ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಕೀಮ್ಸ್ ನಿರ್ದೇಶಕ ದತ್ತಾತ್ರೇಯ ಬಂಟ್ ವಜಾಗೊಳಿಸಿ: ಎಸ್.ಆರ್. ಹಿರೇಮಠ ಆಗ್ರಹ

Last Updated 24 ಮಾರ್ಚ್ 2017, 10:38 IST
ಅಕ್ಷರ ಗಾತ್ರ

ಧಾರವಾಡ: ಹುಬ್ಬಳ್ಳಿ ಕೀಮ್ಸ್ ನಿರ್ದೇಶಕ ದತ್ತಾತ್ರೇಯ ಬಂಟ್ ಅವರನ್ನು ಕೂಡಲೆ ವಜಾ ಗೊಳಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ಸರಕಾರಕ್ಕೆ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಡಾ.ಬಂಟ್ ಅವರು ಕೀಮ್ಸ್ ಹುದ್ದೆಗೆ ಅನರ್ಹ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ತೀರ್ಪು ನೀಡಿದೆ. ತೀರ್ಪು ಮನ್ನಿಸಿ ಸರಕಾರ ಕೂಡಲೇ ಬಂಟ್ ಅವರನ್ನು ವಜಾಗೊಳಿಸಬೇಕು’ ಎಂದರು.

‘ಬಂಟ್ ಅವರು ನಿಯಮಬಾಹಿರವಾಗಿ ನಿರ್ದೇಶಕರಾಗಿರುವುದಲ್ಲದೇ, ಕೀಮ್ಸ್‌ನಲ್ಲಿ ಹಲವು ಅಕ್ರಮಗಳನ್ನು ನಡೆಸಿದ್ದಾರೆ’ ಎಂದು ಹೇಳಿದರು.

‘ಕೀಮ್ಸ್ ನಿರ್ದೇಶಕ ಹುದ್ದೆಗೆ ಯೋಗ್ಯರನ್ನು ನೇಮಿಸ ಬೇಕು’ ಎಂದು ಅವರು ಆಗ್ರಹಿಸಿದರು.

ಕಪ್ಪತಗುಡ್ಡ ಪ್ರದೇಶವನ್ನು ಸಂರಕ್ಷಿತ ಅರಣ್ಯವೆಂದು ಘೋಷಿಸ ಬೇಕು ಎಂದು ಒತ್ತಾಯಿಸಿದ ಅವರು, ಅಕ್ರಮ ಅದಿರು ರಪ್ತು ಪ್ರಕರಣದಲ್ಲಿ ಲಾಡ್ ಸಹೋದರರ ಕಂಪೆನಿಗಳಿಗೆ ಎಸ್ಐಟಿ ಕ್ಲೀನ್ ಚೀಟ್ ಕೊಟ್ಟಿದ್ದು, ತನಿಖೆಯ ಹಾದಿ ತಪ್ಪಿಸಿದಂತಾಗಿದೆ ಎಂದು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT