ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಶೀದ್‌ ದಾಳಿಗೆ ಬೆಚ್ಚಿದ ಲಯನ್ಸ್‌

ವಾರ್ನರ್‌–ಹೆನ್ರಿಕ್ಸ್‌ ಅಮೋಘ ಜೊತೆಯಾಟ; ಸನ್‌ರೈಸರ್ಸ್‌ಗೆ ಸತತ ಎರಡನೇ ಗೆಲುವು: ರೈನಾ ಬಳಗಕ್ಕೆ ಮತ್ತೆ ನಿರಾಸೆ
Last Updated 9 ಏಪ್ರಿಲ್ 2017, 18:57 IST
ಅಕ್ಷರ ಗಾತ್ರ

ಹೈದರಾಬಾದ್‌: ಮೊದಲ ಬಾರಿಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ಅವಕಾಶ ಪಡೆದಿರುವ ಆಫ್ಘಾ ನಿಸ್ತಾನದ ಯುವ ಪ್ರತಿಭೆ ರಶೀದ್‌ ಖಾನ್‌ ಭಾನುವಾರ ಉಪ್ಪಳದ ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೋಡಿ ಮಾಡಿದರು.

ತಮ್ಮ ಬತ್ತಳಿಕೆಯಲ್ಲಿದ್ದ  ಅಸ್ತ್ರಗಳನ್ನು ಒಂದೊಂ ದಾಗಿ ಪ್ರಯೋಗಿಸಿ ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ಗಳಾದ  ಬ್ರೆಂಡನ್‌ ಮೆಕ್ಲಮ್‌, ಸುರೇಶ್‌ ರೈನಾ ಮತ್ತು ಆ್ಯರನ್‌ ಫಿಂಚ್‌ ಅವರನ್ನು ಸ್ಪಿನ್‌ ಖೆಡ್ಡಾಕ್ಕೆ ಕೆಡವಿದ ಅವರು ‘ಮುತ್ತಿನ ನಗರಿಯ’ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.
ರಶೀದ್‌ (19ಕ್ಕೆ3) ಮತ್ತು ನಾಯಕ ಡೇವಿಡ್‌ ವಾರ್ನರ್‌  ಅವರ ಅಮೋಘ ಆಟದ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ  9 ವಿಕೆಟ್‌ಗಳಿಂದ ಗುಜ ರಾತ್‌ ಲಯನ್ಸ್‌ ವಿರುದ್ಧ ಜಯಭೇರಿ ಮೊಳಗಿಸಿತು.

ಇದರೊಂದಿಗೆ ವಾರ್ನರ್‌ ಪಡೆ ತವರಿನ ಅಂಗಳ ದಲ್ಲಿ  ಸತತ ಎರಡನೇ ಗೆಲುವು ದಾಖಲಿಸಿತು.  ಮೊ ದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸನ್‌ರೈಸರ್ಸ್‌ ತಂಡ ಹೋದ ಬಾರಿಯ ರನ್ನರ್ಸ್‌ ಅಪ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಗೆದ್ದಿತ್ತು. ಟಾಸ್‌ ಗೆದ್ದ ಸನ್‌ರೈಸರ್ಸ್‌ ನಾಯಕ ಡೇವಿಡ್‌ ವಾರ್ನರ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟ್‌ ಮಾಡಿದ ಸುರೇಶ್‌ ರೈನಾ ಸಾರಥ್ಯದ ಲಯನ್ಸ್ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಹೀಗಾಗಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 135ರನ್‌ ಗಳಿಸಲಷ್ಟೇ ಶಕ್ತವಾಯಿತು. ಸನ್‌ರೈಸರ್ಸ್‌ ತಂಡ 27 ಎಸೆತ ಗಳು ಬಾಕಿ ಇರು ವಂತೆ ಒಂದು ವಿಕೆಟ್‌ ಕಳೆದು ಕೊಂಡು ಗುರಿ ಮುಟ್ಟಿತು. 

ಆಸ್ಟ್ರೇಲಿಯಾ ಜೋಡಿಯ ಮೋಡಿ: ಗುರಿ ಬೆನ್ನಟ್ಟಿದ ಸನ್‌ ರೈಸರ್ಸ್‌ ತಂಡ ಆರಂಭಿಕ ಆಟಗಾರ ಶಿಖರ್‌ ಧವನ್‌ (9) ಅವರ ವಿಕೆಟ್‌ ಬೇಗನೆ ಕಳೆದುಕೊಂಡಿತು. ಆ ಬಳಿಕ ಆಸ್ಟ್ರೇಲಿಯಾದ ಆಟಗಾರರಾದ ಡೇವಿಡ್‌ ವಾರ್ನರ್‌ (ಔಟಾಗದೆ 76; 45ಎ, 6ಬೌಂ, 4ಸಿ) ಮತ್ತು ಮೊಯ್ಸಿಸ್‌ ಹೆನ್ರಿಕ್ಸ್‌( ಔಟಾಗದೆ 52; 39ಎ, 6ಬೌಂ) ಗುಡುಗಿದರು. ಇವರು ಮುರಿಯದ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 108ರನ್‌ ಗಳಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. 74 ಎಸೆತಗಳನ್ನು ಆಡಿದ ಈ ಜೋಡಿ 8.75ರ ಸರಾಸರಿ ಯಲ್ಲಿ ರನ್‌ ಪೇರಿಸಿ ಲಯನ್ಸ್‌ ಬೌಲರ್‌ಗಳನ್ನು ಹೈರಾಣಾಗಿಸಿತು.

ಪ್ರವೀಣ್ ಕುಮಾರ್‌ ಹಾಕಿದ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಗಳಿಸಿ ಸ್ಫೋಟಕ ಆಟಕ್ಕೆ ನಾಂದಿ ಹಾಡಿದ ವಾರ್ನರ್‌, ಸುರೇಶ್‌ ರೈನಾ ಎಸೆದ ಮೂರನೇ ಓವರ್‌ನಲ್ಲಿ ಎರಡು ಅಮೋಘ ಸಿಕ್ಸರ್‌ ಸಿಡಿಸಿ ಅಂಗಳದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು. ತೇಜಸ್‌ ಬರೋಕಾ ಬೌಲ್‌ ಮಾಡಿದ ಐದನೇ ಓವರ್‌ನ ಮೊದಲ ಎರಡು ಎಸೆತಗಳನ್ನು ಅವರು ಬೌಂಡರಿಗಟ್ಟಿದ ರೀತಿಯಂತೂ ಮನ ಸೆಳೆ ಯುವಂತಿತ್ತು. 
ಇನ್ನೊಂದೆಡೆ ಹೆನ್ರಿಕ್ಸ್‌  ರಟ್ಟೆ ಅರಳಿಸಿ ಆಡಿದರು. ತಾವೆ ಸೆದ ಮೂರನೇ ಎಸೆತ ವನ್ನು ಬೌಂಡರಿ ಗೆರೆ ದಾಟಿಸಿ ಖಾತೆ ತೆರೆದ ಅವರು ಧವಳ್‌ ಕುಲಕರ್ಣಿ ಬೌಲ್‌ ಮಾಡಿದ ಆರನೇ ಓವರ್‌ನ ನಾಲ್ಕು ಮತ್ತು ಐದನೇ ಎಸೆತಗಳನ್ನು ಬೌಂಡರಿಗೆ ಅಟ್ಟಿದಾಗ ಅಂಗಳದಲ್ಲಿ ಸನ್‌ ರೈಸರ್ಸ್‌ ಧ್ವಜಗಳು ರಾರಾಜಿಸಿದವು.

ಆ ನಂತರ ಈ ಜೋಡಿಯ ಅಬ್ಬರ ಹೆಚ್ಚಾಯಿತು. ಬಸಿತ್‌ ಥಂಪಿ ಹಾಕಿದ 10ನೇ ಓವರ್‌ನ ಮೊದಲ ಎರಡು ಎಸೆತ ಗಳಲ್ಲಿ ವಾರ್ನರ್‌ ಬೌಂಡರಿ ಗಳಿಸಿ ದರೆ, ಕರ್ನಾಟಕದ ಶಿವಿಲ್‌ ಕೌಶಿಕ್‌ ಬೌಲ್‌ ಮಾಡಿದ ನಂತರದ ಓವರ್‌ ನಲ್ಲಿ ಹೆನ್ರಿಕ್ಸ್‌ ಕೂಡ ಸತತ ಎರಡು ಬೌಂಡರಿ ಬಾರಿಸಿ ಅಭಿಮಾನಿಗಳ ಖುಷಿ ಹೆಚ್ಚಿಸಿದರು. ಹೀಗಾಗಿ 11ನೇ ಓವರ್‌ನಲ್ಲೇ ತಂಡದ ಮೊತ್ತ 100ರ ಗಡಿ ದಾಟಿತು.

ತಾವೆದುರಿಸಿದ 31ನೇ ಎಸೆತದಲ್ಲಿ ಬೌಂಡರಿ ಗಳಿಸಿ ಈ ಬಾರಿಯ ಲೀಗ್‌ನಲ್ಲಿ ಮೊದಲ ಅರ್ಧಶತಕ ದಾಖಲಿಸಿದ ವಾರ್ನರ್‌ ಆ ನಂತರ ಇನ್ನಷ್ಟು ಆಕ್ರಮಣ ಕಾರಿಯಾದರು. ಅವರು ಬೌಂಡರಿ (6X4) ಮತ್ತು ಸಿಕ್ಸರ್‌ಗಳ (2X6)ಮೂಲಕವೇ  36 ರನ್‌ ಪೇರಿಸಿದ್ದು ವಿಶೇಷ. ಬರೋಕಾ ಹಾಕಿದ 16ನೇ ಓವರ್‌ ಮೊದಲ ಎಸೆತದಲ್ಲಿ ಎರಡು ರನ್‌ ಗಳಿಸಿ ದ ಹೆನ್ರಿಕ್ಸ್‌ ಈ ಬಾರಿಯ ಲೀಗ್‌ನಲ್ಲಿ ಸತತ ಎರಡನೇ ಅರ್ಧಶತಕ ದಾಖಲಿಸಿದರು. ಇದೇ ಓವರ್‌ನ ಮೂರನೇ ಎಸೆತವನ್ನು ವಾರ್ನರ್‌ ಲಾಂಗ್‌ ಆನ್‌ನತ್ತ ಸಿಕ್ಸರ್‌ಗೆ ಅಟ್ಟುತ್ತಿದ್ದಂತೆ ಸನ್‌ರೈಸರ್ಸ್‌ ಪಾಳಯದಲ್ಲಿ ಸಂಭ್ರಮ ಮೇಳೈಸಿತು.

ರಶೀದ್‌ ಮಿಂಚಿನ ದಾಳಿ: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ  ಲಯನ್ಸ್‌ ತಂಡಕ್ಕೆ ಜೇಸನ್‌ ರಾಯ್‌ (31; 21ಎ, 5ಬೌಂ) ಅಬ್ಬರದ ಆರಂಭ ನೀಡಿದ್ದರು. ಆದರೆ ಸನ್‌ರೈಸರ್ಸ್‌ ತಂಡದ ರಶೀದ್‌ ಖಾನ್‌ ಸತತ ಮೂರು ಓವರ್‌ಗಳಲ್ಲಿ ಮೆಕ್ಲಮ್‌ (5), ಫಿಂಚ್‌ (3) ಮತ್ತು ರೈನಾ (5) ಅವರನ್ನು ಎಲ್‌ಬಿ ಡಬ್ಲ್ಯು ಬಲೆಯಲ್ಲಿ ಕೆಡವಿ ವಾರ್ನರ್‌ ಪಡೆಗೆ ಮೇಲುಗೈ ತಂದುಕೊಟ್ಟರು.

ರಶೀದ್‌ಗೆ ‘ಪರ್ಪಲ್‌ ಕ್ಯಾಪ್‌’
ಚೊಚ್ಚಲ ಐಪಿಎಲ್‌ ಆಡುತ್ತಿರುವ 18 ವರ್ಷದ ರಶೀದ್‌ ಖಾನ್‌ ಅವರು ಭಾನು ವಾರ ‘ಪರ್ಪಲ್‌ ಕ್ಯಾಪ್‌’ ಗೌರವಕ್ಕೆ ಭಾಜನರಾದರು. ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗೆ ಈ ಕ್ಯಾಪ್‌ ನೀಡಲಾಗುತ್ತದೆ. ರಶೀದ್‌ ಅವರು ಈ ಬಾರಿಯ ಟೂರ್ನಿಯ ಮೊದಲ ಆರು ಪಂದ್ಯಗಳ ಅಂತ್ಯಕ್ಕೆ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಅನಿಸಿದ್ದಾರೆ. ಎರಡು ಪಂದ್ಯಗಳನ್ನು ಆಡಿ ರುವ ಅವರ ಖಾತೆಯಲ್ಲಿ 5 ವಿಕೆಟ್‌ಗಳಿವೆ.

ಸ್ಕೋರ್‌ಕಾರ್ಡ್‌

ಗುಜರಾತ್‌ ಲಯನ್ಸ್‌
7 ಕ್ಕೆ 135  (20 ಓವರ್‌ಗಳಲ್ಲಿ)

ಜೇಸನ್‌ ರಾಯ್‌ ಸಿ ಶಿಖರ್‌ ಧವನ್‌ ಬಿ ಭುವನೇಶ್ವರ್‌ ಕುಮಾರ್‌  31
ಬ್ರೆಂಡನ್‌ ಮೆಕ್ಲಮ್‌ ಎಲ್‌ಬಿಡಬ್ಲ್ಯು ರಶೀದ್‌ ಖಾನ್‌  05
ಸುರೇಶ್‌ ರೈನಾ ಎಲ್‌ಬಿಡಬ್ಲ್ಯು ರಶೀದ್‌ ಖಾನ್‌   05
ಆ್ಯರನ್‌ ಫಿಂಚ್‌ ಎಲ್‌ಬಿಡಬ್ಲ್ಯು ರಶೀದ್‌ ಖಾನ್‌  03
ದಿನೇಶ್‌ ಕಾರ್ತಿಕ್‌ ಸಿ ನಮನ್‌ ಓಜಾ ಬಿ ಆಶಿಶ್‌ ನೆಹ್ರಾ  30
ಡ್ವೇನ್‌ ಸ್ಮಿತ್‌ ಸಿ ವಿಜಯ್‌ ಶಂಕರ್ (ಬದಲಿ ಆಟಗಾರ) ಬಿ ಭುವನೇಶ್ವರ್‌ ಕುಮಾರ್‌  37
ಧವಳ್‌ ಕುಲಕರ್ಣಿ ರನ್‌ಔಟ್‌ (ರಶೀದ್‌ ಖಾನ್‌)  01
ಪ್ರವೀಣ್‌ ಕುಮಾರ್‌ ಔಟಾಗದೆ  07
ಬಸಿಲ್‌ ಥಂಪಿ ಔಟಾಗದೆ  13

 

ಇತರೆ: (ಲೆಗ್ ಬೈ–1, ವೈಡ್–2) 03
ವಿಕೆಟ್‌ ಪತನ: 1–35 (ಮೆಕ್ಲಮ್‌; 4.5), 2–37 (ರಾಯ್‌; 5.2), 3–42 (ಫಿಂಚ್‌; 6.2), 4–57 (ರೈನಾ; 8.6), 5–113 (ಸ್ಮಿತ್‌; 16.4), 6–114 (ಕಾರ್ತಿಕ್‌; 17.2), 7–115 (ಕುಲಕರ್ಣಿ; 17.4).
ಬೌಲಿಂಗ್‌:  ಬಿಪುಲ್‌ ಶರ್ಮಾ 4–0–24–0, ಭುವನೇಶ್ವರ ಕುಮಾರ್‌ 4–0–21–2, ಆಶಿಶ್‌ ನೆಹ್ರಾ 4–0–27–1, ರಶೀದ್‌ ಖಾನ್‌ 4–0–19–3, ಬೆನ್‌ ಕಟಿಂಗ್‌ 3–0–29–0, ಮೊಸಸ್ ಹೆನ್ರಿಕ್ಸ್‌ 1–0–12–0.

 

ಸನ್‌ರೈಸರ್ಸ್‌ ಹೈದರಾಬಾದ್
1 ಕ್ಕೆ 140 (15.3 ಓವರ್‌ಗಳಲ್ಲಿ)

ಡೇವಿಡ್‌ ವಾರ್ನರ್‌ ಔಟಾಗದೆ  76
ಶಿಖರ್‌ ಧವನ್‌ ಸಿ ಬ್ರೆಂಡನ್‌ ಮೆಕ್ಲಮ್‌ ಬಿ ಪ್ರವೀಣ್‌ ಕುಮಾರ್‌  09
ಮೊಸಸ್‌ ಹೆನ್ರಿಕ್ಸ್‌ ಔಟಾಗದೆ  52
ಇತರೆ: (ವೈಡ್–3) 03
ವಿಕೆಟ್‌ ಪತನ:  1–32 (ಧವನ್‌; 3.1).
ಬೌಲಿಂಗ್‌:  ಸುರೇಶ್‌ ರೈನಾ 2–0–24–0, ಪ್ರವೀಣ್‌ ಕುಮಾರ್‌ 2–0–16–1, ತೇಜಸ್‌ ಬರೋಕಾ 3.3–0–33–0, ಧವಳ್‌ ಕುಲಕರ್ಣಿ 2–0–17–0, ಶಿವಿಲ್‌ ಕೌಶಿಕ್‌ 4–0–29–0, ಬಸಿಲ್‌ ಥಂಪಿ 2–0–21–0.

  ಫಲಿತಾಂಶ:    ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ 9 ವಿಕೆಟ್‌ ಗೆಲುವು.
  ಪಂದ್ಯಶ್ರೇಷ್ಠ: ರಶೀದ್‌ ಖಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT