ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ಜಾಹೀರಾತು ವಿವಾದ: ವಿಚಾರಣೆಗೆ ಮಧ್ಯಂತರ ತಡೆ

Last Updated 27 ಮಾರ್ಚ್ 2017, 19:12 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ಅವರು ಶೂ ಜಾಹೀರಾತಿನಲ್ಲಿ ವಿಷ್ಣು ವೇಷಧಾರಿಯಾಗಿ ಕಾಣಿಸಿಕೊಂಡ ವಿವಾದಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್‌ ನಿಯತಕಾಲಿಕೆಯ ನಾಲ್ವರು ಉದ್ಯೋಗಿಗಳ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ‘ಬ್ಯುಸಿನೆಸ್‌ ಟುಡೆ ಇಂಡಿಯಾ’ ಇಂಗ್ಲಿಷ್ ನಿಯತಕಾಲಿಕೆಯ ಉದ್ಯೋಗಿಗಳಾದ ಚೈತನ್ಯ ಕಲಬಾಗ್, ಸುವೀನ್‌ ಕೆ. ಸಿನ್ಹಾ, ಆಶೀಶ್‌ ಬಗ್ಗಾ ಹಾಗೂ ಸಂತೋಷ್‌ ಖುಷ್ವಾಹ್‌ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಸೋಮವಾರ ತಡೆ ನೀಡಿ ಆದೇಶಿಸಿದೆ.

‘ಬ್ಯುಸಿನೆಸ್‌ ಟುಡೆ ಇಂಡಿಯಾ  ನಿಯತಕಾಲಿಕೆಯ 2013ರ ಏಪ್ರಿಲ್‌  ಸಂಚಿಕೆಯಲ್ಲಿ ಧೋನಿ ಅವರು, ವಿಷ್ಣುವಿನ ವೇಷಧಾರಿಯಾಗಿ ರಿಬಾಕ್‌ ಕಂಪೆನಿಯ ಶೂಗಳನ್ನು ಕೈಯಲ್ಲಿ ಹಿಡಿದು ಜಾಹೀರಾತು ನೀಡಿದ್ದಾರೆ. ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ’ ಎಂದು ಆರೋಪಿಸಿ ಜಯಕುಮಾರ್ ಹಿರೇಮಠ್ ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ನ್ಯಾಯಪೀಠ ಪ್ರತಿವಾದಿ ಜಯಕುಮಾರ್ ಹಿರೇಮಠ ಅವರಿಗೆ ನೋಟಿಸ್‌ ಜಾರಿಗೆ ಆದೇಶಿಸಿದೆ. ನಿಯತ ಕಾಲಿಕೆಯ ಪ್ರಧಾನ ಸಂಪಾದಕ ಅರುಣ್‌ ಪುರಿ ಮತ್ತು ಧೋನಿ  ವಿರುದ್ಧದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ವಿಲೇವಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT