ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಉಪ್ಪಿನ ಹೋಟೆಲ್!

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪ್ರವಾಸಿಗರೆಲ್ಲ ರಾತ್ರಿ ವಸತಿ ಮಾಡುವ ಪ್ರಸಂಗ ಬಂದಾಗ ಆದಷ್ಟೂ ನವೀನ ಬಗೆಯ ಹೋಟೆಲ್‌ಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ. ಸುಂದರವಾದ ಬೆಳಗು ಅವರದ್ದಾಗಬೇಕು ಎನ್ನುವ ನಿರೀಕ್ಷೆ ಸಹಜ.

ಬೆತ್ತ, ಹೆಂಚು, ಮಣ್ಣು, ಕರೀಕಲ್ಲು ಮುಂತಾದ ವಾಸ್ತು ಶಿಲ್ಪ ಇರುವ ವಸತಿ ತಾಣಗಳು ಜನಪ್ರಿಯವಾಗಿವೆ. ಅದಲ್ಲದೇ ಮರದ ಮೇಲಿನ ಮಚಾನ, ಬೆಟ್ಟದ ಮೇಲಿನ ಒಂಟಿ ಮನೆ ಇವೆಲ್ಲವೂ ಪ್ರವಾಸಿಗರ ನೆಚ್ಚಿನ ತಾಣವೇ!

ಅಮೆರಿಕದಲ್ಲೊಂದು ಹೋಟೆಲ್‌ ಇದೆ. ಇಲ್ಲಿ ಹೋದರೆ ಉಪ್ಪಿನ ಋಣ ತೀರಿಸುವುದೇ ಅಸಾಧ್ಯ.  ಉಸಿರಾಟದಿಂದ, ವಿಶ್ರಾಂತಿಯವರೆಗೂ ಉಪ್ಪಿನ ತಾಣವೇ ಇದು. ಹೆಸರು ಉಪ್ಪಿನ ಹೋಟೆಲ್‌! ‘ಪಲಾಸಿಯೊ ಡಿ ಸಾಲ್ಟ್’ ಎಂದು ಇದಕ್ಕೆ ಹೆಸರು.

ಹೆಸರಿಗೆ ತಕ್ಕಂತೆ ಹೋಟೆಲ್‌ನಲ್ಲಿ ಕಂಡ ಕಂಡ ಕಡೆಯೆಲ್ಲಾ ಉಪ್ಪೇ ಇರುತ್ತದೆ. ಏಕೆಂದರೆ ಹೋಟೆಲ್‌ನ ಎಲ್ಲ ಭಾಗಗಳೂ ಉಪ್ಪಿನಿಂದಲೇ ನಿರ್ಮಿಸಲಾಗಿದೆ. ಈ ವಿಶೇಷ ಹೋಟೆಲ್‌ ಕುರಿತು ಒಂದಿಷ್ಟು ಮಾಹಿತಿ.

ಪ್ರವಾಸಿಗರನ್ನು ಆಕರ್ಷಿಸುವಂತೆ ವಿಶೇಷ ಹೋಟೆಲ್‌ ನಿರ್ಮಿಸಬೇಕೆಂಬ ಉದ್ದೇಶದಿಂದ ಡಾನ್‌ ಜೌನ್‌ ಕ್ವಸೌಡ ಅವರು 1993ರಲ್ಲಿ ಈ ಹೋಟೆಲ್ ನಿರ್ಮಿಸಿದರು.

2002 ಮತ್ತು 2007ರಲ್ಲಿ ಎರಡು ಬಾರಿ ಕಟ್ಟಡವನ್ನು ನವೀಕರಿಸಲಾಗಿದೆ. ಮಳೆಗಾಲದಲ್ಲಿ ಕಟ್ಟಡದ ಗೋಡೆಗಳಿಗೆ ಹಾನಿಯಾಗುವುದರಿಂದ  ಆಗಾಗ್ಗೆ ನವೀಕರಿಸಲಾಗುತ್ತದೆ.

ಹೋಟೆಲ್‌ನಲ್ಲಿ 48 ಮಂದಿ ಉಳಿದುಕೊಳ್ಳುವ ವ್ಯವಸ್ಥೆ ಇದೆ. ಎರಡು ಕೊಠಡಿಗಳ 16 ಪ್ರತ್ಯೇಕ ರೂಮ್‌ಗಳಿವೆ. ಹೋಟೆಲ್‌ಗೆ ಬರುವ ಪ್ರವಾಸಿಗರು ಕುತೂಹಲಕ್ಕಾಗಿ ಗೋಡೆಗಳನ್ನು ಮುಟ್ಟಿ ರುಚಿ ನೋಡುತ್ತಾರೆ. ಇದು ನಿಜವಾಗಿಯೂ ಉಪ್ಪಿನಿಂದಲೇ ನಿರ್ಮಾಣವಾಗಿದೆ ಎಂಬುದನ್ನು ಎಲ್ಲರಿಗೂ ತಿಳಿಸಬೇಕಾಗುತ್ತದೆ. ಗೋಡೆಗಳನ್ನು ನೆಕ್ಕದಂತೆ ನಿಬಂಧನೆ ವಿಧಿಸಲಾಗಿದೆ ಎನ್ನುತ್ತಾರೆ ಹೋಟೆಲ್ ನಿರ್ವಾಹಕರು.

***

ವಿಶೇಷ
* ಗೋಡೆ, ಮಂಚ, ಕುರ್ಚಿ, ಮೇಜು, ಎಲ್ಲವೂ ಉಪ್ಪಿನಿಂದಲೇ ನಿರ್ಮಾಣ
* ಹೋಟೆಲ್‌ ನೆಲದ ಹಾಸು ಉಪ್ಪಿನಿಂದ ತುಂಬಿದೆ
* 35 ಸೆಂ.ಮೀ ಗಾತ್ರದ 10 ಲಕ್ಷ  ಉಪ್ಪಿನ ಬ್ಲಾಕ್‌ಗಳನ್ನು ಬಳಸಲಾಗಿದೆ
* ಆವಿ ಸ್ನಾನ, ಹಬೆ ಕೊಠಡಿ, ನೀರಿನ ಕೊಳಗಳು, ಉಪ್ಪು ನೀರಿನ ಸ್ನಾನದ ಕೊಳಗಳು ಇವೆ
* ಮನರಂಜನೆಗಾಗಿ ಕ್ರೀಡಾ ವಲಯವೂ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT