ಮಾಗಡಿ
ವೈಭವದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ
10 Apr, 2017
ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ ಬ್ರಹ್ಮರಥೋತ್ಸವ ಭಕ್ತರ ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ವೈಭವದಿಂದ ನಡೆಯಿತು.


ವೈಭವದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ
ಮಾಗಡಿ: ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ ಬ್ರಹ್ಮರಥೋತ್ಸವ ಭಕ್ತರ ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ವೈಭವದಿಂದ ನಡೆಯಿತು.
ರಥ ಬೀದಿಯ ಸುತ್ತಲಿನ ಅರವಟಿಗೆಗಳಿಗೆ ಅಲಂಕೃತ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಹೊತ್ತುಕೊಂಡು ಹೋದ ಶ್ರೀಪಾದ ಕಾವಲುಗಾರರು ಪೂಜೆ ಸ್ವೀಕರಿಸಿ ರಥ ಮಂಟಪದಲ್ಲಿಟ್ಟರು. ಅಲಂಕೃತ ರಂಗನಾಥಸ್ವಾಮಿ ಶ್ರೀದೇವಿ ಭೂದೇವಿ ಸಹಿತ ಉತ್ಸವಮೂರ್ತಿಗಳನ್ನು ವಿವಿಧ ಹೂವುಗಳಿಂದ ಅಲಂಕೃತವಾಗಿದ್ದ ರಥದ ಮೇಲಿಟ್ಟು ಪೂಜಿಸಲಾಯಿತು.
Comments
ಈ ವಿಭಾಗದಿಂದ ಇನ್ನಷ್ಟು