ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರದಹಳ್ಳಿ, ಮಂಡಗಳ್ಳಿ ಗ್ರಾಮಕ್ಕೆ ನೀರೇ ಶಾಪ

ಶಹಾಪುರ ತಾಲ್ಲೂಕಿನಲ್ಲಿ 22 ಶುದ್ಧ ಕುಡಿಯುವ ನೀರಿನ ಘಟಕ: ಫಿಲ್ಟರ್‌ಬೆಡ್ ಕೆರೆಯ ಆಸರೆ
Last Updated 24 ಮಾರ್ಚ್ 2017, 9:21 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬೇಸಿಗೆ ಕಾಲದಲ್ಲಿ ಕಡಿಮೆ. ನಾರಾಯಣಪುರ ಎಡದಂಡೆ ಕಾಲುವೆ (ಎನ್ಎಲ್‌ಬಿಸಿ) ನೀರು ಹರಿಯುತ್ತಿರುವುದರಿಂದ ಕಾಲುವೆ ವ್ಯಾಪ್ತಿ ಗ್ರಾಮಗಳಲ್ಲಿ ಅಂತರ್ಜಲ ಮಟ್ಟದ ಕುಸಿತವಿಲ್ಲ.

ಕೃಷ್ಣೆ ಹಾಗೂ ಭೀಮೆಯ ಎರಡೂ ನದಿ ತಾಲ್ಲೂಕಿನಲ್ಲಿ ಹರಿಯುತ್ತಿರುವುದು ವಿಶೇಷದ ಜೊತೆಯಲ್ಲಿ  ನಾಲ್ಕು ಬ್ರೀಜ್ ಕಂ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹವಿದೆ.

ನೀರು ಇರುವ ಕಡೆ ನಿರ್ವಹಣೆಯ ಸಮಸ್ಯೆ. ನಿರ್ವಹಣೆ ಇದ್ದ ಕಡೆಯಲ್ಲಿ ನೀರಿನ ಸಮಸ್ಯೆ ಇದೆ. ಎನ್ಎಲ್‌ಬಿಸಿ ಕಾಲುವೆ ನೀರು ಬರುವ ತನಕ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಬವಣೆ ಎದುರಾಗುವುದಿಲ್ಲ. ಕೇವಲ ಎರಡು ತಿಂಗಳು ಮಾತ್ರ ತುಸು ಸಮಸ್ಯೆ ಉಂಟಾಗುತ್ತದೆ.

ಅದರಲ್ಲಿ ತಾಲ್ಲೂಕಿನ ಶಾರದಹಳ್ಳಿ, ಮಂಡಗಳ್ಳಿ ನೀರೇ ಶಾಪವಾಗಿದೆ. ಗ್ರಾಮದ ಸುತ್ತಲು ಗದ್ದೆಗಳಿವೆ. ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿ ಸದಾ ನೀರು ಜಿನುಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಕೃಷ್ಣಾ ನದಿ ಪಾತ್ರದಲ್ಲಿ ಕೊಳ್ಳೂರ (ಎಂ), ಮರಕಲ್, ತುಮಕೂರ, ಅನಕಸೂಗೂರ, ಕೊಂಕಲ್, ಐಕೂರ, ಗೌಡೂರ, ಗೊಂದೆನೂರ, ಯಕ್ಷಿಂತಿ,ಟೊಣ್ಣೂರ, ಕೋಡಾಲ್, ಗುಂಡ್ಲೂರ, ಹೈಯ್ಯಾಳ (ಬಿ) ಹೀಗೆ 17 ಗ್ರಾಮಗಳು ಬರುತ್ತವೆ. ಗೌಡೂರ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ಬೊರವೆಲ್ ಕೊರೆಸಿದರೆ ಉಪ್ಪು ನೀರು ಬರುತ್ತವೆ. ಅನಿವಾರ್ಯವಾಗಿ ನದಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

ಅಲ್ಲದೆ ಕೃಷ್ಣಾ ನದಿಗೆ ಅಡ್ಡಲಾಗಿ ಗೂಗಲ್ ಬ್ರೀಜ್ ಕಂ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹವಿದ್ದ ಕಾರಣ ಅಲ್ಲಿನ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಅಂತರ್ಜಲಮಟ್ಟದ ಸಮಸ್ಯೆ ಇಲ್ಲ.

ಭೀಮಾ ನದಿತಟದಲ್ಲಿ 20 ಹಳ್ಳಿ ಬರುತ್ತವೆ. ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಸನ್ನತಿ ಬ್ರಿಜ್ ಕಂ ಬ್ಯಾರೇಜ್ ಇದೆ. ಅಲ್ಲದೆ ಜೋಳದಡಗಿ, ಗುರು ಸಣಗಿ ಗ್ರಾಮದ ಬಳಿ ಬ್ರೀಜ್ ಕಂ ಬ್ಯಾರೇಜ್ ಇದ್ದು, ನೀರಿನ ಸಂಗ್ರಹವಿದೆ.

ಆದರೆ, ನದಿ ಹಾಗೂ ಹಳ್ಳದ ಪಾತ್ರದಲ್ಲಿ ಫೆಬ್ರುವರಿಯಿಂದ ಜೂನ್ ತಿಂಗಳವರೆಗೆ ವಿದ್ಯುತ್ ಮೋಟಾರದಿಂದ ಬೆಳೆಗೆ ನೀರು ತೆಗೆದುಕೊಳ್ಳಬಾರದು ಎಂಬ ಷರತ್ತು ಇದ್ದರೂ ಅದನ್ನು ಯಾರು ಲೆಕ್ಕಿ ಸದೆ ನೀರು ಸೆಳೆದುಕೊಳ್ಳುತ್ತಾರೆ ಎಂಬು ವುದು ಅಧಿಕಾರಿಯೊಬ್ಬರು ತಿಳಿಸಿದರು.

ತಾಲ್ಲೂಕಿನ ನಂದಿಹಳ್ಳಿ(ಜೆ) ಗ್ರಾಮದ ಬೊರವೆಲ್‌ನಲ್ಲಿ ಉಪ್ಪು ನೀರು ಬರುತ್ತಿರುವುದರಿಂದ ಕುಡಿ ಯಲು ಯೋಗ್ಯವಾಗಿಲ್ಲ. ಗ್ರಾಮಸ್ಥರು ಅನಿವಾರ್ಯವಾಗಿ ಹಳ್ಳದಲ್ಲಿ ಒರತೆ ತೆಗೆದು ಕಲುಷಿತ ನೀರು ಸೇವನೆ ಮಾಡುತ್ತಾರೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ಸಾಮಾನ್ಯ ವಾಗಿದೆ. ಶಾಶ್ವತ ಪರಿಹಾರಕ್ಕೆ ಯಾರು ಮುಂದಾಗುತ್ತಿಲ್ಲ ಎನ್ನುತ್ತಾರೆ ಗ್ರಾಮದ ಯುವಕ ಬಂಡೇಗುರು ಸ್ವಾಮಿ. ಅದರಂತೆ ತಾಲ್ಲೂಕಿನ ಮುಡ ಬೂಳ, ಚಾಮನಾಳ, ಹತ್ತಿಗೂಡೂರ, ನಡಿಹಾಳ, ಚಂದಾಪೂರ, ಗುಂಡಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು ,ಬೊರವೆಲ್ ಮೂಲಕ ನೀರು ಸರಬರಾಜು ಮಾಡುತ್ತಾರೆ.

ತಾಲ್ಲೂಕಿನಲ್ಲಿ 22 ಶುದ್ಧ ಕುಡಿ ಯುವ ನೀರಿನ ಮಂಜೂರಾಗಿದ್ದು, ಅದರಲ್ಲಿ 11 ಈಗಾಗಲೇ ಕಾರ್ಯನಿರ್ವ ಹಿಸುತ್ತಲಿವೆ. ಆರು ಕಡೆ ವಿದ್ಯುತ್ ಸಮಸ್ಯೆ ಇದ್ದರೆ ಎರಡು ಕಡೆ ಜಾಗದ ಸಮಸ್ಯೆ ಇದೆ. ಕಿರು ನೀರು ಸರಬರಾಜು, ಬೊರವೆಲ್ ಕೊರೆಸಿದ್ದು ಇದೆ. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಕಾಣಿಸುವು ದಿಲ್ಲ ಎನ್ನುತ್ತಾರೆ ಎಂಜಿನಿಯರ್‌ ರಾಜಕುಮಾರ ಪತ್ತಾರ.

ನಗರ ಪ್ರದೇಶ: ಶಹಾಪುರ ಶಾಖಾ ಕಾಲುವೆ (ಎಸ್‌ಬಿಸಿ) ಮೂಲಕ ನಗರದ ಹೊರವಲಯದಲ್ಲಿರುವ ಫಿಲ್ಟರ್ ಬೆಡ್ ಕೆರೆಯಲ್ಲಿ ನೀರು ಸಂಗ್ರಹಿಸಿ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುತ್ತಾರೆ. ಈಗ ದಿನ ಬಿಟ್ಟು ದಿನ ನೀರು ನಲ್ಲಿ ಬರುತ್ತವೆ.

ಏಪ್ರಿಲ್, ಮೇ ತಿಂಗಳಲ್ಲಿ ಮೂರು ದಿನಕ್ಕೆ ಒಮ್ಮೆ ನೀರು ಬಿಡಲು ನಗರಸಭೆ ಸಿಬ್ಬಂದಿ ನಿರ್ಧರಿಸಿ ದ್ದಾರೆ. ಅಲ್ಲದೆ ಆಯಾ ಬಡಾವಣೆಯಲ್ಲಿ ಕಿರುನೀರು ಸರಬರಾಜು ಹಾಗೂ ಬೊರ್‌ವೆಲ್ ಇರುವುದರಿಂದ ನೀರಿನ ಸಮಸ್ಯೆ ಕಾಣಿಸುವುದಿಲ್ಲ.  ನಗರದ ಹೊರವಲಯದಲ್ಲಿರುವ ನಾಗರಕೆರೆ, ಮಾವಿನಕೆರೆಯಲ್ಲಿ ನೀರು ಸಂಗ್ರಹವಾ ಗಿದ್ದರಿಂದ ಅಂತರ್ಜಲಮಟ್ಟ ಕುಡಿಯುವುದು ಕಡಿಮೆ ಎನ್ನುತ್ತಾರೆ ನಗರಸಭೆ ಸಿಬ್ಬಂದಿ.

ಆದರೆ, ಓಬಿರಾಯನ ಕಾಲದ ನೀರು ಸಂಗ್ರಹಿಸುವ ಕೇಂದ್ರವಿದೆ. ಕೆಲ ಬಡಾವಣೆಗೆ ನಲ್ಲಿ ನೀರಿನ ಭಾಗ್ಯವಿಲ್ಲ. ಭೀಮಾನದಿಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪ್ರಸ್ತಾವನೆ ಬೇಸಿಗೆ ಕಾಲದಲ್ಲಿ ಮಾತ್ರ ನೆನಪಿಗೆ ಬರುತ್ತದೆ. ಕುಡಿಯುವ ನೀರಿನ ಶಾಶ್ವತ ಯೋಜನೆ ಜಾರಿ ಗೊಳಿಸಲು ನಗರದ ಜನತೆ ಮನವಿ ಮಾಡಿದ್ದಾರೆ.
-ಟಿ.ನಾಗೇಂದ್ರ, ಶಹಾಪುರ

*
ಸಮಸ್ಯೆಗಳು ಬಂದರೆ ಸಂಪರ್ಕಿಸಲು ಕೋರಲಾಗಿದೆ. ಮುಡಬೂಳ, ಚಾಮನಾಳ,, ಹತ್ತಿಗೂಡೂರ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಸಿದ್ಧಪಡಿಸಲಾಗಿದೆ.
-ರಾಜಕುಮಾರ ಪತ್ತಾರ, ಎಇಇ ಜಿ.ಪಂ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT