ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟ್ಯ ದಾಹ ನಟನೆಯ ಮೋಹ

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಾಧುರಿ ದೀಕ್ಷಿತ್‌
‘ನೃತ್ಯ ನನಗೆ ಅಧ್ಯಾತ್ಮ ಅನುಭವದ ಜೊತೆಗೆ ಮನಸಿಗೆ ಶಾಂತಿ ಮತ್ತು ಸಂತೋಷ ನೀಡುತ್ತದೆ’ ಎಂದು ಮಾಧುರಿ ದೀಕ್ಷಿತ್ ಹಲವು ಬಾರಿ ಹೇಳುವ ಮೂಲಕ ತಾವೆಷ್ಟು ನೃತ್ಯಾರಾಧಕರು ಎಂಬುದನ್ನು ಸಾಬೀತು ಮಾಡಿದ್ದಾರೆ.
ತಮ್ಮ ಮೋಹಕ ನಗೆಯ ಜೊತೆಗೆ ಇವರು, ಸಿನಿಪ್ರಿಯರನ್ನು ಸೆಳೆದಿದ್ದು ನೃತ್ಯದ ಮೂಲಕವೇ. ನಟಿಯಾಗಿ ಇವರು ನೃತ್ಯದಲ್ಲಿ ಗಳಿಸಿದ ಪ್ರಾಮುಖ್ಯವನ್ನು ಬಹುಶಃ ಯಾವ ಬಾಲಿವುಡ್‌ ನಟಿಯೂ ಗಳಿಸಿರಲಿಕ್ಕಿಲ್ಲ.

*


ಮಲೈಕಾ ಅರೋರಾ ಖಾನ್‌
ಮಾದಕ ನೋಟದಿಂದಲೇ ಜನಪ್ರಿಯರಾಗಿರುವ ಮಲೈಕಾ, ಉತ್ತಮ ನೃತ್ಯಗಾರ್ತಿಯೂ ಹೌದು. ಹಲವು ಬಾರಿ ಇವರು ತಮ್ಮ ನೃತ್ಯದ ಮೂಲಕವೇ ಜನರಿಗೆ ಮನರಂಜನೆ ನೀಡಿದ್ದಾರೆ. ಅದರಲ್ಲಿಯೂ ‘ದಬಂಗ್‌’ ಸಿನಿಮಾದಲ್ಲಿನ ‘ಮುನ್ನಿ ಬದ್ನಾಮ್‌ ಹುಯಿ’ ಹಾಡಿನಲ್ಲಿ ಇವರ ನೃತ್ಯವನ್ನು ಮರೆಯಲು ಸಾಧ್ಯವೇ ಇಲ್ಲ.

*


ಹೃತಿಕ್‌ ರೋಷನ್‌
‘ಕಷ್ಟವೆನ್ನಿಸುವ ಹೆಜ್ಜೆ ಹಾಕುವುದೇ ನನಗೆ ಇಷ್ಟ’ ಹೀಗೆ ಡಾನ್ಸ್‌ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದ ಹೃತಿಕ್‌, ಮೊದಲ ಸಿನಿಮಾದಿಂದಲೂ ಎಂಥ ಅದ್ಭುತ ನೃತ್ಯಗಾರ ಎಂಬುದನ್ನು ಸಾಬೀತು ಮಾಡುತ್ತಾ ಬಂದಿದ್ದಾರೆ. ‘ಕಹೋ ನಾ ಪ್ಯಾರ್‌ ಹೆ’ ಸಿನಿಮಾದಲ್ಲಿನ ಇವರ ನೃತ್ಯ ಕಂಡು ಮನಸೋತವರು ಅನೇಕರು. ಮಂಡಿನೋವು ಇದ್ದಾಗಲೂ, ನೃತ್ಯದ ಸಖ್ಯವನ್ನು ಇವರು ಬಿಡಲಿಲ್ಲ. ‘ಕಾಬಿಲ್‌’ ಸಿನಿಮಾದಲ್ಲಿ ಕಣ್ಣು ಕಾಣದ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಅವರು, ಪಾತ್ರದ ನೈಜತೆಗೆ ಅನುಗುಣವಾಗಿ ಸ್ಟೆಪ್ಸ್ ಹಾಕಿರುವುದು ಹಲವರ ಪ್ರಶಂಸೆ ಗಳಿಸಿದೆ.

*


ಶಾಹಿದ್‌ ಕಪೂರ್‌
ಶೈಮಕ್‌ ದಾವರ್‌ ಬಳಿ ನೃತ್ಯಾಭ್ಯಾಸ ಮಾಡಿದ ಶಾಹಿದ್‌ ಕಪೂರ್, ಮೊದಲು ಪರದೆಯ ಮೇಲೆ ಕಾಣಿಸಿಕೊಂಡಿದ್ದು ಸಹ ನೃತ್ಯಗಾರನಾಗಿ. ‘ದಿಲ್‌ ತೊ ಪಾಗಲ್‌ ಹೇ’ ಸಿನಿಮಾದಲ್ಲಿ ಇವರು ಸಹ ನೃತ್ಯಗಾರರಾಗಿ ಕುಣಿದಿದ್ದನ್ನು ಸಾಮಾನ್ಯವಾಗಿ ಯಾರೂ ಗಮನಿಸಿರಲಿಕ್ಕಿಲ್ಲ. ‘ಇಶ್ಕ್‌ ವಿಶ್ಕ್‌’ ಸಿನಿಮಾದ ಮೂಲಕವೇ ಇವರು ಅಷ್ಟೊಂದು ಚೆನ್ನಾಗಿ ನೃತ್ಯ ಮಾಡುತ್ತಾರೆ ಎಂಬುದು ತಿಳಿದಿದ್ದು.  ಬಾಲಿವುಡ್‌ನ ಸಾಕಷ್ಟು ಅವಾರ್ಡ್‌ ಕಾರ್ಯಕ್ರಮದಲ್ಲಿ ಶಾಹಿದ್‌ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

*


ಜಾವಿದ್‌ ಜಫ್ರಿ
ನಟನೆಯ ಜೊತೆಗೆ ಹಾಡುಗಾರ, ನೃತ್ಯಕಲಾವಿದ, ಚಿತ್ರನಿರ್ಮಾಪಕ, ನಿರೂಪಕ... ಹೀಗೆ ಜಾವಿದ್‌ ಜಫ್ರಿ ಪ್ರತಿಭೆ ಒಂದೇ ಕ್ಷೇತ್ರಕ್ಕೆ ಸೀಮಿತವಾದುದಲ್ಲ. ಸಿನಿಮಾ ಅಂಗಳವನ್ನು ಪ್ರವೇಶಿಸಿದ ಪ್ರಾರಂಭದಲ್ಲಿಯೇ ಇವರು ನೃತ್ಯದ ಮೂಲಕ ಗಮನಸೆಳೆದಿದ್ದರು. ಇವರ ನೃತ್ಯವನ್ನು ಆರಾಧಿಸುವ ಹಲವು ಬಾಲಿವುಡ್‌ ಮಂದಿ ಇದ್ದಾರೆ. ಹಲವು ಸಿನಿಮಾಗಳಲ್ಲಿ ಕೋರಿಯೊಗ್ರಾಫರ್‌ ಆಗಿಯೂ ಇವರು ಕೆಲಸ ಮಾಡಿದ್ದಾರೆ. ನೃತ್ಯಕ್ಕೆ ಸಂಬಂಧಪಟ್ಟ ರಿಯಾಲಿಟಿ ಡಾನ್ಸ್‌ ಷೋ ‘ಬೂಗಿ ವೂಗಿ’ಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ.

*


ರಣಬೀರ್‌ ಕಪೂರ್‌
‘ಸಾವರಿಯಾ’ ಸಿನಿಮಾದ ನಟನೆಯಿಂದಾಗಿ ಭರವಸೆಯ ನಟ ಎನಿಸಿಕೊಂಡವರು ರಣಬೀರ್‌ ಕಪೂರ್. ‘ಬತ್ತಮೀಜ್‌ ದಿಲ್‌’ ಸಿನಿಮಾದ ಮೂಲಕ ತಾವು ಪ್ರತಿಭಾವಂತ ನೃತ್ಯಗಾರ ಎಂಬುದನ್ನೂ ರುಜು ಮಾಡಿದ್ದಾರೆ.  ‘ಯೇ ಜವಾನಿ ಹೇ ದಿವಾನಿ’ ಸಿನಿಮಾದಲ್ಲಿನ ಇವರ ನೃತ್ಯ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

*


ಕತ್ರೀನಾ ಕೈಫ್‌
ನಟನೆಗಿಂತ ತಮ್ಮ ಸೌಂದರ್ಯದ ಮೂಲಕವೇ ಜನಪ್ರಿಯತೆ ಗಳಿಸಿದವರು ಕತ್ರೀನಾ ಕೈಫ್‌. ದಂತದ ಗೊಂಬೆಯಂತಿರುವ ಕತ್ರೀನಾ ಪ್ರಾರಂಭದಲ್ಲಿ ಹೇಳಿಕೊಳ್ಳುವಂಥ

ಡಾನ್ಸ್‌ ಮಾಡುತ್ತಿರಲಿಲ್ಲ. ನಟನೆಯಲ್ಲಿ ಅಷ್ಟಕಷ್ಟೇ ಎನಿಸಿಕೊಂಡರೂ ನೃತ್ಯದ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ‘ಶೀಲಾ ಕಿ ಜವಾನಿ’, ‘ಚಿಕಿನಿ ಚಮೇಲಿ’ ಹಾಡಿಗೆ ಸೊಗಸಾಗಿ ಸೊಂಟ ಬಳುಕಿಸಿದ ಕತ್ರೀನಾ ಹಲವರನ್ನು ನಿಬ್ಬೆರಗಾಗಿಸಿದ್ದಾರೆ.

*


ಮಿಥುನ್‌ ಚಕ್ರವರ್ತಿ
‘ಐಯಾಮ್‌ ಎ ಡಿಸ್ಕೊ ಡಾನ್ಸರ್‌’ ಹಾಡು ಕೇಳಿದ ಕ್ಷಣ ಮಿಥುನ್‌ ಚಕ್ರವರ್ತಿ ಕಣ್ಣೆದುರಿಗೆ ಬರುತ್ತಾರೆ. ಒಂದು ಕಾಲದಲ್ಲಿ ಎಲ್ಲರ ಬಾಯಲ್ಲಿ ನಲಿಯುತ್ತಿದ್ದ ಹಾಡು ಇದು. ‘ಡಿಸ್ಕೊ ಡಾನ್ಸರ್‌’ ಸಿನಿಮಾ ಇವರ ಪ್ರತಿಭೆಯನ್ನು ಸಾಬೀತುಪಡಿಸಿದ್ದರಿಂದ ಇವರು ಬಾಲಿವುಡ್‌ನಲ್ಲಿ ನೆಲೆಯೂರಲು ಸಾಧ್ಯವಾಯಿತು. ಹಿಂದಿಯ ‘ಜೀ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡಾನ್ಸ್ ಇಂಡಿಯಾ ಡಾನ್ಸ್‌’ ಹಾಗೂ ‘ಡಾನ್ಸ್‌ ಬಾಂಗ್ಲಾ ಡಾನ್ಸ್‌’ ಕಾರ್ಯಕ್ರಮಗಳಿಗೆ ಮಿಥುನ್‌  ಮಹಾತೀರ್ಪುಗಾರರಾಗಿದ್ದರು.

*


ಹೆಲೆನ್‌
ಬರ್ಮಾದಲ್ಲಿ ಜನಿಸಿದ್ದ ಹೆಲೆನ್‌ ‘ಡಾನ್ಸ್‌ ಐಕಾನ್‌’ ಎಂದೇ ಗುರುತಿಸಿಕೊಂಡಿದ್ದವರು. 70ರ ದಶಕದಲ್ಲಿ ಕ್ಲಬ್‌ ಡಾನ್ಸ್‌ ಮಾಡುವವರ ಸಂಖ್ಯೆ ಕಡಿಮೆಯಿತ್ತು. ಆ ರೀತಿಯ ನೃತ್ಯ ಮಾಡುವ ಧೈರ್ಯವೂ ಯಾರಿಗೂ ಇರಲಿಲ್ಲ. ‘ಮೇರಾ ನಾಮ್‌ ಚಿನ್‌ ಚಿನ್‌, ಚು’ ಹಾಡಿಗೆ ಇವರ ಕುಣಿತ ನೋಡಿ ಮೋಡಿಗೊಳಗಾದವರು ಹಲವರು. ಇದೇ ಇವರನ್ನು ಯಶಸ್ಸಿನ ಉತ್ತುಂಗಕ್ಕೆ ಕರೆದೊಯ್ಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT