ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆವಿನ್ ಆಟಕ್ಕೆ ಒಲಿದ ಜಯ

ಆಫ್ಘಾನಿಸ್ತಾನ ಎದುರು ಐರ್ಲೆಂಡ್‌ಗೆ ಸತತ ಎರಡನೇ ಜಯ
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಗ್ರೇಟರ್‌ ನೊಯ್ಡಾ: ಕೆವಿನ್‌ ಓ ಬ್ರಿಯಾನ್‌ (72, 26ಕ್ಕೆ4) ಅವರ ಆಲ್‌ರೌಂಡ್ ಆಟದ ಬಲದಿಂದ ಐರ್ಲೆಂಡ್‌ ತಂಡ ಆಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡನೇ ಪಂದ್ಯ ಗೆದ್ದುಕೊಂಡಿದೆ.

ಆಫ್ಘಾನಿಸ್ತಾನ ವಿರುದ್ಧದ ಟ್ವೆಂಟಿ–20 ಸರಣಿಯಲ್ಲಿ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ಐರ್ಲೆಂಡ್ ಏಕದಿನ ಮಾದರಿಯಲ್ಲಿ ಪುಟಿದೇಳುವ ಆಟ ಆಡಿದೆ. ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದರೂ, ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು 2–2ರಲ್ಲಿ ಸಮಬಲ ಮಾಡಿಕೊಂಡಿದೆ.

ಬುಧವಾರ ಟಾಸ್ ಗೆದ್ದುಕೊಂಡ ಆಫ್ಘಾನಿಸ್ತಾನ ತಂಡ ಮೊದಲು ಬ್ಯಾಟ್‌ ಮಾಡಿ 49.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 220 ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಐರ್ಲೆಂಡ್ ಪಡೆ 46.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು.

ಕೆವಿನ್ ಆಟದ ಸೊಬಗು: ಐರ್ಲೆಂಡ್  ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಸವಾಲಿನ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಎಡ್ ಜಾಯ್ಸಿ (24), ಪಾಲ್ ಸ್ಟಿರ್ಲಿಂಗ್‌ (28) ರನ್‌ ಗಳಿಸಿದರು. ವಿಲಿಯಮ್ಸ್ ಪೋಟರ್‌ಫೀಲ್ಡ್‌ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಸೋಲಿನ ಹಾದಿಯಲ್ಲಿದ್ದ ಐರ್ಲೆಂಡ್ ತಂಡಕ್ಕೆ ಕೆವಿನ್‌ ಓ ಬ್ರಿಯಾನ್ ಅಮೋಘ ಇನಿಂಗ್ಸ್ ಕಟ್ಟುವ ಮೂಲಕ ನೆರ ವಾದರು. 60 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ ಒಳಗೊಂಡಂತೆ ಅಜೇಯ 72 ರನ್‌ ಕಲೆಹಾಕುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಗ್ಯಾರಿ ವಿಲ್ಸನ್‌ (41) ಕೆವಿನ್‌ಗೆ ಉತ್ತಮ ಸಾಥ್‌ ನೀಡಿದರು.

ಮೊದಲು ಬ್ಯಾಟ್ ಮಾಡಿದ್ದ ಆಫ್ಘನ್ ತಂಡದ ಆಟಗಾರರು ಕೆಟ್ಟ ಆರಂಭ ಪಡೆದರು. ಕೆವಿನ್‌ ಓ ಬ್ರಿಯಾನ್ ಕೇವಲ 26 ರನ್‌ಗಳನ್ನು ನೀಡಿ 4 ವಿಕೆಟ್‌ ಕಬಳಿಸುವ ಮೂಲಕ ಆಫ್ಘನ್ ಆಟಗಾರರ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡಿದರು. ಕೆಳ ಕ್ರಮಾಂಕದ ಬ್ಯಾಟ್ಸ್‌ ಮನ್ ಶಫೀವುಲ್ಲಾ (42) ಆಫ್ಘನ್ ತಂಡದ ಅಧಿಕ ಸ್ಕೋರರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರು: ಆಫ್ಘಾನಿಸ್ತಾನ: 49.5 ಓವರ್‌ಗಳಲ್ಲಿ 220 (ಶಫೀವುಲ್ಲಾ 42, ದವಾಲತ್‌ ಜೋರ್ಡನ್‌ 41; ಕೆವಿನ್ ಓ ಬ್ರಿಯಾನ್ 26ಕ್ಕೆ4, ಜಾಕೋಬ್‌ ಮಲ್ಡರ್‌ 57ಕ್ಕೆ3). ಐರ್ಲೆಂಡ್: 46.5 ಓವರ್‌ಗಳಲ್ಲಿ 224 (ಕೆವಿನ್ ಓ ಬ್ರಿಯಾನ್ 72, ಗ್ಯಾರಿ ವಿಲ್ಸನ್‌ 41; ಮೊಹಮ್ಮದ್ ನಬಿ 30ಕ್ಕೆ4). ಫಲಿತಾಂಶ: ಐರ್ಲೆಂಡ್‌ಗೆ 3 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT