ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರು, ಪೊಲೀಸರಲ್ಲೂ ಅರಿವು ಮೂಡಿಸಿ

ಬೆಳಗಾವಿಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷೆ ಮೀರಾ ಸಕ್ಸೇನಾ ಅಭಿಮತ
Last Updated 24 ಮಾರ್ಚ್ 2017, 6:42 IST
ಅಕ್ಷರ ಗಾತ್ರ

ಬೆಳಗಾವಿ: ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲದೇ ಸರ್ಕಾರಿ ನೌಕರರು ಮತ್ತು ಪೊಲೀಸರಲ್ಲಿಯೂ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷೆ ಮೀರಾ ಸಕ್ಸೇನಾ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಅಪರಾಧವಿಜ್ಞಾನ  ಮತ್ತು ಅಪರಾಧಿಕ ನ್ಯಾಯ ವಿಭಾಗ, ನವದೆಹಲಿಯ ಇಂಡಿಯನ್ ಕೌನ್ಸಿಲ್ ಸೋಷಿಯಲ್ ಸೈನ್ಸ್‌ ರಿಸರ್ಚ್‌ ವತಿ ಯಿಂದ ಕುವೆಂಪು ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಮಾನವ ಹಕ್ಕುಗಳ ಕುರಿತ ರಾಷ್ಟ್ರೀಯ ಸಮ್ಮೇಳನ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘90,000ಕ್ಕೂ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಆಯೋಗದಲ್ಲಿ ದಾಖಲಾಗಿವೆ. ಅವು ಗಳಲ್ಲಿ 52,000 ಪ್ರಕರಣಗಳ ವಿಚಾರಣೆ ಪೂರ್ಣಗೊಂಡು ಸಾರ್ವಜನಿಕರಿಗೆ ನ್ಯಾಯ ಒದಗಿಸಲಾಗಿದೆ. ಆಯೋಗಕ್ಕೆ ದಾಖಲಾಗಿರುವ ಪ್ರಕರಣಗಳಲ್ಲಿ ಶೇ. 50ರಷ್ಟು ಪೊಲೀಸ್‌ ದೌರ್ಜನ್ಯದ ಕುರಿತಾಗಿವೆ. ಆದ್ದರಿಂದ ಮುಖ್ಯವಾಗಿ ಪೊಲೀಸರಲ್ಲಿ ಮಾನವ ಹಕ್ಕುಗಳ ಜಾಗೃತಿ ಮೂಡಿಸುವುದು ಅನಿವಾರ್ಯ ವಾಗಿದೆ’ ಎಂದು ತಿಳಿಸಿದರು.

ಹಕ್ಕುಗಳ ಉಲ್ಲಂಘನೆ: ‘ಮಾನವ ಸ್ವಾವಲಂಬಿಯಾಗಿ ಮತ್ತು ಆರೋಗ್ಯಕರ ವಾಗಿ ಬದುಕು ನಿರ್ವಹಿ ಸಲು ಅವಶ್ಯ ವಿರುವ ಮೂಲ ಸೌಕರ್ಯ ಮತ್ತು ವ್ಯವಸ್ಥೆಗಳನ್ನು ಒದಗಿಸಿಕೊಡು ವುದೇ ಆಯೋಗದ ಕರ್ತವ್ಯವಾಗಿದೆ.

ಅನಾದಿ ಕಾಲದಿಂದಲೂ ಸಮಾಜದಲ್ಲಿ ರೂಢಿಯಲ್ಲಿದ್ದ ಪಂಚಾಯ್ತಿ ವ್ಯವಸ್ಥೆ ಯಿಂದ ಕೂಡ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿದೆ. ಈ ವ್ಯವಸ್ಥೆಯು ದೀನ ದಲಿತರು ಹಾಗೂ ಮಹಿಳೆಯರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ’ ಎಂದು ಹೇಳಿದರು.

ನಿವೃತ್ತ ಅಧಿಕಾರಿ ಎಸ್.ಎಂ. ಜಾಮದಾರ ಮಾತನಾಡಿ, ‘ಅಧಿಕಾರ ಮತ್ತು ರಾಜ್ಯ ವಿಸ್ತರಣೆಗಾಗಿ ವಿಶ್ವದ ಮಹಾನ್ ರಾಜರುಗಳೆಲ್ಲ ಕಗ್ಗೊಲೆ ಮತ್ತು ನಾಗರಿಕರ ಮಾರಣಹೋಮ ನಡೆಸಿ ದ್ದಾರೆ. ಅಲೆಗ್ಸಾಂಡರ್, ಬಾಬರ್, ಚಂಗೀಸ್ ಖಾನ್, ತೈಮೂರ ಮೊದ ಲಾದವರು 30 ಮಿಲಿಯನ್‌ಗೂ ಹೆಚ್ಚು ನಾಗರಿಕರನ್ನು ಕೊಲೆಗೈದಿದ್ದಾರೆ.

2ನೇ ಮಹಾಯುದ್ಧದಲ್ಲಿ 40 ಮಿಲಿಯನ್‌ಗೂ ಹೆಚ್ಚು ಅಮಾಯಕ ನಾಗರಿಕರು ಸಾವನ್ನ ಪ್ಪಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆಯು ರೂಪಗೊಳಿಸಲು ಮುಂದಾಯಿತು’ ಎಂದು ತಿಳಿಸಿದರು.

ಅಲ್ಲಿಯೇ ಶೋಷಣೆ: ‘ವಿಶ್ವಸಂಸ್ಥೆ ನೇತೃತ್ವ ದಲ್ಲಿ ಮಾನವ ಹಕ್ಕುಗಳು ರೂಪ ಗೊಂಡರೂ ಅವುಗಳ ರಚನೆಯಲ್ಲಿ ಅಮೆರಿಕಾ, ಇಂಗ್ಲೆಂಡ್, ರಷ್ಯಾ ದೇಶಗಳು ಪ್ರಮುಖ ಪಾತ್ರ ವಹಿಸಿದ್ದವು. ವಿಪರ್ಯಾಸದ ಸಂಗತಿಯೆಂದರೆ ಆ ರಾಷ್ಟ್ರಗಳಲ್ಲಿಯೇ  ಅರಾಜಕತೆಯುಂಟು ಮಾಡಿ ಅಲ್ಲಿನ ನಾಗರಿಕರ ಮೇಲೆ ಶೋಷಣೆ ಮಾಡಿದ್ದಾರೆ’ ಎಂದು ವಿಶ್ಲೇಷಿಸಿದರು.

ನಂತರ ನಡೆದ ತಾಂತ್ರಿಕ ಅಧಿವೇಶನ ದಲ್ಲಿ ವಕೀಲ ಚಂದ್ರಶೇಖರ ಶಿರೂರ, ಪ್ರೊ.ಜೆ.ಎಲ್. ಕಲ್ಯಾಣ, ಪ್ರೊ.ಲಿಂಬ್ಯಾ ನಾಯಕ, ಪ್ರೊ.ಅಶೋಕ ಹಾಗೂ ಪ್ರೊ. ಅರವಿಂದ ವಿಷಯ ಮಂಡಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಿವಾನಂದ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ತಮಿಳುನಾಡಿನ ತಿರುನ್ವೇಲಿಯ ಎಂ.ಎಸ್. ವಿಶ್ವ ವಿದ್ಯಾಲಯದ ಪ್ರೊ. ಮಾಧವ ಸೋಮ ಸುಂದರಂ, ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ. ಸಿದ್ದು ಅಲಗೂರ, ಮರಾಠಿ ವಿಭಾಗದ ಮುಖ್ಯಸ್ಥ ಪ್ರೊ. ವಿನೋದ ಗಾಯಕವಾಡ, ಅಪರಾಧ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಆರ್.ಎನ್. ಮನಗೂಳಿ, ಎಸ್‌.ವಿ. ಚಂದ್ರಶೇಖರ ಉಪಸ್ಥಿತರಿದ್ದರು.

ಆರ್.ಎನ್. ಮನಗೂಳಿ ಸ್ವಾಗತಿಸಿ ದರು. ನಂದಿನಿ ದೇವರಮನಿ ಪರಿಚಯಿಸಿ ದರು.  ಮಹೇಶ್ವರಿ ಕಾಚಾಪುರ ವಂದಿಸಿ ದರು. ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಸಂಗನಗೌಡ ಢವಳಗಿ ಅವರು ಅಪರಾಧ ವಿಜ್ಞಾನ ವಿಭಾಗದ ವಿಧಿ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT