ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ನೇತ್ರಾವತಿ ಒಡಲಿನಲ್ಲಿ ನೀರಿದೆ!

ಕುಡಿಯುವ ನೀರಿಗೆ ಬರ, ತೋಟಗಳಲ್ಲಿ ನೀರಧಾರೆ!
Last Updated 22 ಮಾರ್ಚ್ 2017, 6:52 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ‘ನೇತ್ರಾವತಿ ಹರಿವು ನಿಲ್ಲಿಸಿದ್ದಾಳೆ’ ಎನ್ನುತ್ತಿದ್ದಂತೆ, ಅತ್ತ ಅದೇ ನೇತ್ರಾವತಿಯ ಒಡಲಿನಲ್ಲಿ ಸಾಕಷ್ಟು ನೀರು ಇದೆ! ಆದರೆ ಆಕೆಯನ್ನು ಕೆಲವು ಜನರೇ ಹರಿಯಲು ಬಿಡುತ್ತಿಲ್ಲ, ನೀರಿನ ಸಂಪುಗಳ ಮೂಲಕ ಅವಳ ಹರಿವಿಗೆ ಅಲ್ಲಲ್ಲಿ ತಡೆ ಒಡ್ಡಿದ್ದಾರೆ!

ನೇತ್ರಾವತಿ ಮತ್ತು ಕುಮಾರಧಾರ ನದಿಯಲ್ಲಿ ಅಲ್ಲಲ್ಲಿ ಬಹಳಷ್ಟು ಕಡೆಗಳಲ್ಲಿ ನದಿಯ ಪಾತ್ರದಲ್ಲಿ ನೀರು ಇದ್ದು, ಹರಿ ಯುವ ನೀರಿಗೆ ಕೆಲವರು ತಡೆ ಒಡ್ಡಿರು ವುದು ಕಂಡು ಬರುತ್ತಿದೆ. ‘ನೇತ್ರಾವತಿ ನದಿ ನನ್ನದು’, ‘ಕುಮಾರಧಾರ ನದಿ ಎನ್ನದು’ ಎಂಬಂತೆ ಕೆಲವರು ಹರಿಯುವ ನದಿಯನ್ನು ತಡೆದು ನಿಲ್ಲಿಸಿರುವುದು ಕಂಡು ಬರುತ್ತಿದೆ.

ನದಿ ಪಾತ್ರದಲ್ಲಿರುವ ಕೆಲವು ರೈತರು ನದಿಯಿಂದ ನೇರವಾಗಿ ತೋಟಗಳಿಗೆ ಪಂಪು ಅಳವಡಿಸಿಕೊಂಡಿದ್ದು, ಈ ಪೈಕಿ ಶೇ 20ರಷ್ಟು ಅನುಮತಿ ಪಡೆದಂತ ಹವುಗಳು ಇದ್ದರೆ, ಉಳಿದಂತೆ ಶೇ 80ರಷ್ಟು ಪಂಪುಗಳು ಅನಧಿಕೃತವಾಗಿ ಯಾವುದೇ ಪರವಾನಗಿಯನ್ನೂ ಪಡೆಯದೆ ಕಾರ್ಯಾಚರಿಸುತ್ತಿರುವುದು ಕಂಡು ಬಂದಿದೆ.

ಲಕ್ಷಕ್ಕೂ ಮಿಕ್ಕಿ ಪಂಪುಗಳು:  ನೇತ್ರಾ ವತಿ ನದಿಯಲ್ಲಿ ಧರ್ಮಸ್ಥಳದಿಂದ ಆರಂ ಭಗೊಂಡು ಅದು ಸಮುದ್ರ ಸೇರುವ ತನಕ, ಸುಬ್ರಹ್ಮಣ್ಯದಿಂದ ಹರಿದು ಬರುವ ಕುಮಾರಧಾರ ನದಿ ಉಪ್ಪಿನಂಗಡಿಯಲ್ಲಿ ಸಂಗಮ ಆಗುವ ತನಕ, ಸಕಲೇಶಪುರದ ಕಡೆಯ ಕೆಂಪು ಹೊಳೆಯಿಂದ ಹರಿದು ಬಂದು ಹೊಸ್ಮಠದ ಉಳಿಪುನಲ್ಲಿ ಕುಮಾರಧಾರ ನದಿಯನ್ನು ಸೇರಿಕೊಳ್ಳುವ ಗುಂಡ್ಯ ಹೊಳೆಯಲ್ಲಿ ಸೇರಿದಂತೆ ಈ 3 ನದಿಯಲ್ಲಿ ಕನಿಷ್ಠ ಎಂದರೂ ಲಕ್ಷಕ್ಕೂ ಮಿಕ್ಕಿ ಅಕ್ರಮ ಪಂಪುಗಳು ದಿನದ 24 ಗಂಟೆಯೂ ಚಾಲೂ ಇರುತ್ತದೆ ಎಂದು ಹೇಳಲಾಗುತ್ತಿದೆ. 

ಮಧ್ಯಾಹ್ನ ಬಿರು ಬಿಸಿಲಿನ ಬೇಗೆ ಯಲ್ಲೂ, ತಾಪಮಾನ ಅತ್ಯಂತ ಆಧಿಕ ಇರುವ ಹೊತ್ತಿನಲ್ಲೂ ನೀರು ಹೀರುವ ಈ ಪಂಪುಗಳು ಜಲ ಮೂಲವನ್ನೇ ಕಸಿ ದುಕೊಂಡು ಅಂತರ್ಜಲ ನಾಶಕ್ಕೆ ಕಾರ ಣವಾಗುತ್ತಿವೆ. ಇದಕ್ಕೆ ತುಸು ಕಡಿವಾಣ ಹಾಕಿದಲ್ಲಿ ಅಥವಾ ಅದರ ಬಳಕೆಯನ್ನು ಮಿತಿಗೊಳಿಸಿದಲ್ಲಿ ದಕ್ಷಿಣ ಕನ್ನಡ
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಲೆದೋರದು ಎನ್ನುವುದು ಹಿರಿಯರ ಅಭಿಪ್ರಾಯ.

1 ತೋಟದಲ್ಲಿ 4 ಪಂಪುಗಳು ಇವೆ: ನದಿ ಪಾತ್ರದಿಂದ ನೀರು ತೆಗೆಯುವ ಕೆಲ ವು ರೈತರು ತಮ್ಮ ಒಂದು ತೋಟಕ್ಕೆ 10 ಎಚ್.ಪಿ. ಸಾಮರ್ಥ್ಯದ 4 ಪಂಪುಗಳನ್ನು ಅಳವಡಿಸಿಕೊಂಡಿರುವುದೂ ಇದೆ. ಬಹುತೇಕ ಪಂಪುಗಳು ದಿನಪೂರ್ತಿ ಚಾಲೂ ಇರುತ್ತದೆ. ಸರ್ಕಾರದ ವತಿ ಯಿಂದ ಕೃಷಿ ಪಂಪು ಸೆಟ್‌ಗಳಿಗೆ ಉಚಿತ ವಿದ್ಯುತ್ ಇರುವ ಕಾರಣದಿಂದಾಗಿ ಇಲ್ಲಿ ಇದರ ದುರುಪಯೋಗ ಈ ರೀತಿಯಾಗಿ ಆಗುತ್ತಿದೆ.

ಜಿಲ್ಲೆಯಾದ್ಯಂತ ಕೆರೆ, ಕೊಳಗಳು ಬತ್ತಿ ಹೋಗಿವೆ. ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ. ನೀರಿನ ಮೂಲವನ್ನು ಕುಡಿಯುವ ಸಲುವಾಗಿ ಮಾತ್ರ ಉಪ ಯೋಗ ಮಾಡುವಂತೆ, ನದಿ ಪಾತ್ರದಲ್ಲಿ ಇರುವ ಮಂದಿ ಕುಡಿಯಲು ಹೊರತಾಗಿ ಯಾವುದೇ ಕಾರಣಕ್ಕೂ ನದಿ ನೀರು ಬಳಸಿಕೊಳ್ಳಬಾರದು, ನದಿಗೆ ಅಳವ ಡಿಸಿರುವ ಪಂಪುಗಳನ್ನು ತೆರವು ಮಾಡಿದರೆ ಮಾತ್ರ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿ ಕೊಳ್ಳಲು ಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಜಿಲಡಳಿತ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.
-ಸಿದ್ದಿಕ್ ನೀರಾಜೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT