ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ರಚಿಸಲು ವ್ಯವಧಾನ ಅಗತ್ಯ

ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಬ್ಬಾಸ ಮೇಲಿನಮನಿ ಅಭಿಮತ
Last Updated 23 ಮಾರ್ಚ್ 2017, 10:00 IST
ಅಕ್ಷರ ಗಾತ್ರ

ಮುಧೋಳ: ಕಥೆ ಎನ್ನುವ ಚೌಕಟ್ಟು ತನ್ನಿಂದ ತಾನೆ ಹುಟ್ಟಿಕೊಳ್ಳಲ್ಲ, ಕಥೆಗಾರನಾದವನು ಆ ಚೌಕಟ್ಟನ್ನು ನಿರ್ಮಿಸಿಕೊಳ್ಳಬೇಕು, ಕಥೆಯ ವಿಷಯ ಮತ್ತು ವಸ್ತುವಿನಲ್ಲಿ ಕಥೆಗಾರ ಮುಕ್ತತತೆ ಕಾಯ್ದುಕೊಳ್ಳಬೇಕು. ಆ ಮುಕ್ತತೆಗೆ ಸಂವಾದ, ಪ್ರಶ್ನೆ ಎತ್ತುವಂತಿರಬೇಕು. ಪ್ರಶ್ನೆ ಎತ್ತದ ಸಮಸ್ಯೆ ವಿಶ್ಲೇಷಿಸಿದ ಕಥೆ ಕಥೆಯೇ ಅಲ್ಲ, ಕಥೆಗೆ ಮುಖ್ಯವಾಗಿ ವಸ್ತುಬೇಕು,ಆ ವಸ್ತುವನ್ನು ಹುಡುಕಿಕೊಂಡ ಹೋಗಬೇಕೆಂದು ಕಥೆಗಾರ ಡಾ.ಅಬ್ಬಾಸ ಮೇಲಿನಮನಿ ಹೇಳಿದರು.

ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಕನ್ನಡ ಸಂಘ ಮತ್ತು ಕನ್ನಡ-ಇಂಗ್ಲಿಷ್- ಹಿಂದಿ ವಿಭಾಗಗಳ ಸಹಯೋಗದ ಕಾರ್ಯಾಗಾರದ ಅಂಗವಾಗಿ ಬುಧವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕಥಾ ರಚನೆ ಹಾಗೂ ಸಂವಾದ ಎಂಬ ವಿಷಯದ  ಕುರಿತು ಉಪನ್ಯಾಸ ನೀಡಿದರು.

ಕಥೆಗೆ ವಸ್ತು, ವಿನ್ಯಾಸ, ಚೌಕಟ್ಟು, ಸಾಮಾನ್ಯೀಕರಣ, ಸರಳ ಭಾಷೆ, ಭಾಷೆಯ ಲಾಲಿತ್ಯವನ್ನು ಕಥೆಗಾರ ರೂಢಿಸಿಕೊಂಡಿರಬೇಕು, ಕಥೆಗಾರನಿಗೆ ಏಕಾಗ್ರತೆ, ಏಕಾಂತತೆ ಮುಖ್ಯಪಾತ್ರ ವಹಿಸುವುದು ಎಂದರು.

ರುಬಿನಾ ನಧಾಪ ಹಾಗೂ ಅರುಣ ಹಾಜವ್ವಗೋಳ ವಿದ್ಯಾರ್ಥಿಗಳು ಎರಡು ಸಣ್ಣ ಕಥೆಗಳ ವಾಚನ ಮಾಡಿದರು, ವಿದ್ಯಾರ್ಥಿಗಳು ಕಥೆಯ ರಚನೆ, ಸಮಸ್ಯೆ ಕುರಿತು ಸಂವಾದ ನಡೆಸಿದರು.

ಪ್ರಾಚಾರ್ಯ ಪ್ರೊ.ಎನ್.ಆರ್.ಹಳ್ಳೂರ ಅಧ್ಯಕ್ಷತೆವಹಿಸಿ ಮಾತನಾಡಿದರು.  ಕನ್ನಡ ಸಂಘದ ಅಧ್ಯಕ್ಷೆ ಪ್ರೊ.ಗಿರಿಜಾ ಅಣೆಪ್ಪನವರ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರೊ.ಬಸವರಾಜ ಕುಂಬಾರ ಪರಿಚಯಿಸಿದರು. ಪ್ರೊ.ಲಲಿತಾ ಕಲ್ಯಾಣಶೆಟ್ಟಿ ನಿರೂಪಿಸಿದರು.

ಪ್ರೊ.ವಿ.ವೈ.ಮಡಿವಾಳರ ವಂದಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ವೈ.ಜಿ.ಬಿಸ್ತಿ, ಡಾ.ಎನ್.ಬಿ.ಇಂಗನಾಳ, ಪ್ರೊ.ಎಂ.ಆರ್.ಜರಕುಂಟಿ, ಪ್ರೊ.ಎ.ಯು.ರಾಠೋಡ, ಪ್ರೊ.ಆರ್. ಆರ್. ಮಾಳಿಪಾಟೀಲ, ಪ್ರೊ.ವಿ.ಎಂ.ಕಿತ್ತೂರ, ಪ್ರೊ.ಆರ್.ಎಸ್.ಮಠಪತಿ, ಪ್ರೊ.ಎಸ್.ಪಿ.ಸಂಗಳಿ, ಪ್ರೊ.ಐ.ಎಸ್.ಹಿರೇಮಠ, ಪ್ರೊ.ಹರ್ಷಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT