ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌: ಯಹೂದಿ ವ್ಯಕ್ತಿಗೆ ಧರ್ಮ ಆಯ್ಕೆ ಸ್ವಾತಂತ್ರ್ಯ

Last Updated 27 ಮಾರ್ಚ್ 2017, 19:33 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಗುರುತಿನ ದಾಖಲೆಗಳಲ್ಲಿ ಮುಸ್ಲಿಂ ಎಂದು ನಮೂದಾಗಿರುವ ತನ್ನ ಧರ್ಮವನ್ನು ಯಹೂದಿ ಎಂದು ಬದಲಿಸಿಕೊಳ್ಳಲು ವ್ಯಕ್ತಿಯೊಬ್ಬನಿಗೆ ಪಾಕಿಸ್ತಾನ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮುಸ್ಲಿಂ ಪ್ರಾಬಲ್ಯದ ದೇಶದಲ್ಲಿ ಇದು ಅಪರೂಪದ ನಡೆಯಾಗಿದೆ.

ಗುರುತಿನ ದಾಖಲೆಗಳಲ್ಲಿ ಧರ್ಮ ಬದಲಾಯಿಸಿಕೊಂಡಿರುವ ಯಹೂದಿ ಫಿಶೆಲ್ ಬೆನ್‌ಖಾಲ್ಡ್ (29) ಅವರನ್ನು ಅಂತರರಾಷ್ಟ್ರೀಯ ಮಾಧ್ಯಮಗಳು ‘ಪಾಕಿಸ್ತಾನದಲ್ಲಿರುವ ಕೊನೆಯ ಯಹೂದಿ’ ಎಂದು ಬಣ್ಣಿಸಿವೆ.

ಸಾಮಾನ್ಯವಾಗಿ, ರಾಷ್ಟ್ರೀಯ ಗುರುತಿನ ದಾಖಲೆಗಳಲ್ಲಿ ತಮಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡುವ ಅವಕಾಶ ಪಾಕಿಸ್ತಾನದ ನಾಗರಿಕರಿಗೆ ಇದೆ. ಆದರೆ,  ಮುಸ್ಲಿಂ ತಂದೆ ಮತ್ತು ಯಹೂದಿ ತಾಯಿಗೆ ಜನಿಸಿದ್ದ ಫಿಶೆಲ್ ಧರ್ಮ ಮುಸ್ಲಿಂ ಎಂದೇ ಗುರುತಿನ ದಾಖಲೆಗಳಲ್ಲಿ ನಮೂದಾಗಿತ್ತು. ಮುಸ್ಲಿಂ ಎಂದು ನೋಂದಣಿ ಮಾಡಿಸಿಕೊಂಡಿದ್ದರಿಂದ ಕಾನೂನಿನ ಪ್ರಕಾರ ಧರ್ಮ ಬದಲಿಸುವುದು ಸಾಧ್ಯವಿರಲಿಲ್ಲ. ಹಾಗೆ ಮಾಡಿದರೆ ಅದು ಧರ್ಮಭ್ರಷ್ಟತೆಯಾಗುತ್ತಿತ್ತು. ಮುಸ್ಲಿಂ ಕಾನೂನಿನ ಪ್ರಕಾರ ಇದಕ್ಕೆ ಮರಣದಂಡನೆ ವಿಧಿಸಬಹುದಾಗಿದೆ.

ಅವರು ರಾಷ್ಟ್ರೀಯ ನೋಂದಣಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಇತ್ತೀಚೆಗೆ  ಆಂತರಿಕ ಸಚಿವಾಲಯ ಅವರಿಗೆ ಧರ್ಮ ಬದಲಾಯಿಸಲು ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT