‘ರಾಜ್ಯ ಅಭೂತಪೂರ್ವ ಬರದ ಹೊಸ್ತಿಲಿನಲ್ಲಿದೆ.’ ಈ ಮಾತು ಕೇಳತೊಡಗಿ ಎಷ್ಟು ವರ್ಷ ಸಂದಿದೆ! ಜಲಕ್ಷಾಮ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಮಳೆಯಾಧಾರಿತ ಕೃಷಿ ನಂಬಿದವರ ಬದುಕು ಮೂರಾಬಟ್ಟೆಯಾಗಿದೆ. ಮಲೆನಾಡೂ ‘ಬರಬಾಧಿತ’ ಹಣೆಪಟ್ಟಿ ಅಂಟಿಸಿಕೊಂಡಿದೆ.

ಇವೆಲ್ಲದರ ನಡುವೆ ಬನ್ನಿ ಹುನಗುಂದಕ್ಕೆ. ಸಿಕ್ಕ ಮಳೆಯಲ್ಲೇ ಈ ಮಂದಿ ಹೊಟ್ಟೆ ತುಂಬುವಷ್ಟು ಬೆಳೆಯುತ್ತಿದ್ದಾರೆ. ‘ಅರ ಬರದಾಗ ಎಂಟಾಣೆ ಬೆಳೆ’ ಪಡೆಯುತ್ತಿದ್ದಾರೆ. ಮಳೆ ಬಂದಾಗ ಇವರ ಅನುಮತಿ ಇಲ್ಲದೆ ನೀರು ಹೊರ ಹೋಗದಂತೆ ಒಡ್ಡು, ಬದು ಕಟ್ಟಿದ್ದಾರೆ. ಹೊಲವನ್ನು ಕೆರೆಯ ಅಂಗಳದಂತೆ ಮಾಡಿದವರೂ ಇದ್ದಾರೆ.

ವರ್ಷಕ್ಕೆಷ್ಟು ಮಳೆ ಎನ್ನುವುದು ಮುಖ್ಯವೇ ಅಲ್ಲ. ಬಿದ್ದದ್ದರಲ್ಲಿ ನಾವೆಷ್ಟು ಹಿಡಿಯುತ್ತೇವೆ ಎನ್ನುವುದರ ಮೇಲೆಯೇ ನೀರ ಭವಿಷ್ಯ ಆಧರಿಸಿದೆ. ಬ್ಯಾಂಕ್ ವ್ಯವಹಾರದಂತೆಯೇ ನೀರಿನದೂ ಕೂಡಾ. ಠೇವಣಿ ಇಡದೆ ಹೊರತೆಗೆಯಲು ಬಾರದು.

ರಾಜಸ್ತಾನದಲ್ಲಿ ಲಾಪೋಡಿಯಾ ಎಂಬ ಹಳ್ಳಿಯಿದೆ. ಮೂರ್ನಾಲ್ಕು ವರ್ಷ ನಾನೂರು ಮಿ.ಮೀ. ಗಿಂತಲೂ ಕಡಿಮೆ ಮಳೆ ಸುರಿದ ಉದಾಹರಣೆ ಅಲ್ಲಿದೆ. ಅಲ್ಲಿನ ಜನ ಕಂಗೆಟ್ಟಿಲ್ಲ, ಗುಳೆ ಹೋಗಿಲ್ಲ, ಆತ್ಮಹತ್ಯೆಯನ್ನಂತೂ ಮಾಡೇ ಇಲ್ಲ.

ಜಲ್, ಜಮೀನ್, ಜಂಗಲ್ಗಳ ನಡುವೆ ಅತಿ ನಿಕಟ ಸಂಬಂಧವಿದೆ. ನೀರುಳಿಸಬೇಕಾದರೆ ಮೇಲ್ಮಣ್ಣನ್ನೂ ಕಾಪಾಡಬೇಕು. ಭೂಮಿಯೇ ನಮ್ಮ ಜಲಪಾತ್ರೆ, ಇವೆಲ್ಲವೂ ಸುಸ್ಥಿತಿಯಲ್ಲಿರಬೇಕಾದರೆ ಮೇಲೆ ದಟ್ಟವಾದ ಹಸಿರು ಗೊಡೆಬೇಕು, ಅದುವೇ ಅರಣ್ಯ.

‘ಮಳೆ ಕಡಿಮೆ’ ಎಂದು ಪ್ರಕೃತಿಯನ್ನು ದೂರುವಾಗ ನಾವು ಅನೂಕುಲಕರವಾಗಿ ಮರೆಯುವುದು ನಮ್ಮ ಪಾಪಕೃತ್ಯಗಳನ್ನು. ‘ಎಷ್ಟು ಕಾಡು ಕಡಿದಿದ್ದೇವೆ’, ‘ಲಂಗು ಲಗಾಮಿಲ್ಲದೆ ಕೊಳವೆಬಾವಿ ಕೊರೆದಿದ್ದೆಷ್ಟು’, ‘ಮನೆ–ಹೊಲಗಳಲ್ಲಿ ನೀರು ಪೋಲು ಮಾಡಿದ್ದೆಷ್ಟು’, ‘ಕಾಡನ್ನು ಬೆಂಕಿಗೆ ಕೊಟ್ಟಿದ್ದೆಷ್ಟು’ ಎನ್ನುವ ಪ್ರಶ್ನೆಗಳನ್ನು ನಾವು ಎಂದೂ ಎತ್ತುವುದೇ ಇಲ್ಲ.

ರಾಜ್ಯ ಸರ್ಕಾರ ಸಾಮೂಹಿಕ ಜಲಜಾಗೃತಿಯ ವಿಚಾರದಲ್ಲಿ ದಕ್ಷಿಣ ಭಾರತದಲ್ಲೇ ಅತಿ ಹಿಂದೆ ಉಳಿದಿದೆ. ಕಾಡುಗಳು ರೆಸಾರ್ಟುಗಳಾಗುತ್ತಿವೆ, ಗಣಿಗಳು ಬದುಕನ್ನೇ ಹಿಂಡುತ್ತಿವೆ, ಕೆರೆಗಳನ್ನು ಮುಚ್ಚುವುದರಲ್ಲಿ ದಾಖಲೆ ಸಾಧಿಸಿದ್ದಾಗಿದೆ.

ನೀರ ನಿಶ್ಚಿಂತೆಯ ಕೀಲಿಕೈ ಇರುವುದು ಕೊಳವೆಬಾವಿಗಳಲ್ಲೋ, ಮೋಡ ಬಿತ್ತನೆಯಲ್ಲೋ, ಉಪ್ಪು ನೀರು ಶುದ್ಧೀಕರಣದಲ್ಲೋ ಅಲ್ಲ. ಅದು ನಂನಮ್ಮ ಮನೆಯ ನಲ್ಲಿಗಳಿಂದಾರಂಭಿಸಿ ಹಳ್ಳ, ಹೊಳೆ, ಕೆರೆ ಕುಂಟೆ, ಕಲ್ಯಾಣಿಗಳ ಸುಸ್ಥಿತಿಯಲ್ಲಿದೆ. ನಾವಿನ್ನೂ ಮೈಗೂಡಿಸದ ಜಲ ಸಾಕ್ಷರತೆಯಲ್ಲಿದೆ.

‘ಬರ’ದ ಭೂತವನ್ನು ಹಿಮ್ಮೆಟ್ಟಿಸುವುದು ನಮ್ಮೆಲ್ಲರ ಕೈಯಲ್ಲಿದೆ. ಬೀಳುವ ಮಳೆಯನ್ನು ಇಳೆಗಿಳಿಸಿ, ಹೆಚ್ಚೆಚ್ಚು ಮರ ನೆಟ್ಟು, ಕಾಡು ಉಳಿಸಿ ಈ ಕೆಲಸ ನಾವು ಸಾಧಿಸುವುದು ಅಸಾಧ್ಯವಲ್ಲ.

ಪ್ರತಿಮನೆ ಹಿತ್ತಲನ್ನೂ ಜಲಾನಯನವಾಗಿಸಿ, ಬೀಳುವ ಮಳೆಯನ್ನು ಅಲ್ಲಲ್ಲೇ ಇಂಗಿಸಿದರೆ ಗಂಗೆ ನಮ್ಮ ಜತೆಯೇ ನಿಲ್ಲುತ್ತಾಳೆ, ಸಂಶಯ ಬೇಡ. ಈ ಮಾತಿಗೆ ಅತ್ಯುತ್ತಮ ಉದಾಹರಣೆ ಚೆನ್ನೈ. ಮಳೆ ನೀರಿಂಗಿಸುವುದು ಕಡ್ಡಾಯವಾದ ನಂತರ ಅಲ್ಲಿನ ಜಲಮಟ್ಟ ಆರರಿಂದ ಎಂಟು ಮೀಟರ್ ಏರಿದ್ದಿದೆ. ‘ಲೆಕ್ಕವೇ ಬಿಟ್ಟ ಒಣ ಬಾವಿ’ ನೀರೂಡುತ್ತಿರುವ ಮನೆಗಳಿವೆ.

ರಾಜ್ಯದ ನೀರ ನೆಮ್ಮದಿಗಾಗಿ ಈ ಮಹಾ ಅಭಿಯಾನ ಆರಂಭಿಸಿದ ‘ಪ್ರಜಾವಾಣಿ’ಗೆ ನನ್ನ ಅಭಿನಂದನೆಗಳು. ನೇರ ನಿಶ್ಚಿಂತೆ ಸಾಧ್ಯ ಎನ್ನುವ ಅನೇಕ ಸ್ಫೂರ್ತಿಯ ಕ್ಯಾಪ್ಸೂಲು ಹೆಕ್ಕಿ ತಂದ ನನ್ನ ಉತ್ಸಾಹಿ ಗೆಳೆಯರಿಗೂ ನಾನು ಆಭಾರಿ.

ಕೇವಲ ಐನೂರು ಮಿ.ಮೀ. ಮಳೆಯಲ್ಲಿ ಊರ ಜನ ಒಗ್ಗೂಡಿ ಬತ್ತಿದ ನದಿ ನಾಂಡುವಾಲಿಯನ್ನು ಮತ್ತೆ ಹರಿಸಿದ್ದಾರೆ. ಇದೊಂದೇ ಅಲ್ಲ ಗೆಳೆಯರೇ, ಮಾಡುವ ಮನಸ್ಸಿದ್ದವರೆ ಅನುಸರಿಸುವ ದಾರಿಗಳು ನೂರೆಂಟು ಇವೆ. ಈಗ ಬೇಕಾಗಿರುವುದು ಮನಸ್ಸು, ಸರಿಯಾದ ಯೋಜನೆಗಳು ಮತ್ತು ಸಾಮಾನ್ಯಜ್ಞಾನ.

ಕನ್ನಾಡಿನ ಬತ್ತುವ ನದಿಗಳೂ ವರುಷ ಪೂರ್ತಿ ಹರಿಯುವಂತಾಗಲಿ. ಬೇಸಿಗೆ ಕೊನೆಗೂ ಗಂಗೆ ನಮ್ಮ ಸನಿಹದಲ್ಲೇ ಉಳಿದು ಬದುಕು ತಂಪಾಗಿಸಲಿ. ಗುಜರಾತಿನ ಹಿರಿಯ ಜಲ ಕಾರ್ಯಕರ್ತ ಶ್ಯಾಮ್ ಜಿ ಭಾಯ್ ಅಂಟಾಲಾ ಹೇಳುವಂತೆ ‘ಒಂದು ಕ್ಷಣ ಸರ್ಕಾರವನ್ನು ಮರೆಯೋಣ. ನಾವೇನು ಮಾಡಬಹುದು ಎಂದು ಚಿಂತಿಸಿ, ಮುಂದುವರಿಯೋಣ’

ನಿಮ್ಮೆಲ್ಲರ ಜಲ ಕಾರ್ಯಗಳಿಗೆ ಸ್ಫೂರ್ತಿಯಾಗಿ, ಕನ್ನಡಿಯಾಗಿ, ಟಾನಿಕ್ಕಾಗಿ ನಿಲ್ಲಲು ‘ನೀರ ನೆಮ್ಮದಿಗಾಗಿ’ ಅಭಿಯಾನಕ್ಕೆ ಆತ್ಮಸಂತೋಷವಿದೆ.

–ಶ್ರೀ ಪಡ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.