ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಟ್ವೆಂಟಿ–20 ಕ್ರಿಕೆಟ್ 30ರಿಂದ

Last Updated 24 ಮಾರ್ಚ್ 2017, 19:44 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಅಂಗವಿಕಲರಿಗಾಗಿ ಏಳನೇ ರಾಷ್ಟ್ರೀಯ ಅಂತರ ವಲಯ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯು ಮಾರ್ಚ್ 30 ರಿಂದ ಏಪ್ರಿಲ್ 1ರವರೆಗೆ ನಡೆಯಲಿದೆ.

ಭಾರತ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಅವರು ಅಧ್ಯಕ್ಷರಾಗಿರುವ ಅಖಿಲ ಭಾರತ ಅಂಗವಿಕಲರ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಈ ಟೂರ್ನಿಯು ನಡೆಯಲಿದೆ. ಈ ಟೂರ್ನಿ ಯಲ್ಲಿ  ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಕೇಂದ್ರ ವಲಯದ ತಂಡಗಳು ಸ್ಪರ್ಧಿಸಲಿವೆ. ಆತಿ ಥೇಯ ಪಶ್ಚಿಮ ವಲಯವು ಹಾಲಿ ಚಾಂಪಿಯನ್ ಕೂಡ ಹೌದು. ತನ್ನ ಅಂಗಳದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿ
ಕೊಳ್ಳಲು ಹೋರಾಡಲಿದೆ. 

‘ಬಿಸಿಸಿಐ ಮಾನ್ಯತೆಗಾಗಿ ನಾವು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಆಶ್ವಾಸನೆಗಳು ಮಾತ್ರ ಸಿಕ್ಕಿವೆ. ಅವುಗಳು ಕಾರ್ಯಗತವಾಗಿಲ್ಲ’ ಎಂದು ಅಜಿತ್ ವಾಡೇಕರ್ ಹೇಳಿದ್ದಾರೆ. ‘ಪ್ರತಿವರ್ಷವೂ ಒಂಬತ್ತು ಟೂರ್ನಿ ಗಳನ್ನು ಆಯೋಜಿಸುತ್ತಿದ್ದೇವೆ. ಇದೀಗ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಆಡಳಿತಾಧಿಕಾರಿಗಳ ಸಮಿತಿಯು ನಮ್ಮ ಅಹವಾಲಿಗೆ ಸ್ಪಂದಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT