ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ತಡೆದು ₹ 5 ಲಕ್ಷ ದರೋಡೆ

Last Updated 7 ಏಪ್ರಿಲ್ 2017, 6:25 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಮೀನು ಸಾಗಣೆ ಕಂಟೈನರ್ ಲಾರಿಯೊಂದನ್ನು ಅಡ್ಡಗಟ್ಟಿದ ದರೋಡೆ ಕೋರರ ತಂಡ ಲಾರಿಯಲ್ಲಿದ್ದವರನ್ನು ಬೆದರಿಸಿ ಅವರಲ್ಲಿದ್ದ ₹ 5 ಲಕ್ಷ ಮತ್ತು ಮೊಬೈಲ್ ಫೋನ್‌ಗಳನ್ನು ಕಿತ್ತು ಕೊಂಡು ಪರಾರಿ ಆಗಿರುವ ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಕಲೇಶಪುರದಿಂದ ಲಾರಿಯ ಹಿಂದಿನಿಂದಲೇ ಬಂದ ಇನ್ನೋವಾ ಕಾರು ಶಿರಾಡಿ ಘಾಟ್‌ನಲ್ಲಿ ಗುಂಡ್ಯ ದೇವಸ್ಥಾನದಿಂದ 1 ಕಿ.ಮೀ. ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಲಾರಿಗೆ ಅಡ್ಡವಾಗಿ ನಿಂತು ಅದರಲ್ಲಿದ್ದವರು ₹ 4 ಲಕ್ಷದ 95 ಸಾವಿರ ಲೂಟಿ ಮಾಡಿದ್ದಾರೆ ಎಂದು ಲಾರಿ ಚಾಲಕ ವಿಘ್ನೇಶ್ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಘಟನಾ ವಿವರ: ಲಾರಿ ಗಂಗೊಳ್ಳಿಯಿಂದ ಚೆನ್ನೈಗೆ ಮೀನು ತೆಗೆದುಕೊಂಡು ಹೋಗಿ ವಾಪಸ್‌ ಬರುತ್ತಿತ್ತು. ಲಾರಿಯಲ್ಲಿ ಚಾಲಕ ವಿಘ್ನೇಶ್, ಕ್ಲೀನರ್ ಸಫ್ರೇಝ್, ಇನ್ನಿಬ್ಬರಾದ ಚೇತನ್, ಅರುಣ್ ಹೀಗೆ 4 ಮಂದಿ ಲಾರಿಯಲ್ಲಿ ಇದ್ದರು. ಶಿರಾಡಿ ಘಾಟಿಯಿಂದಲೇ ಕಪ್ಪು ಬಣ್ಣದ ಇನ್ನೋವಾ ಕಾರು ಲಾರಿಯನ್ನು ಬೆನ್ನತ್ತಿ ಕೊಂಡು ಬಂದಿದೆ. ನಸುಕಿನಲ್ಲಿ 2ರಿಂದ 2.30ರ ಹೊತ್ತಿಗೆ ಗುಂಡ್ಯ ಸಮೀಪಿಸುತ್ತಿ ದ್ದಂತೆ ನಿರ್ಜನ ಪ್ರದೇಶದಲ್ಲಿ ಕಾರನ್ನು ಲಾರಿಗೆ ಅಡ್ಡ ನಿಲ್ಲಿಸಿ ದರೋಡೆ ನಡೆಸಲಾಗಿದೆ.

ಕಾರಿನಲ್ಲಿ 4 ಮಂದಿ ಇದ್ದು, 3 ಮಂದಿ ಕಾರಿನಿಂದ ಇಳಿದು ಲಾರಿಗೆ ಹತ್ತಿದ್ದು, ಒಬ್ಬಾತ ಚಾಲಕ ವಿಘ್ನೇಶನನ್ನು ಎಳೆದು ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತುಕೊಂಡಿದ್ದಾನೆ.

ಇನ್ನಿಬ್ಬರು ಚಾಕು ಹಾಗೂ ಪಿಸ್ತೂಲ್ ಹಿಡಿದು ಲಾರಿಯಲ್ಲಿದ್ದ ಚಾಲಕ ವಿಘ್ನೇಶ್, ಕ್ಲೀನರ್ ಸಫ್ರೇಝ್, ಲೈನರ್‌ ಗಳಾದ ಚೇತನ್, ಅರುಣ್ ಅವರನ್ನು ಬೆದರಿಸಿ, ಹಣಕ್ಕಾಗಿ ಪೀಡಿಸಿದರು.

ಲಾರಿ ಚಾಲಕ ವಿಘ್ನೇಶ್ ತನ್ನ ಕಿಸೆ ಯಲ್ಲಿದ್ದ ₹15 ಸಾವಿರವನ್ನು ಅವರಿಗೆ ನೀಡಿದ್ದು, ‘ಇನ್ನು ತಮ್ಮ ಬಳಿ ಹಣವಿಲ್ಲ’ ಎಂದು ತಿಳಿಸಿದ್ದಾರೆ. ಆದರೆ ದರೋಡೆ ಕೋರರು ಇನ್ನಷ್ಟು ಹಣಕ್ಕೆ ಪೀಡಿಸಿದರು. ‘ಲಾರಿಯ ಡ್ಯಾಷ್ ಬೋರ್ಡ್‌ನಲ್ಲಿಡ ಲಾಗಿದ್ದ ಮೀನು ವ್ಯವಹಾರದ ಬಿಲ್‌ ನೊಂದಿಗೆ ಇದ್ದ ₹ 4 ಲಕ್ಷದ 95 ಸಾವಿರ ಹಣದ ಕಟ್ಟನ್ನು ತೆಗೆದು ಕೊಂಡರು. ಅಲ್ಲದೆ ನಾಲ್ಕು ಮೊಬೈಲ್‌ ಗಳನ್ನು ಕಿತ್ತುಕೊಂಡು ಪರಾರಿ ಆಗಿದ್ದಾರೆ’ ಎಂದು ವಿಘ್ನೇಶ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಾರಿ ಚಲಾಯಿಸಿಕೊಂಡೇ ದರೋಡೆ!: ಶಿರಾಡಿ ಗಡಿ ಹಾಗೂ ಗುಂಡ್ಯದ ನಡುವೆ ಸುಮಾರು ಅರ್ಧ ತಾಸು ದರೋಡೆ ಕೋರರು ಲಾರಿ ಚಲಾಯಿಸಿದ್ದು, ಹಣ, ಸೊತ್ತು ಸಿಕ್ಕಿದ ಬಳಿಕವಷ್ಟೇ ಲಾರಿ ಹಿಂಬದಿ ಬರುತ್ತಿದ್ದ ಇನ್ನೋವಾ ಕಾರಿ ನಲ್ಲಿ ಪರಾರಿಯಾಗಿದ್ದಾರೆ. ದರೋಡೆ ಕೋರರು ಬೆಂಗಳೂರು ಕನ್ನಡ, ತುಳು, ಬ್ಯಾರಿ ಭಾಷೆ ಮಾತನಾಡುತ್ತಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

***

ಪೊಲೀಸ್ ಮಾಹಿತಿ: 2 ತಾಸು ವಿಳಂಬ

ಘಟನೆ ರಾತ್ರಿ ಗಂಟೆ 2ರಿಂದ 2.30ರ ಹೊತ್ತಿಗೆ ನಡೆದಿದೆ. ಆದರೆ ಪೊಲೀಸರಿಗೆ ವಿಷಯ ತಿಳಿದಾಗ ಬೆಳಗ್ಗಿನ ಜಾವ ಸುಮಾರು 4 ಗಂಟೆಯಾಗಿತ್ತು. ದರೋಡೆ ನಡೆದ ಸ್ಥಳ ನಿರ್ಜನ ಪ್ರದೇಶವಾಗಿದ್ದು, 6 ಕಿ.ಮೀ. ಅಂತರದಲ್ಲಿ ಗುಂಡ್ಯ ಚೆಕ್‌ಪೋಸ್ಟ್‌ ಅಂಗಡಿ, ಹೋಟೆಲ್‌ಗಳಿವೆ.

ಲಾರಿಯಲ್ಲಿದ್ದವರು ಧರ್ಮಸ್ಥಳಕ್ಕೆ ತೆರಳಿ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದರೋಡೆ ನಡೆದ ವಿಷಯ ತಿಳಿಸಿದ್ದಾರೆ. ಆದರೆ ದರೋಡೆ ನಡೆದ ಸ್ಥಳ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಾಗಿರುವುದರಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಹೀಗಾಗಿ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ಸಿಗುವಾಗ 2 ಗಂಟೆ ತಡವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT