ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಳಿಯಾಳ ಮೂಲ ಸೌಕರ್ಯ: ₹10 ಕೋಟಿ ಮಂಜೂರು’

Last Updated 27 ಮಾರ್ಚ್ 2017, 8:45 IST
ಅಕ್ಷರ ಗಾತ್ರ
ಹಳಿಯಾಳ : ಸ್ಥಳೀಯ ಪುರಸಭೆ 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಂಪೂರ್ಣ ಮೂಲ ಸೌಕರ್ಯ ಕಲ್ಪಿಸಬೇಕೆಂದು ₹ 10 ಕೋಟಿ ಸರ್ಕಾರದಿಂದ ಮಂಜೂರಿ ಮಾಡ ಲಾಗಿದೆ. ಹಾಗೂ ಹಳಿಯಾಳ ಜೋಯಿಡಾ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿಯೂ ಸಹ ಅನುದಾನ ಮಂಜೂರಿಯಾಗಿ ಕಾಮಗಾರಿ ಸಹ ನಡೆದಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳಿಯಾಳದ ಪುರಸಭೆ 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನೂತನ ಸ್ವಂತ ಕಟ್ಟಡ ಮತ್ತಿತರರ ಅಭಿವೃದ್ಧಿ ಕಾಮಗಾರಿಗಾಗಿ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿದ ಸರ್ಕಾರ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಮಾಡಿ ಮೂಲ ಸೌಕರ್ಯವನ್ನು ಒದಗಿಸಲಾಗುವುದು ಎಂದರು. 
 
ಜೋಯಿಡಾ ತಾಲ್ಲೂಕಿನ ಅಸು ಗ್ರಾಮದ ಕುಂಬಾರಹಳ್ಳಿ ಯೋಜನೆಗೆ ₹ 1 ಕೋಟಿ,  ತಾಲ್ಲೂಕಿನ ತಟ್ಟಿಗೇರಾ, ಗುಂಡೋಳ್ಳಿ ಮತ್ತು ತತ್ವಣಗಿ ಗ್ರಾಮ ಪಂಚಾಯ್ತಿಗಳಲ್ಲಿ ₹36.20 ಲಕ್ಷ ವೆಚ್ಚದಿಂದ ಕುಡಿಯುವ ನೀರಿನ ಯೋಜನೆ.
 
ಜೋಯಿಡಾ ತಾಲ್ಲೂಕಿನ ಕುಡಿಯುವ ನೀರಿಗಾಗಿ ₹76.50 ಲಕ್ಷ ಮಂಜೂರಿ, ಕರ್ನಾಟಕ ನೀರಾವರಿ ನಿಗಮ ದಿಂದ  ಹಳಿಯಾಳ ಮತ್ತು ಜೋಯಿಡಾ ತಾಲ್ಲೂಕಿನ ಎಸ್.ಸಿ ಮತ್ತು ಎಸ್.ಟಿ ಕಾಲೊನಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ₹6 ಕೋಟಿ ಅನುದಾನ ಮಂಜೂರಾಗಿದೆ.
 
ಸರ್ಕಾರದ ಮುಜರಾಯಿ ಇಲಾಖೆ ಯಿಂದ ಹಳಿಯಾಳದ ಆಯ್ದ ದೇವಸ್ಥಾನ ಗಳಿಗೆ ₹35 ಲಕ್ಷ ಅನುದಾನ, ಮುಂಡ ವಾಡದ ಲಕ್ಷ್ಮೀ ದೇವಸ್ಥಾನ ₹10 ಲಕ್ಷ, ಮಲವಡಿಯ ಲಕ್ಷ್ಮೀ ದೇವಸ್ಥಾನ ₹3 ಲಕ್ಷ, ತಟ್ಟಿಗೇರಿ ಲಕ್ಷ್ಮೀ ದೇವಸ್ಥಾನ ₹5 ಲಕ್ಷ, ಅಂಬೇವಾಡಿಯ ವಿಠ್ಠಲ ರುಕ್ಮೀಣಿ ದೇವಸ್ಥಾನಕ್ಕೆ ₹5 ಲಕ್ಷ, ಮಾಲವಾಡದ ಮರೇಮ್ಮಾ ದೇವಸ್ಥಾನ ₹4 ಲಕ್ಷ, ಶೇಖನಕಟ್ಟಾ ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ ₹4 ಲಕ್ಷ, ಅಂತ್ರೋಳ್ಳಿಯ ಬಾಕಾಂಬಿಕಾ ದೇವಸ್ಥಾನಕ್ಕೆ ₹4 ಲಕ್ಷ ಹಾಗೂ ಜೋಯಿಡಾದ ಕುಂಬ್ರಾಳದ ಗಣಪತಿ ದೇವಸ್ಥಾನ, ಚಾಂದೇವಾಡಿಯ ವಿಠ್ಠಲ ರುಕ್ಮಾಯಿ ದೇವಸ್ಥಾನ, ರಾಮ ನಗರದ ಗಣಪತಿ ದೇವಸ್ಥಾನ, ದಾಂಡೇಲಿಯ ಕರಿಯಮ್ಮಾ ದೇವಸ್ಥಾನ ಸೇರಿ ಒಟ್ಟು ₹37 ಲಕ್ಷ ಮಂಜೂರಾಗಿದೆ
 
ಪ್ರವಾಸೋದ್ಯಮ ಇಲಾಖೆಯಿಂದ ರಾಮನಗರದಲ್ಲಿ ಗೋಡಾವನ, ಗ್ರಾಮೀಣ ಶೆಡ್, ಮಾರುಕಟ್ಟೆ ರಸ್ತೆ ಹಾಗೂ ಇನ್ನಿತರ ಪ್ರವಾಸೋದ್ಯಮ ಅಭಿವೃದ್ಧಿ  ಕಾಮಗಾರಿಗಾಗಿ ₹2 ಕೋಟಿ ಅನುದಾನವನ್ನು ಮಂಜೂರಾಗಿದೆ.  
 
ಕಾರವಾರದ ಠಾಗ್ಯೋರ ಬೀಚ್ ನಲ್ಲಿ ನೆರೆ ಸುರಕ್ಷತೆಗಾಗಿ ₹1 ಕೋಟಿ, ಜಟ್ಟಿ ನಿರ್ಮಾಣಕ್ಕಾಗಿ ₹2 ಕೋಟಿ, ಪಾವಿನಕುವ್ರೇ ಬೀಚ್ ಮತ್ತು ಜಟ್ಟಿ ನಿರ್ಮಾಣಕ್ಕೆ ₹2 ಕೋಟಿ, ಕಾರವಾರ ಸದಾಶಿವಗಡ ರಸ್ತೆ ಅಭಿವೃದ್ಧಿಗಾಗಿ ₹2 ಕೋಟಿ, ನೇತ್ರಾಣಿ ಬೀಚ್  ಅಭಿವೃದ್ದಿ ಹಾಗೂ ಜಟ್ಟಿ ನಿರ್ಮಾಣಕ್ಕಾಗಿ ₹2 ಕೋಟಿ, ದೇವಭಾಗ ಬೀಚ್ ಅಭಿವೃದ್ಧಿ ಹಾಗೂ ಜಟ್ಟಿ ನಿರ್ಮಾಣ ₹2 ಕೋಟಿ, ಮುರ್ಡೇಶ್ವರ ಬೀಚ್ ಅಭಿವೃದ್ಧಿ ಮತ್ತು ಜಟ್ಟಿ ನಿರ್ಮಾಣ ₹2 ಕೋಟಿ ಅನುದಾನ ಮಂಜೂರಿಯಾಗಿದೆ.
 
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತರಾಜ್ ಇಲಾಖೆಯಿಂದ ಹಳಿಯಾಳ ಮತ್ತು ಜೋಯಿಡಾ ತಾಲ್ಲೂಕಿನ ಎಸ್.ಸಿ ಎಸ್,ಟಿ ಸಮುದಾಯ ವಾಸಿಸುವ ಕಾಲೊನಿಗೆ ಮೂಲ ಸೌಕರ್ಯ ಒದಗಿಸಲು ₹3 ಕೋಟಿ ಅನುದಾನ, ದಾಂಡೇಲಿ ರಾಷ್ಟ್ರೀಯ ಕೌಶಲಅಭಿವೃದ್ಧಿ ಕೇಂದ್ರಕ್ಕೆ ಹೆಚ್ಚುವರಿಯಾಗಿ ₹10 ಕೋಟಿ ಅನು ದಾನ, ಹಳಿಯಾಳ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಿಂದ ಸಿದ್ದಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾಗುವ ಆಶ್ರಮ ಶಾಲೆಗೆ ₹4 ಕೋಟಿ ಮಂಜೂರಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT