ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರ ಸುರಂಗಕ್ಕೆ ನಾರ್ವೆ ಸಿದ್ಧತೆ

Last Updated 10 ಏಪ್ರಿಲ್ 2017, 20:09 IST
ಅಕ್ಷರ ಗಾತ್ರ
ADVERTISEMENT

ಓಸ್ಲೊ (ನಾರ್ವೆ): ಹಡಗುಗಳ ಸಂಚಾರಕ್ಕೆ ವಿಶ್ವದ ಮೊದಲ ಸಮುದ್ರ ಸುರಂಗವನ್ನು ನಿರ್ಮಿಸಲು ನಾರ್ವೆ ಸಿದ್ಧತೆ ನಡೆಸಿದೆ.

‘ನಾರ್ವೆಯ ಪೆನಿನ್ಸುಲಾ ಕರಾವಳಿ ಬಳಿಯ ಸಮುದ್ರದಲ್ಲಿ ಸದಾಕಾಲ ಭಾರಿ ಬಿರುಗಾಳಿ ಇರುತ್ತದೆ. ಕಳೆದ ಮೂರು ದಶಕಗಳಿಂದ ಬಿರುಗಾಳಿಗೆ ಸಿಲುಕಿ, ಹಲವು ಹಡಗುಗಳು ಮುಳುಗಿವೆ ಮತ್ತು ನೂರಾರು ಮಂದಿ ಮೃತಪಟ್ಟಿದ್ದಾರೆ.

ಪೆನಿನ್ಸುಲಾ ಕರಾವಳಿಯನ್ನು ಬಳಸಿಕೊಂಡು ಬರುವ ಸಮುದ್ರ ಮಾರ್ಗವನ್ನು ತಪ್ಪಿಸುವ ಸಲುವಾಗಿ ನಾರ್ವೆ ಈ ಸುರಂಗವನ್ನು ನಿರ್ಮಿಸುತ್ತಿದೆ. ಯೋಜನೆ ಪೂರ್ಣಗೊಳಿಸಲು 31.5 ಕೋಟಿ ಅಮೆರಿಕನ್ ಡಾಲರ್ (ಸುಮಾರು ₹ 2,025 ಕೋಟಿ) ವೆಚ್ಚವಾಗಲಿದೆ’ ಎಂದು ನಾರ್ವೆ ಕರಾವಳಿ ಸಚಿವಾಲಯ ಅಂದಾಜಿಸಿದೆ. ‘ಪಶ್ಚಿಮ ನಾರ್ವೆಯ ಸೆಲ್ಜಿ ಬಳಿಯ ಪರ್ವತವನ್ನು ಸಮುದ್ರದ ಮಟ್ಟದಿಂದ 122 ಅಡಿ ಎತ್ತರಕ್ಕೆ ಕೊರೆದು ಸುರಂಗ ನಿರ್ಮಿಸಲಾಗುತ್ತದೆ. ಸುರಂಗ  ಸಮುದ್ರಮಟ್ಟದಿಂದ 40 ಅಡಿಯಷ್ಟು ಆಳ ಇರುತ್ತದೆ’ ಎಂದು ಸಚಿವಾಲಯ ತಿಳಿಸಿದೆ.

‘ಸುರಂಗ ಕೊರೆಯಲು ಸುಮಾರು 75 ಲಕ್ಷ ಟನ್‌ನಷ್ಟು ಬಂಡೆಗಳನ್ನು ಒಡೆಯಬೇಕಿದೆ. ಈ ಕೆಲಸಕ್ಕೆ ನಾಲ್ಕು ವರ್ಷ ಬೇಕಾಗುತ್ತದೆ. ಆನಂತರ ತಡೆಗೋಡೆ, ಚಾವಣಿ ನಿರ್ಮಾಣ ಕಾರ್ಯ ಆರಂಭವಾಗಲಿದೆ’ ಎಂದು ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT