ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರಿಗೆ ಸಾಸಿವೆ ಹೀಗಿದೆ ಕೃಷಿ

Last Updated 10 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಜೀರಿಗೆ ಬೆಳೆಗೆ ಸಮಶೀತೋಷ್ಣ ಹವಾಗುಣ ಒಳ್ಳೆಯದು. ಗೋಡು ಮಣ್ಣು ಬೇಸಾಯಕ್ಕೆ ಸೂಕ್ತ. ಸಾಸಿವೆಯನ್ನು ಕಪ್ಪು ಮಣ್ಣು ಹೊರತುಪಡಿಸಿ ಮಿಕ್ಕೆಲ್ಲಾ ಮಣ್ಣುಗಳಲ್ಲಿ ಮಿಶ್ರ ಬೆಳೆಯಾಗಿಯೂ ಬೆಳೆಯುತ್ತಾರೆ.

*

ಬಿತ್ತನೆಗೆ ಸೂಕ್ತ ಸಮಯ

- ಜೀರಿಗೆಗೆ ಏಪ್ರಿಲ್ ಮತ್ತು ಅಕ್ಟೋಬರ್‌ ತಿಂಗಳು

- ಸಾಸಿವೆಗೆ ಜುಲೈ, ಆಗಸ್ಟ್ ಮತ್ತು ಅಕ್ಟೋಬರ್‌ ತಿಂಗಳು

*

ಜೀರಿಗೆಯಲ್ಲಿ ಆರ್‌.ಎಸ್.-1, ಎಂ.ಸಿ.-43  ಮತ್ತು ಎಸ್. 404 ಹಾಗೂ ಸಾಸಿವೆಯಲ್ಲಿ ಆರ್‌.ಟಿ.-11 ಮತ್ತು ವರುಣ  ಸುಧಾರಿತ ತಳಿಗಳು.

*

ಜೀರಿಗೆಯಲ್ಲಿ ಮಡಿಗಳನ್ನು ತಯಾರಿಸಿ ಬೀಜ ಬಿತ್ತನೆ ಮಾಡಬೇಕು. ಬೀಜೋಪಚಾರ ಮಾಡಿದ ಬೀಜವನ್ನೇ ಬಿತ್ತಲು ಉಪಯೋಗಿಸಬೇಕು. ಆರಂಭದಲ್ಲಿ 3–4 ದಿನಗಳಿಗೊಮ್ಮೆ ನೀರು ಪೂರೈಸಬೇಕು. ಇಡೀ ಸಸ್ಯವನ್ನೇ ಕಿತ್ತು ಒಣಗಿಸಿ ನಂತರ ಕಾಳುಗಳನ್ನು ಬೇರ್ಪಡಿಸಬೇಕು.

*

ಜೀರಿಗೆ ಬೀಜ ಬಿತ್ತನೆ ಮಾಡಿದ ಸುಮಾರು ಮೂರೂವರೆ ತಿಂಗಳಿಗೆ ಬೆಳೆ ಕೊಯ್ಲಿಗೆ ಬರುತ್ತದೆ. ಸಾಸಿವೆ ಬಿತ್ತನೆ ಮಾಡಿದ ನಾಲ್ಕು ತಿಂಗಳ ನಂತರ ಬೆಳೆ ಕಟಾವಿಗೆ ಬರುತ್ತದೆ.

*

ಸಾಸಿವೆಯನ್ನು 45 ಸೆಂ.ಮೀ. ಅಂತರದ ಸಾಲುಗಳಲ್ಲಿ ತೆಳುವಾಗಿ ಬಿತ್ತನೆ ಮಾಡಿ ಸಸಿ ಮೇಲೇಳುತ್ತಿರುವಾಗ 15 ಸೆಂ.ಮೀ.ಗೆ ಒಂದರಂತೆ ಸಸಿಗಳನ್ನು ಉಳಿಸಿಕೊಂಡು ಉಳಿದವುಗಳನ್ನು ಕಿತ್ತು ಹಾಕಬೇಕು.  ಗಿಡಗಳನ್ನು ಕಿತ್ತು ಒಣಗಿಸಿ  ಕಾಳುಗಳನ್ನು ಸಂಗ್ರಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT