ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ನೀರು ಕಾಯುವ ಮಲ್ಲಪ್ಪ

Last Updated 22 ಮಾರ್ಚ್ 2017, 7:57 IST
ಅಕ್ಷರ ಗಾತ್ರ

ಗದಗ: ಖಾಕಿ ಸಮವಸ್ತ್ರದಲ್ಲಿ ಧರಿಸಿ ಕೈಯಲ್ಲಿ ಉದ್ದದ ದೊಣ್ಣೆ, ತಲೆ ಮೇಲೆ ಟೋಪಿ ಹಾಕಿಕೊಂಡು16 ವರ್ಷ­ದಿಂದ ಕಾಯುಕ ಕಾಯಕದಲ್ಲಿದ್ದಾರೆ ಇವರು. ಆದರೂ, ಇವರು ಪೊಲೀಸಪ್ಪ ಅಲ್ಲ. ಕೆರೆ ನೀರು ಕಾಯುವ ಮಲ್ಲಪ್ಪ.

ಬೆಳಿಗ್ಗೆ 6ರಿಂದ ರಾತ್ರಿ 8 ರವರೆಗೂ ಮಳೆ, ಬಿಸಿಲು, ಚಳಿ­ಯನ್ನೂ ಲೆಕ್ಕಿಸದೆ ಕೆರೆ ಕಾಯುವ ಕೆಲಸ ಮಾಡುತ್ತಾರೆ. ‘ಮುಂದಿನ ಪೀಳಿಗೆಗೂ ಜೀವ ಜಲ ಉಳಿಯಲಿ ಎಂಬ ಆಶಯ­ದಿಂದ ಪ್ರಾಮಾಣಿಕವಾಗಿ ಕೆರೆ ಕಾಯುವ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ಮಲ್ಲಪ್ಪ.

ಬಳಗಾನೂರ ಗ್ರಾಮದ ಕೆರೆ ನೀರನ್ನು ಸದ್ಬಳಕೆ­ಯಾಗುವಂತೆ ಮಲ್ಲಪ್ಪ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವರ್ಷಪೂರ್ತಿ ನೀರು ಕುಡಿಯಲು ಯೋಗ್ಯವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ.

ಜೀವಜಲ ಸದ್ಬಳಕೆ ಆಗಬೇಕು ಮತ್ತು ನೀರು ಪರಿಶುದ್ಧವಾಗಿರಬೇಕು ಎಂಬ ಉದ್ದೇಶದಿಂದ ಮಲ್ಲಪ್ಪ ತಮ್ಮ ಜೀವನವನ್ನು ಈ ಕೆರೆ ಕಾಯುವ ಕಾಯಕಕ್ಕೆ ಮುಡುಪಾಗಿಟ್ಟಿದ್ದಾರೆ. ಈತ ಗ್ರಾಮದ ಜನರ ಪಾಲಿಗೆ ಭಗೀರಥ. ಜೋರು ಮಳೆ ಬಂದಾಗ ಒಂದು ಎಕರೆ ವಿಸ್ತೀರ್ಣದ ಈ ಕೆರೆ ತುಂಬುತ್ತದೆ. ವರ್ಷಪೂರ್ತಿ ಇದೇ ನೀರನ್ನು ಕುಡಿ­ಯಲು ಜನ ಬಳಸುತ್ತಾರೆ.

ನೀರು ತುಂಬಿಕೊಳ್ಳಲು ಬರುವ ಮಹಿಳೆಯರು ಮತ್ತು ಮಕ್ಕಳಿಗೆ ಮಲ್ಲಪ್ಪ ನೆರವಾಗು­ತ್ತಾರೆ. ತಾವೇ ನೀರಿಗೆ ಇಳಿದು ಕೊಡ­ದಲ್ಲಿ ನೀರು ತುಂಬಿ ಕೊಡುತ್ತಾರೆ. ಕುಡಿಯಲು ಬಳಸುವ ಕೆರೆ ನೀರು ಮಲಿನ­ವಾಗಬಾರದು ಎಂಬುದು ಅವರ ಉದ್ದೇಶ.  ಮಲ್ಲಪ್ಪ ಅವರ ಕಾಯಕಕ್ಕೆ ಗ್ರಾಮ ಪಂಚಾಯ್ತಿ ಗೌರವ­ಧನ ನೀಡುತ್ತಿದೆ.

ಮಳೆ ಕೊರತೆಯಿಂದ ಕೆರೆ ಈ ಬೇಸಿಗೆ ಆರಂಭದಲ್ಲೇ ಬತ್ತಿತ್ತು. ನೀರಿಗಾಗಿ ಜನರು ಪರಿತಪಿಸುತ್ತಿದ್ದ ಸಮಯದಲ್ಲೇ ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಏಕೈಕ ಆಸರೆ ಈ ಕೆರೆ ತುಂಬಿದೆ. ಮಲ್ಲಪ್ಪ ಕೆರೆ ಕಾಯುವ ಕಾಯಕ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT