ಅಕಪುಲ್ಕೊ, ಮೆಕ್ಸಿಕೊ: ಭಾರತದ ಜೊರಾವರ್ ಸಿಂಗ್ ಸಂಧು, ಕೈನಾನ್ ಚೆನೈ ಮತ್ತು ಬೀರೆನ್‌ದೀಪ್ ಸೋಧಿ ಅವರು ಐಎಸ್‌ಎಸ್‌ಎಫ್ ಶಾಟ್‌ಗನ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ.

ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಜೊರಾವರ್ ಅವರು 121 ಸ್ಕೋರ್ ಸಂಗ್ರಹಿಸಿ ಎಂಟನೇ ಸ್ಥಾನ ಗಳಿಸಿದರು. ನವದೆಹಲಿಯಲ್ಲಿ ನಡೆದಿದ್ದ ವಿಶ್ವಕಪ್‌ನ ಮೊದಲ ಹಂತದ ಸ್ಪರ್ಧೆಯಲ್ಲಿ 118 ಸ್ಕೋರ್ ಕಲೆ ಹಾಕಿ ಫೈನಲ್ ಪ್ರವೇಶಿಸಿದ್ದ ಜೊರಾ ವರ್ ಅವರು ಇಲ್ಲಿ ನಿಖರ ಗುರಿ ಹಿಡಿಯುವಲ್ಲಿ ವಿಫಲರಾದರು.ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಕೈನಾನ್ ಕೂಡಾ ತಮ್ಮ ಮೇಲಿನ ನಿರೀಕ್ಷೆ ಹುಸಿಗೊಳಿಸಿದರು.

120 ಸ್ಕೋರ್ ಗಳಿಸಲಷ್ಟೇ ಶಕ್ತರಾದ ಅವರು 16ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಬೀರೆನ್‌ದೀಪ್ ಅವರು 53ನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಅವರು 112 ಸ್ಕೋರ್ ಕಲೆ ಹಾಕಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿ ರುವ ಅಲ್ಬರ್ಟೊ ಫರ್ನಾಂಡೀಸ್ ಅವರು ಚಿನ್ನಕ್ಕೆ ಕೊರ ಳೊಡ್ಡಿದರು. ಇವರು ದೆಹಲಿಯಲ್ಲಿ ನಡೆದಿದ್ದ ಮೊದಲ ಹಂತದ ಸ್ಪರ್ಧೆ ಯಲ್ಲಿ ಕಂಚಿಗೆ ಗುರಿ ಇಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.