ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿಧಾಮ: ಹೊಸ ಅತಿಥಿಗಳ ಚಿನ್ನಾಟ

ನಾಲ್ಕು ವರ್ಷಗಳ ಬಳಿಕ ಗೋಚರಿಸಿದ ಎರಡು ಕರಡಿ ಮರಿಗಳು, ಛಾಯಾಗ್ರಾಹಕರಿಗೆ ಕುತೂಹಲ
Last Updated 23 ಮಾರ್ಚ್ 2017, 9:54 IST
ಅಕ್ಷರ ಗಾತ್ರ

ಹೊಸಪೇಟೆ: ಸುಮಾರು ನಾಲ್ಕು ವರ್ಷಗಳ ನಂತರ, ಇಲ್ಲಿನ ದರೋಜಿ ಕರಡಿಧಾಮದ ಕರಡಿಗುಡ್ಡದ ಮೇಲೆ ಎರಡು ಕರಡಿ ಮರಿಗಳು ಒಟ್ಟಿಗೆ ಕಾಣಿಸಿಕೊಂಡಿವೆ.

ಎರಡೂ ಕರಡಿ ಮರಿಗಳು ನಿತ್ಯ ಸಂಜೆಯಾಗುತ್ತಿದ್ದಂತೆಯೇ ಕರಡಿಗುಡ್ಡದ ಮೇಲೆ ಕಾಣಿಸಿಕೊಳ್ಳುತ್ತಿವೆ. ತಾಯಿ ಮೇಲೆ ಕುಳಿತು ಸವಾರಿ ಮಾಡುತ್ತ, ಆಟ­ವಾಡುತ್ತಿವೆ. ಅವುಗಳ ಪ್ರತಿಯೊಂದು ಕ್ಷಣವನ್ನು ಸೆರೆಹಿಡಿಯಲು ಛಾಯಾ­ಗ್ರಾಹಕರು ನಿತ್ಯ ಕರಡಿಧಾಮಕ್ಕೆ ದೌಡಾಯಿಸುತ್ತಿದ್ದಾರೆ. ಪರಿಸರ ಪ್ರೇಮಿ­ಗಳು ಅವುಗಳನ್ನು ನೋಡಿ ಖುಷಿಪಡು­ತ್ತಿದ್ದಾರೆ.


‘ಕರಡಿಧಾಮದಲ್ಲಿ ಕರಡಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ ವಿಷಯ. ಆದರೆ, ಮರಿ ಕರಡಿಗಳು ಕಣ್ಣಿಗೆ ಬೀಳುವುದು ಅಪರೂಪ’ ಎನ್ನುತ್ತಾರೆ ವನ್ಯಜೀವಿ ಪರಿಪಾಲಕ ಡಾ.ಎಸ್‌.ಕೆ. ಅರುಣ್‌. ‘ನಾಲ್ಕು ವರ್ಷಗಳ ಹಿಂದೆ ಕರಡಿ ಮರಿಗಳನ್ನು ಕಂಡಿದ್ದೆ. ಅದಾದ ಬಳಿಕ ಇದೇ ಮೊದಲ ಬಾರಿಗೆ ನೋಡುತ್ತಿ­ದ್ದೇನೆ. ಈ ಅಪರೂಪದ ಗಳಿಗೆಯ ಛಾಯಾಚಿತ್ರ ಸೆರೆಹಿಡಿಯುವಲ್ಲಿ ಯಶಸ್ವಿ­ಯಾಗಿದ್ದೇನೆ’ ಎಂದು ಅವರು ಖುಷಿಯಿಂದ ಹೇಳಿದರು.

‘ಮರಿಗಳು ಜತೆಯಲ್ಲಿ ಇರುವಾಗ ತಾಯಿ ಕರಡಿ ಬಳಿಗೆ ಹೋಗಲು ಆಗದು. ಒಂದುವೇಳೆ ಪ್ರಯತ್ನಿಸಿದರೆ ಮೈ ಮೇಲೆ ಅಪಾಯವನ್ನು ಎಳೆದು­ಕೊಂಡಂತಾ­ಗುತ್ತದೆ. ಹಾಗಾಗಿ ಅದರ ಹತ್ತಿರಕ್ಕೆ ನಮ್ಮ ಸಿಬ್ಬಂದಿ ಹೋಗಿಲ್ಲ. ಹಾಗಾಗಿ ಮರಿಗಳ ಲಿಂಗ ಪತ್ತೆಯಾಗಿಲ್ಲ’ ಎಂದು ದರೋಜಿ ಕರಡಿಧಾಮದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್‌ ತಲಾರಿ ತಿಳಿಸಿದರು.

ದರೋಜಿ ಕರಡಿಧಾಮ...
ದರೋಜಿ ಕರಡಿಧಾಮ ಹಂಪಿಯಿಂದ 20 ಕಿ.ಮೀ ದೂರದಲ್ಲಿದ್ದು, 82 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಪೂರ್ವ ಬಿಳಿಕಲ್ಲು ಹಾಗೂ ಬುಕ್ಕಸಾಗರ ಸಂರಕ್ಷಿತಾರಣ್ಯ ಇದರಲ್ಲಿ ಸೇರಿದೆ. ಅರಣ್ಯ ಇಲಾಖೆಯ ಪ್ರಕಾರ, ಕರಡಿಧಾಮದಲ್ಲಿ ಸುಮಾರು 70 ರಿಂದ 80 ಕರಡಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT