ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಂದು ಸ್ವಚ್ಛತಾ ಅಭಿಯಾನ

ಜಿಲ್ಲೆಯ 491 ದೇವಾಲಯಗಳಲ್ಲಿ ಏಕಕಾಲಕ್ಕೆ ಸ್ವಚ್ಛತೆ
Last Updated 24 ಮಾರ್ಚ್ 2017, 5:15 IST
ಅಕ್ಷರ ಗಾತ್ರ

ಮಂಗಳೂರು: ಧಾರ್ಮಿಕದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಇದೇ 26 ರಂದು ಸ್ವಚ್ಛ ಮಂದಿರ ಅಭಿ ಯಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಎಂ.ಕೆ.ಪ್ರಮೀಳಾ, ರಾಜ್ಯದಲ್ಲಿ ಸ್ವಚ್ಛ ಮಂದಿರ ಯೋಜನೆ ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆ.

ಈ ಅಭಿಯಾನದಲ್ಲಿ ದೇವಾಲಯಗಳನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವುದು, ದೇವಾಲಯಗಳಲ್ಲಿ ಉತ್ಪನ್ನವಾಗುವ ಹಸಿ ತ್ಯಾಜ್ಯವನ್ನು ದೇವಾಲಯ ಮಟ್ಟದಲ್ಲಿಯೇ ಸ್ವಯಂ ನಿರ್ವಹಣೆ ಅಥವಾ ವಿಲೇವಾರಿ ಮಾಡುವುದು, ಸಂಘ ಸಂಸ್ಥೆಗಳು, ಸ್ವಯಂಸೇವಕರ ಸಹಭಾಗಿತ್ವದಿಂದ ದೇವಸ್ಥಾನ ಸ್ವಚ್ಛಗೊಳಿಸು ವುದು, ದೇವಾಲಯಗಳಿಗೆ ಹೊಂದಿ ಕೊಂಡಂತೆ ಇರುವ ಕಲ್ಯಾಣಿಗಳ ಪುನರುಜ್ಜೀವನ, ದೇವಾಲಯದ ಆಸುಪಾಸಿನಲ್ಲಿ ಕಳೆಗಳನ್ನು ಸ್ವಚ್ಛಗೊಳಿಸಿ, ಹೂವಿನ ಗಿಡಗಳನ್ನು ನೆಡುವುದು ಸೇರಿದಂತೆ ಇತರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಮುಜರಾಯಿ ವ್ಯಾಪ್ತಿಗೆ ಬರುವ 491 ದೇವಾಲಯಗಳಲ್ಲಿ 26ರಂದು ಏಕಕಾಲದಲ್ಲಿ ಸ್ವಚ್ಛತಾ ಅಭಿ ಯಾನ ನಡೆಸಲಾಗುವುದು. ಇದಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಆಯಾ ತಹಶೀ ಲ್ದಾರರು ಅಭಿಯಾನದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದರು.

ಕದ್ರಿ ದೇವಸ್ಥಾನದ ಕಾರ್ಯನಿರ್ವ ಹಣಾಧಿಕಾರಿ ನಿಂಗಯ್ಯ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ, ಮುಜರಾಯಿ ಇಲಾಖೆಯ ಪ್ರಭಾಕರ್, ತಹಶೀಲ್ದಾರ್‌ರು, ವಿವಿಧ ದೇಗುಲಗಳ ಆಡಳಿತಾಧಿಕಾರಿಗಳು ಭಾಗವಹಿಸಿದ್ದರು.

ಕೈ ಜೋಡಿಸಿ
ಮಂಗಳೂರು ನಗರದಲ್ಲಿ ರಾಮಕೃಷ್ಣ ಮಿಷನ್, ಈ ಅಭಿಯಾನಕ್ಕೆ ಕೈಜೋಡಿಸ ಲಿದೆ. ಶಾಲಾ ಕಾಲೇಜುಗಳು, ಸ್ವಯಂ ಸೇವಾ ಸಂಘಟನೆಗಳು, ಸ್ವಯಂ ಸೇವಕ ರು, ಸಾರ್ವಜನಿಕರು ಸ್ವಇಚ್ಛೆಯಿಂದ ಈ ಅಭಿಯಾನ ದಲ್ಲಿ ಕೈಜೋಡಿಸಬೇಕು ಎಂದು ಎಂ.ಕೆ. ಪ್ರಮೀಳಾ ಅವರು ಮನವಿ ಮಾಡಿದ್ದಾರೆ.

*
ಅಭಿಯಾನಕ್ಕಾಗಿ ಆಯಾ ದೇವಸ್ಥಾನ ಮಟ್ಟದಲ್ಲಿ ಪಿಡಿಒ, ಕಂದಾಯ ನಿರೀಕ್ಷಕ, ಗ್ರಾಮಕರಣಿಕ, ಆಡಳಿತಾಧಿಕಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಸದಸ್ಯರ ಸಮಿತಿ ಮಾಡಲಾಗಿದೆ.
-ಎಣ.ಕೆ. ಪ್ರಮೀಳಾ,
ಸಹಾಯಕ ಆಯುಕ್ತೆ, ಧಾರ್ಮಿಕ ದತ್ತಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT