ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತಕ್ಕೆ ಐದನೇ ಬೌಲರ್ ಕೊರತೆ’

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಂಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಐದನೇ ಬೌಲರ್‌ ಕೊರತೆ ಅನುಭವಿಸಿತು ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ರಾಂಚಿಯಲ್ಲಿ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯವು ಡ್ರಾದಲ್ಲಿ ಮುಕ್ತಾಯ ವಾಗಿತ್ತು. ವಿರಾಟ್ ಕೊಹ್ಲಿ ಬಳಗದ ನಾಲ್ವರು ಬೌಲರ್‌ಗಳು ಕೊನೆಯ ದಿನ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ.  ಈ ಕುರಿತು ಮಂಗಳವಾರ ಎನ್‌ಡಿಟಿವಿ ಕಾರ್ಯಕ್ರಮದಲ್ಲಿ  ಗಾವಸ್ಕರ್ ಮಾತನಾಡಿದ್ದಾರೆ.

‘ರಾಂಚಿಯಲ್ಲಿ ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು.  ಇಬ್ಬರೂ ಸ್ಪಿನ್ನರ್‌ಗಳೂ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಿದ್ದರು. ಆದರೆ ಐದನೇ ಬೌಲರ್‌ ಇದ್ದಿದ್ದರೆ ಪಂದ್ಯ ದ ಚಿತ್ರಣ ಬದಲಾಗುತ್ತಿತ್ತು’ ಎಂದರು.

‘ವೃದ್ಧಿಮಾನ್ ಸಹಾ, ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ಬ್ಯಾಟಿಂಗ್‌ನಲ್ಲಿ  ಉತ್ತಮ ಕಾಣಿಕೆ ನೀಡುತ್ತಿದ್ದಾರೆ.  ಆದ್ದರಿಂದ ಮುಂದಿನ ಪಂದ್ಯದಲ್ಲಿ  ಆರು ಜನ ಪರಿಣತ ಬ್ಯಾಟ್ಸ್‌ಮನ್ ಮತ್ತು ಐವರು ಬೌಲರ್‌ಗಳೊಂದಿಗೆ  ಆಡುವುದು ಸೂಕ್ತ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT