ನವದೆಹಲಿ: ಚುನಾವಣಾ ಆಯೋಗ ಎಐಎಡಿಂಎಕೆ ಪಕ್ಷದ ಎರಡೂ ಬಣಗಳಿಗೆ ಹೊಸ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ನೀಡಿದೆ.

ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರ್.ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಏ.12ರಂದು ಉಪಚುನಾವಣೆ ನಡೆಯಲಿದ್ದು, ಎಐಎಡಿಂಎಕೆಯ ಎರಡು ಬಣಗಳ ಪ್ರತಿಷ್ಠೆಯ ಕಣವಾಗಿದೆ.

ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರ ಬಣದ ಪಕ್ಷಕ್ಕೆ ‘ಎಐಎಡಿಂಎಕೆ ಪುರತಚಿ ಥಲೈವಿ ಅಮ್ಮ’ ಎಂಬ ಹೆಸರು ಹಾಗೂ ‘ವಿದ್ಯುತ್ ಕಂಬ’ದ ಚಿಹ್ನೆ ನೀಡಲಾಗಿದೆ.

ಜೈಲಿನಲ್ಲಿರುವ ಎಐಎಡಿಂಎಕೆ ಮುಖ್ಯಸ್ಥೆ ವಿ.ಕೆ.ಶಶಿಕಲಾ ಅವರ ಬಣದ ಪಕ್ಷಕ್ಕೆ ‘ಟೋಪಿ’ ಚಿಹ್ನೆ ಹಾಗೂ ‘ಎಐಎಡಿಂಎಕೆ ಅಮ್ಮ’ ಹೆಸರನ್ನು ಅಂತಿಮಗೊಳಿಸಿದೆ.

ಚಿಹ್ನೆ ಬಳಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಳನಿ ಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಬಣಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆಯೋಗವು ಬುಧವಾರ ಮಧ್ಯಂತರ ಆದೇಶ ನೀಡಿತ್ತು.

ಎಐಎಡಿಂಎಕೆ ಪಕ್ಷದ ಎರಡು ಎಲೆಗಳ ಚಿತ್ರವಿರುವ ಚಿಹ್ನೆಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.