ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಮತ್ತೆ ನಕ್ಸಲರ ಉಪಟಳ?

ಗುತ್ತಿಗೆದಾರನ ಅಪಹರಣ ಬಿಡುಗಡೆ ವದಂತಿ
Last Updated 23 ಮಾರ್ಚ್ 2017, 5:42 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಒಂದೂವರೆ ದಶಕ ಗಳಿಂದ ನಕ್ಸಲ್‌ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದವರಲ್ಲಿ ಕೆಲವರು ಪೊಲೀಸರ ಗುಂಡಿಗೆ ಬಲಿಯಾ ದರೆ, ಮತ್ತೆ ಕೆಲವು ಸಂಘಟನೆ ತೊರೆದು ಪ್ರಜಾಪ್ರಭುತ್ವದ ಮುಖ್ಯವಾಹಿನಿಗೆ ಮರಳಿದ್ದರು. ಇನ್ನು ಕೆಲವರು ಕೇರಳ, ತಮಿಳುನಾಡು ಸೇರಿದ್ದರು.

ರಾಜ್ಯದ ಪಶ್ಚಿಮಘಟ್ಟದಲ್ಲಿ ನಕ್ಸಲ್‌ ಸಂಘಟನೆ ಬಹುತೇಕ ಕ್ಷೀಣಿಸುವ ಹಂತದಲ್ಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಈಗ ಕುದುರೆಮುಖ ಭಾಗದಲ್ಲಿ ಗುತ್ತಿಗೆದಾರ ರೊಬ್ಬರನ್ನು 15 ಮಂದಿ ನಕ್ಸಲರ ತಂಡ ಅಪಹರಿಸಿ, ಹಣಕ್ಕಾಗಿ ಥಳಿಸಿ, ಮೊಬೈಲ್‌ ಕಸಿದುಕೊಂಡು ಬಿಡುಗಡೆ ಮಾಡಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.

ಆದರೆ, ಇದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಬಲವಾಗಿ ತಳ್ಳಿಹಾಕಿದ್ದಾರೆ. ಅಪಹರಣ ನಡೆದಿದ್ದರೆ ಇಷ್ಟು ದಿನಗಳಲ್ಲಿ ಪೊಲೀಸರ ಗಮನಕ್ಕೆ ಬರುತ್ತಿರಲಿಲ್ಲವೇ? ಈ ಭಾಗದಲ್ಲಿ 15 ಮಂದಿ ನಕ್ಸಲರು ಇಲ್ಲ ಎಂದಿದ್ದಾರೆ. ಈ ನಡುವೆ ಅಣ್ಣಾಮಲೈ ಎಎನ್‌ಎಫ್‌ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ.

‘ತಮಿಳುನಾಡಿನಿಂದ 25ಕ್ಕೂ ಹೆಚ್ಚು ನಕ್ಸಲರು ಮಲೆನಾಡಿಗೆ ಬಂದಿರುವ ಬಗ್ಗೆ ತಮಿಳುನಾಡು ಗೃಹ ಇಲಾಖೆ, ರಾಜ್ಯದ ಗೃಹ ಇಲಾಖೆಗೆ ಈ ಮೊದಲೇ ಮಾಹಿತಿ ನೀಡಿತ್ತು. ರಾಜ್ಯದಲ್ಲಿ ಸಕ್ರಿಯರಾಗಿದ್ದ ನಕ್ಸ ಲರಲ್ಲಿ ಈಗಾಗಲೇ 6 ಮಂದಿ ಸಂಘಟನೆ ತೊರೆದು ಸಮಾಜದ ಮುಖ್ಯ ವಾಹಿನಿಗೆ ಮರಳಿದ್ದಾರೆ.

ಹೀಗಾಗಿ ನಕ್ಸಲ್‌ ಸಂಘ ಟನೆ ಬಲಗೊಳಿಸಲು ಹೊರ ರಾಜ್ಯಗಳ ನಕ್ಸಲರು ಮಲೆ ನಾಡಿನಲ್ಲಿ ಬೀಡುಬಿಟ್ಟಿ ರುವ ಬಗ್ಗೆ ಪೊಲೀ ಸರಿಗೂ ಮಾಹಿತಿ ಲಭಿಸಿತ್ತು’ ಎನ್ನುತ್ತವೆ ಮೂಲಗಳು.

ಎಎನ್‌ಎಫ್‌ ಸಿಬ್ಬಂದಿ ಕೊರತೆ ಯಿಂದ ನಿರಂತರ ಕೂಂಬಿಂಗ್‌ ನಡೆ ಯುತ್ತಿಲ್ಲ. ಸರ್ಕಾರದ ಮೃದು ಧೋರಣೆ ಯಿಂದ ಮಲೆನಾಡಿನಲ್ಲಿ ನಕ್ಸಲರು ನೆಲೆ ಭದ್ರಪಡಿಸಿಕೊಳ್ಳುತ್ತಿದ್ದಾರೆ. 6 ಮಂದಿ ನಕ್ಸಲರು ಕಾಡಿನಿಂದ ಹೊರಬಂದರೂ ಉಳಿದ ಸದಸ್ಯರು ಕೇರಳ, ತಮಿಳು ನಾಡು ಸೇರಿದ್ದಾರೆ. ಮಲೆನಾಡಲ್ಲಿ ನಕ್ಸಲ ರಿಲ್ಲ ಎಂದು ಪೊಲೀಸರು ಭಾವಿಸಿದ್ದರು. ಎಎನ್‌ಎಫ್ ಸಿಬ್ಬಂದಿಯೂ ಮೌನ ವಾಗಿದ್ದರು.

ರಾಜ್ಯ ಸರ್ಕಾರವೂ ಎಎನ್‌ ಎಫ್‌ಗೆ ನೀಡುವ ಸವಲತ್ತುಗಳನ್ನು ಹಂತ ಹಂತವಾಗಿ ಕಡಿತಗೊಳಿಸಿದೆ ಎನ್ನುವ ದೂರುಗಳಿವೆ. ಸರ್ಕಾರದ ನಡೆಯನ್ನು ಗಮನಿಸಿದ ರಾಜ್ಯ ಹಾಗೂ ಹೊರ ರಾಜ್ಯದ ನಕ್ಸಲರು ರಾಜ್ಯದಲ್ಲಿ ಸಂಘಟನೆ ಬೇರನ್ನು ಸದ್ದಿಲ್ಲದೆ ಬಲಗೊಳಿಸುತ್ತಿದ್ದಾರೆ.

*
ಅಪಹರಣ ನಡೆದಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಎನ್‌ಎಫ್‌ ಡಿವೈಎಸ್‌ಪಿಗೆ ಸೂಚನೆ ಕೊಡಲಾಗಿದೆ.
-ವಿಷ್ಣುವರ್ಧನ, ಎಎನ್‌ಎಫ್‌ ಕಮಾಂಡರ್‌, ಉಡುಪಿ ಎಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT