ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ಖರೀದಿ ತೆರಿಗೆ ಕೈಬಿಟ್ಟ ಸರ್ಕಾರ

Last Updated 23 ಮಾರ್ಚ್ 2017, 19:41 IST
ಅಕ್ಷರ ಗಾತ್ರ

ನವದೆಹಲಿ: ₹2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟಿಗೆ ಶೇ 1 ರಷ್ಟು ಮೂಲದಲ್ಲಿಯೇ ತೆರಿಗೆ ಸಂಗ್ರಹಿಸುವ  (ಟಿಸಿಎಸ್‌) ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

ಕೇಂದ್ರ ಸರ್ಕಾರ 2016–17ನೇ ಸಾಲಿನ ಬಜೆಟ್‌ನಲ್ಲಿ ಶೇ 1 ರಷ್ಟು ಟಿಸಿಎಸ್‌ ಸಂಗ್ರಹಿಸಲು ಅವಕಾಶ ಕಲ್ಪಿಸಿತ್ತು. 2017ರ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತರುವ ಮೂಲಕ ಟಿಸಿಎಸ್‌ ಕೈಬಿಡಲಾಗಿದೆ.

ಚಿನ್ನಾಭರಣ ಸೇರಿದಂತೆ ₹2 ಲಕ್ಷಕ್ಕೂ ಹೆಚ್ಚಿನ ಮೊತ್ತದ ಎಲ್ಲಾ ರೀತಿಯ ಸರಕು ಮತ್ತು ಸೇವೆಗಳ ಖರೀದಿಗೂ ಟಿಸಿಎಸ್‌ನಿಂದ ವಿನಾಯಿತಿ ನೀಡಲಾಗಿದೆ.
ನಗದು ಪಾವತಿಸಿ ಚಿನ್ನ ಖರೀದಿ ಮಿತಿ ₹2 ಲಕ್ಷದವರೆಗೆ  ಮತ್ತು ಚಿನ್ನಾಭರಣ ಖರೀದಿಯನ್ನು ₹5 ಲಕ್ಷದವರೆಗೆ ನಿಗದಿ ಮಾಡಲಾಗಿತ್ತು. ಈ ಮಿತಿ ಮೀರಿದರೆ ಏಪ್ರಿಲ್ 1 ರಿಂದ ಶೇ 1 ರಷ್ಟು ಟಿಸಿಎಸ್‌ ಭರಿಸಬೇಕಿತ್ತು.

ಚೇತರಿಕೆ ಹಾದಿಯತ್ತ ಷೇರುಪೇಟೆ ಸೂಚ್ಯಂಕ
ಮುಂಬೈ:
ಕಳೆದ 3 ದಿನಗಳಿಂದ ಇಳಿಮುಖವಾಗಿದ್ದ ಷೇರುಪೇಟೆ ಸೂಚ್ಯಂಕಗಳು ಮತ್ತೆ ಚೇತರಿಕೆ ಹಾದಿಗೆ ಮರಳಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ 164 ಅಂಶ ಹೆಚ್ಚಾಗಿ, 29,332 ಅಂಶಗಳಲ್ಲಿ ಮತ್ತು  ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 56 ಅಂಶ ಹೆಚ್ಚಾಗಿ, 9,086 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ಜಾಗತಿಕ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆಯಿತು.  ಕೇಂದ್ರ ಸರ್ಕಾರ ಜಿಎಸ್‌ಟಿಗೆ ಪೂರಕ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ. ಇದು ಸಕಾರಾತ್ಮಕ ವಹಿವಾಟಿಗೆ  ನೆರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT