ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಬೇಗೆಗೆ ತಂಪು ತಂಬುಳಿ

Last Updated 31 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಊಟದೊಂದಿಗೂ ತಂಪು ನೀಡುವ ತಂಬುಳಿಗಳಿದ್ದರೆ ಊಟದ ರುಚಿಯೇ ಬೇರೆ. ಬೇವಿನಸೊಪ್ಪು, ಕೊತ್ತುಂಬರಿ ಬೀಜ, ಕೆಂಪುಮೆಣಸಿನ ಕಾಯಿಗಳಿಂದ ಶುಚಿರುಚಿಯಾದ ತಂಬುಳಿಗಳನ್ನು ತಯಾರಿಸಬಹುದು. ಅವನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ ಅರ್ಚನಾ ಜಿ. ಹೆಗಡೆ.

ಮೆಂತ್ಯಕಾಳಿನ ತಂಬುಳಿ
ಬೇಕಾಗುವ ಸಾಮಗ್ರಿಗಳು: 
ಮೆಂತೆಕಾಳು– 1/2 ಚಮಚ, ಜೀರಿಗೆ– 1/4ಚಮಚ, ಬೋಳ್ಕಾಳು– 4, ತೆಂಗಿನಕಾಯಿ ತುರಿ –1/2 ಕಪ್‌, ಕಡೆದ ಮಜ್ಜಿಗೆ– 1ಕಪ್, ಬೆಲ್ಲ – 1/4 ಕಪ್‌, ಉಪ್ಪು ರುಚಿಗೆ ತಕ್ಕಷ್ಟು,ಒಗ್ಗರಣೆಗೆ ಜೀರಿಗೆ ಅರ್ಧಚಮಚ ಎಣ್ಣೆ ಸ್ವಲ್ಪ.

ತಯಾರಿಸುವ ವಿಧಾನ: ಮೆಂತ್ಯಕಾಳನ್ನು ಸಣ್ಣ ಉರಿಯಲ್ಲಿ ಕಮ್ಮಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಜೀರಿಗೆ, ಬೋಳ್ಕಾಳು, ಕಾಯಿ ಸೇರಿಸಿ, ನುಣ್ಣಗೆ ರುಬ್ಬಿರಿ. ಆಮೇಲೆ ಬೇಕಷ್ಟೇ ನೀರು ಸೇರಿಸಿ, ಮಜ್ಜಿಗೆ, ಬೆಲ್ಲ, ಉಪ್ಪು ಹಾಕಿ ಹದ ಮಾಡಿಕೊಂಡು ಜೀರಿಗೆಯ ಒಗ್ಗರಣೆ ಕೊಡಿರಿ.(ಸಿಹಿ ಬೇಕೆನಿಸಿದರೆ ಬೆಲ್ಲವನ್ನು ಸೇರಿಸಿರಿ)

*


ಕೊತ್ತಂಬರಿ ಬೀಜದ ತಂಬುಳಿ
ಬೇಕಾಗುವ ಸಾಮಗ್ರಿಗಳು:
 ಕೊತ್ತಂಬರಿ ಬೀಜ – 1 ಚಮಚ, ಜೀರಿಗೆ – 1/4 ಚಮಚ, ಹಸಿಮೆಣಸು ಒಂದು (ಅಥವಾ ಅರ್ಧ),
ನಿಂಬೆಕಡಿ ಒಂದು ತೆಂಗಿನಕಾಯಿ ತುರಿ – 4/3 ಕಪ್‌, ರುಚಿಗೆ ಉಪ್ಪು ಒಗ್ಗರಣೆಗೆ ಎಣ್ಣೆ ಸಾಸಿವೆಕಾಳು ಸ್ವಲ್ಪ

ತಯಾರಿಸುವ ವಿಧಾನ: ತೆಂಗಿನಕಾಯಿಯ ಜೊತೆ ಕೊತ್ತಂಬರಿ ಬೀಜ, ಜೀರಿಗೆ, ಮೆಣಸು, ಸೇರಿಸಿ ನುಣ್ಣಗೆ ರುಬ್ಬಿರಿ. ನಂತರ ಬೇಕಷ್ಟು ನೀರು ಸೇರಿಸಿ ಉಪ್ಪು, ಹುಳಿ ಸೇರಿಸಿ ಸಾಸಿವೆ ಕಾಳಿನ ಒಗ್ಗರಣೆ ಕೊಟ್ಟರೆ ರುಚಿಕರವಾದ ತಂಬುಳಿ ಸಿದ್ಧವಾಗುತ್ತದೆ.

*


ಮಜ್ಜಿಗೆ ತಂಬುಳಿ
ಬೇಕಾಗುವ ಸಾಮಗ್ರಿಗಳು:
ಕಡೆದ ಮಜ್ಜಿಗೆ – 3 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ – 1/4 ಕಪ್, ಹಸಿಮೆಣಸು –1, ಹೆಚ್ಚಿದ ಕೊತ್ತಂಬರಿಸೊಪ್ಪು ಸ್ವಲ್ಪ ರುಚಿಗೆ ಉಪ್ಪು, ಒಗ್ಗರಣೆಗೆ ಎಣ್ಣೆ, ಸಾಸಿವೆಕಾಳು ಸ್ವಲ್ಪ ಚಿಟಿಕೆ ಇಂಗು.

ತಯಾರಿಸುವ ವಿಧಾನ: ಕಡೆದ ಮಜ್ಜಿಗೆಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿಸೊಪ್ಪು, ಉಪ್ಪು ಸೇರಿಸಿಕೊಳ್ಳಿ. ನಂತರ ಒಗ್ಗರಣೆಗೆ ಎಣ್ಣೆ ಕಾಯಿಸಿಕೊಂಡು ಸಾಸಿವೆಕಾಳು, ಹೆಚ್ಚಿದ ಹಸಿಮೆಣಸು, ಇಂಗು ಹಾಕಿ  ಹದ ಮಾಡಿಕೊಂಡ ಮಜ್ಜಿಗೆಗೆ ಹಾಕಿರಿ. ಇದಕ್ಕೆ ಬೇಕೆನಿಸಿದರೆ ಅರ್ಧ ನಿಂಬೆಕಡಿ ಹಿಂಡಿರಿ.
(ತಂಬುಳಿಗಳಿಗೆ ಹಸಿಮೆಣಸಿನ ಬದಲಿಗೆ ಸಣ್ಣಮೆಣಸು ಇದ್ದರೆ ಹಾಕಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು).

*


ಬೇವಿನ ಸೊಪ್ಪಿನ ತಂಬುಳಿ 
ಬೇಕಾಗುವ ಸಾಮಗ್ರಿಗಳು:
ಎಳೆ ಬೇವಿನಸೊಪ್ಪು – 3ರಿಂದ 4 ಎಸಳು, ಉದ್ದಿನ ಬೇಳೆ – 1/4 ಚಮಚ, ಬಿಳಿ ಎಳ್ಳು – 1/4 ಚಮಚ, ಹಸಿಮೆಣಸು ಒಂದು(ಖಾರ ಜಾಸ್ತಿಯಿದ್ದರೆ ಅರ್ಧ ಸಾಕು), ತೆಂಗಿಕಾಯಿತುರಿ – 1/2 ಕಪ್, ಕಡೆದ ಮಜ್ಜಿಗೆ ಒಂದು ಕಪ್, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಉದ್ದಿನಬೇಳೆ, ಎಳ್ಳು, ಹಸಿಮೆಣಸನ್ನು ಸ್ವಲ್ಪವೇ ಎಣ್ಣೆ ಬಿಟ್ಟು  ಕಮ್ಮಗೆ ಹುರಿಯಿರಿ. ನಂತರ ಕಾಯಿತುರಿ ಸೇರಿಸಿ ನುಣ್ಣಗೆ ರುಬ್ಬಿ. ಬೇಕಿರುವಷ್ಟು ನೀರು ಹಾಕಿ ಉಪ್ಪು, ಕಡೆದ ಮಜ್ಜಿಗೆ ಸೇರಿಸಿಕೊಳ್ಳಿ.

*


ಕೆಂಪು ಮೆಣಸಿನಕಾಯಿ ತಂಬುಳಿ
ಬೇಕಾಗುವ ಸಾಮಗ್ರಿಗಳು: 
ಕೆಂಪು ಮೆಣಸಿನ ಕಾಯಿ – 2  (ಖಾರ ಜಾಸ್ತಿಯಿದ್ದರೆ ಒಂದು ಸಾಕು.), ಉದ್ದಿನಬೇಳೆ– 1 ಚಮಚ, ಬಿಳಿ ಎಳ್ಳು – 1/2 ಚಮಚ, ಬೆಳ್ಳುಳ್ಳಿ ಎಸಳು– 8, ಮೊಸರು – 1 ಕಪ್, ಕಡೆದ ಮಜ್ಜಿಗೆ – 1ಕಪ್, ರುಚಿಗೆ ಉಪ್ಪು.

ತಯಾರಿಸುವ ವಿಧಾನ: ಉದ್ದಿನ ಬೇಳೆ, ಮೆಣಸಿನಕಾಯಿ, ಎಳ್ಳನ್ನು ಸ್ವಲ್ಪ ಎಣ್ಣೆ ಬಿಟ್ಟು ಕಮ್ಮಗೆ ಹುರಿಯಿರಿ. ನಂತರ ಕಾಯಿಯ ಜೊತೆ ಸೇರಿಸಿ ಬೆಳ್ಳುಳ್ಳಿ ಹಾಕಿ ನುಣ್ಣಗೆ ರುಬ್ಬಿರಿ. ಇದಕ್ಕೆ ಮೊಸರು, ಕಡೆದ ಮಜ್ಜಿಗೆ ಮಿಕ್ಸ್ ಮಾಡಿ ಉಪ್ಪು ಸೇರಿಸಿಕೊಳ್ಳಿ. (ನೀರು ಬೇಕೆನಿಸಿದರೆ ಹಾಕಿರಿ).

*
ನೀವೂ ಬರೆಯಿರಿ
ಭೂಮಿಕಾ ಪುರವಣಿಗೆ  ಮಹಿಳೆ ಮತ್ತು ಕುಟುಂಬ ಸಂಬಂಧಿತ ಪ್ರಚಲಿತ ವಿದ್ಯಮಾನಗಳನ್ನು ಕುರಿತು ಮತ್ತು ನಳಪಾಕ, ಆರೋಗ್ಯ ವಿಭಾಗಕ್ಕೆ ನೀವೂ ಬರೆಯಬಹುದು.
ಇಮೇಲ್: bhoomika@prajavani.co.in
ಪುರವಣಿ ಕುರಿತು ನಿಮ್ಮ ಅನಿಸಿಕೆಗಳನ್ನು ಈ ನಂಬರ್‌ಗೆ ವ್ಯಾಟ್ಯ್ಸಾಪ್ ಮಾಡಿ 9482006746

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT