ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಶಿಬಿರಕ್ಕೆ ಮರಳಿದ ಅಮಿತ್

Last Updated 28 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಾಕಿ ಇಂಡಿಯಾ ಲೀಗ್ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ನೀಡಿರುವ ಡಿಫೆಂಡರ್‌ ಆಟಗಾರ ಅಮಿತ್ ರೋಹಿದಾಸ್‌ ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಾಕಿ ತಂಡದ ಶಿಬಿರಕ್ಕೆ ಮರಳಿದ್ದಾರೆ.

ಈ ಶಿಬಿರ ಸುಲ್ತಾನ್‌ ಅಜ್ಲನ್ ಷಾ ಕಪ್‌ ಹಾಕಿ ಟೂರ್ನಿಗೆ ತಂಡವನ್ನು ಆಯ್ಕೆ ಮಾಡಲು ಟ್ರಯಲ್ಸ್ ಕೂಡ ಆಗಿದೆ. ಅಮಿತ್‌ ಹಾಕಿ ಲೀಗ್‌ನಲ್ಲಿ ಕಳಿಂಗ ಲ್ಯಾನ್ಸರ್ಸ್ ತಂಡದಲ್ಲಿದ್ದರು.

2009ರಲ್ಲಿ ಅಮಿತ್‌ 18 ವರ್ಷದ ಒಳಗಿನವರ ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಆಡುವ ಮೂಲಕ ಜೂನಿಯರ್ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 2013ರಲ್ಲಿ ನವದೆಹಲಿಯಲ್ಲಿ ನಡೆದ ಎಫ್‌ಐಎಚ್‌ ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ್ದರು.

ಹಾಕಿ ವಿಶ್ವ ಲೀಗ್ ಫೈನಲ್ಸ್‌ಗೆ 2014ರಲ್ಲಿ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆ ಬಳಿಕ ಸತತ ಮೂರು ವರ್ಷ ಸ್ಥಾನ ಲಭಿಸದೇ ಪರದಾಡಿದ್ದರು.  ಇದರ ಬಗ್ಗೆ ಅವರು ಮಾತನಾಡಿದ್ದಾರೆ.

‘ಹಿಂದಿನ ಮೂರು ವರ್ಷಗಳು ಬದುಕಿನ ಅತ್ಯಂತ ಕಷ್ಟದ ದಿನಗಳು. ರಾಷ್ಟ್ರೀಯ ತಂಡದಲ್ಲಿ ಮರಳಿ ಸ್ಥಾನ ಪಡೆಯಬೇಕೆಂದು ತುಂಬಾ ಪ್ರಯುತ್ನಿಸುತ್ತಿದ್ದೆ. ಹಾಕಿ ಲೀಗ್‌ನಿಂದ ನನ್ನ ಆಟದಲ್ಲಿ ಸುಧಾರಣೆ ಮಾಡಿ ಕೊಳ್ಳಲು ಸಾಧ್ಯವಾಯಿತು. ಲೀಗ್‌ನಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಮತ್ತಷ್ಟು ತಿಳಿಯಲು ಶಿಬಿರ ನೆರವಾಗ ಲಿದೆ’ ಎಂದು ಅಮಿತ್ ಹೇಳಿದ್ದಾರೆ.

‘ಕಳಿಂಗ ತಂಡದ ನಾಯಕರಾಗಿದ್ದ ಫ್ಯೂರೆಸ್ಟ್‌ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಏಕೆಂದರೆ ಹಾಕಿ ಲೀಗ್‌ನಲ್ಲಿ ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ನನ್ನಲ್ಲಿನ ಪ್ರತಿಭೆಯನ್ನು ಗುರಿತಿಸಿ ಪ್ರೋತ್ಸಾಹ ನೀಡಿದರು. ಹೊಸ ಕೌಶಲಗಳನ್ನು ಹೇಳಿಕೊಟ್ಟರು. ಇದರಿಂದ ಮತ್ತೆ ರಾಷ್ಟ್ರೀಯ ಶಿಬಿರದಲ್ಲಿ ಅವಕಾಶ ಲಭಿಸಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT