಸ್ಸಿಗರು ರಚಿಸಿಕೊಂಡಿರುವ ಹರಿಯಾನ ಸಂಯುಕ್ತ ದಳಕ್ಕೆ ರಾಜ್ಯ ವಿಧಾನಸಭೆಯಲ್ಲಿ ಬಹುಮತವಿದೆಯೆಂದು ಇಲ್ಲಿ ಇಂದು ಒಪ್ಪಿಕೊಂಡ ಹರಿಯಾನದ ಮುಖ್ಯಮಂತ್ರಿ ಭಗವತ್‌ ದಯಾಳ್‌ ಶರ್ಮರವರು, ನಾಳೆ ತಮ್ಮ ಸಂಪುಟದ ರಾಜಿನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸುವುದಾಗಿ ತಿಳಿಸಿದರು. ಈಗ ಸರ್ಕಾರ ರಚಿಸುವುದು ಸಂಯುಕ್ತ ರಂಗಕ್ಕೆ ಸೇರಿದ ಕೆಲಸವಾಗಿದೆಯೆಂದು ಅವರು ನುಡಿದರು.
 
ಗಡಿ ಆಯೋಗದಿಂದ ಸಾಕ್ಷ್ಯ ಸಂಗ್ರಹ ಕಾರ್ಯಾರಂಭ
ಕಾರವಾರ, ಮಾ. 21– ಮೈಸೂರು– ಮಹಾರಾಷ್ಟ್ರ, ಮೈಸೂರು–ಕೇರಳ ಗಡಿವಿವಾದ ಕುರಿತು ಪರಿಶೀಲಿಸಲು ನೇಮಕಗೊಂಡಿರುವ ಶ್ರೀ ಮೆಹರ್‌ ಚಂದ್‌ ಮಹಾಜನ್‌ ಅವರ ಏಕಸದಸ್ಯ ಗಡಿ ಆಯೋಗವು ಇಂದು ಇಲ್ಲಿನ ಜಿಲ್ಲಾ ಕೋರ್ಟ್‌ನಲ್ಲಿ ಸಾಕ್ಷ್ಯ ಸಂಗ್ರಹ ಕಾರ್ಯವನ್ನು ಆರಂಭಿಸಿತು.
 
ಗಡಿ ಆಯೋಗದ ಕಾರ್ಯದರ್ಶಿ ಶ್ರೀ ಎಸ್‌. ನಾರಾಯಣಸ್ವಾಮಿ ಅವರೊಂದಿಗೆ ನಿನ್ನೆ ಆಗಮಿಸಿದ ಶ್ರೀ ಮಹಾಜನ್‌ ಅವರನ್ನು ಬೆಳಗಾವಿ ವಿಭಾಗಾಧಿಕಾರಿ ಶ್ರೀ ಜಿ.ಎಸ್‌. ಶ್ರೀನಿವಾಸನ್‌ ಅವರು ಗೋವ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಕಾರವಾರಕ್ಕೆ ಕರೆ ತಂದರು.
 
ಭಾರತಕ್ಕೆ ಚೀನದ ಅಪಾಯ ಇದ್ದೇ ಇದೆ– ಚಾಗಲಾ
ನವದೆಹಲಿ, ಮಾ. 21– ‘ಚೀನದ ಅಪಾಯ ಸದಾ ಇದ್ದೇ ಇದೆ’ ಎಂದು ವಿದೇಶ ವ್ಯವಹಾರ ಖಾತೆಯ ಸಚಿವ ಶ್ರೀ ಎಂ.ಸಿ. ಚಾಗಲಾ ಇಂದು ರಾಜ್ಯಸಭೆಗೆ ತಿಳಿಸಿದರು.
‘ಸಾಂಸ್ಕೃತಿಕ ಕ್ರಾಂತಿಯು ಭಾರತಕ್ಕೆ ಸಂಬಂಧಿಸಿದಂತೆ ಚೀನದ ನೀತಿಯಲ್ಲಿ ಯಾವುದೇ ವ್ಯತ್ಯಾಸವನ್ನು ಉಂಟು ಮಾಡಿಲ್ಲ’ ಎಂದು ಸೀತಾರಾಮ್‌ ಜೈಪೂರಿಯ ಅವರಿಗೆ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT