ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ವಹಿವಾಟು ಮಿತಿ ₹2 ಲಕ್ಷಕ್ಕೆ ಇಳಿಕೆ

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ನಗದು ರೂಪದಲ್ಲಿ ನಡೆಸುವ ವಹಿವಾಟಿನ ಮಿತಿಯನ್ನು ಕೇಂದ್ರ ಸರ್ಕಾರವು ₹ 3 ಲಕ್ಷದಿಂದ ₹ 2 ಲಕ್ಷಕ್ಕೆ ಇಳಿಸಿದೆ.
 
ಫೆಬ್ರುವರಿ 1ರಂದು ಮಂಡಿಸಿದ್ದ 2017–18ರ ಹಣಕಾಸು ವರ್ಷದ ಬಜೆಟ್‌ನಲ್ಲಿ ನಗದು ರೂಪದಲ್ಲಿ ನಡೆಸುವ ವಹಿವಾಟಿನ ಮಿತಿಯನ್ನು ₹ 3 ಲಕ್ಷಕ್ಕೆ ಮಿತಗೊಳಿಸಲಾಗಿತ್ತು. 
 
ನಗದನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವುದನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್‌ 1ರಿಂದ  ಈ ನಿರ್ಬಂಧ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
 
ತಿದ್ದುಪಡಿ: ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿದ ಹಣಕಾಸು ಮಸೂದೆಯಲ್ಲಿ ಈ ಮಿತಿ ಇಳಿಕೆಯೂ ಸೇರಿದಂತೆ  40 ತಿದ್ದುಪಡಿಗಳನ್ನು ಸೂಚಿಸಲಾಗಿದೆ.
 
 ಕಂಪನಿ ಕಾಯ್ದೆ, ಉದ್ಯೋಗಿಗಳ ಭವಿಷ್ಯ ನಿಧಿ, ಕಳ್ಳಸಾಗಣೆ ಮತ್ತು ವಿದೇಶ ವಿನಿಮಯ ಕಾಯ್ದೆ, ಟ್ರಾಯ್‌ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆಗಳಲ್ಲಿ ತಿದ್ದುಪಡಿ ಮಾಡಲಾಗಿದೆ.

ಸಣ್ಣ – ಪುಟ್ಟ ನ್ಯಾಯಮಂಡಳಿಗಳನ್ನು ವಿಲೀನಗೊಳಿಸುವ ಮೂಲಕ ನ್ಯಾಯಮಂಡಳಿಗಳು ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸುವ ಉದ್ದೇಶ ಹೊಂದಲಾಗಿದೆ ಎಂದು  ಸರ್ಕಾರ ತಿಳಿಸಿದೆ. ತಿದ್ದುಪಡಿಗಳಿಗೆ ಪ್ರತಿಪಕ್ಷಗಳು ಸಲ್ಲಿಸಿದ ಆಕ್ಷೇಪಗಳನ್ನು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್‌ ತಿರಸ್ಕರಿಸಿದರು. 
**
₹ 2 ಲಕ್ಷಕ್ಕಿಂತ ಹೆಚ್ಚಿನ  ವಹಿವಾಟನ್ನು ನಗದು ರೂಪದಲ್ಲಿ ಮಾಡಿದರೆ  ಅಷ್ಟೇ ಮೊತ್ತದ ದಂಡ ವಿಧಿಸಲಾಗುವುದು
ಹಸ್ಮುಖ ಆಧಿಯಾ, ರೆವೆನ್ಯೂ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT