ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಬಿಂದಿಗೆ ನೀರಿಗೆ ₹ 3 ನಿಗದಿ

Last Updated 11 ಏಪ್ರಿಲ್ 2017, 9:40 IST
ಅಕ್ಷರ ಗಾತ್ರ

ಚಾಮರಾಜನಗರ: ‘ಗ್ರಾಮಕ್ಕೆ ಸಮರ್ಪಕ ವಾಗಿ ಕುಡಿಯುವ ನೀರು ಪೂರೈಕೆ ಯಾಗುತ್ತಿಲ್ಲ. ನೀರಿಗಾಗಿ ಮೈಲಿಗಟ್ಟಲೇ ಬಿಸಿಲಿನಲ್ಲಿ ಕೃಷಿ ಪಂಪ್‌ಸೆಟ್‌ಗಳ ಬಳಿಗೆ ತೆರಳಬೇಕು. ವಿದ್ಯುತ್‌್ ವ್ಯತ್ಯಯವಾದರೆ ಅಲ್ಲೂ ನೀರು ಸಿಗುವುದಿಲ್ಲ. ಹಾಗಾಗಿ, ಖಾಸಗಿಯವರಿಂದ ಒಂದು ಬಿಂದಿಗೆ ನೀರಿಗೆ ₹ 3 ನೀಡಿ ತೆಗೆದುಕೊಳ್ಳುತ್ತಿ ದ್ದೇವೆ’
–ಹೀಗೆಂದು ತಾಲ್ಲೂಕಿನ ಬಂಡಿಗೆರೆ ಗ್ರಾಮದ ಮಂಗಳಮ್ಮ ಕುಡಿಯುವ ನೀರಿನ ಸಮಸ್ಯೆ ಬಿಡಿಸಿಟ್ಟರು.

ಮಳೆ ಇಲ್ಲದೆ ಗ್ರಾಮೀಣ ಪ್ರದೇಶ ದಲ್ಲಿ ನೀರಿಗೆ ತತ್ವಾರ ಉಂಟಾಗಿದೆ. ಜಿಲ್ಲೆಯಾದ್ಯಂತ ಜಲಕ್ಷಾಮ ಉಂಟಾಗಿದೆ.  ತಾಲ್ಲೂಕಿನ ಬಂಡಿಗೆರೆ ಮತ್ತು ವೆಂಕಟಯ್ಯನಛತ್ರ ಗ್ರಾಮದಲ್ಲಿ ನೀರಿಗೆ ಅಕ್ಷರಶಃ ಹಾಹಾಕಾರ ತಲೆದೋರಿದೆ.

ಖಾಸಗಿ ವ್ಯಕ್ತಿಗಳು ಇದನ್ನೇ ಬಂಡ ವಾಳ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ನೀರಿಗೆ ಸಮಸ್ಯೆ ತಲೆದೋರಿದ್ದರೂ ಪರಿ ಹರಿಸಲು ಗ್ರಾಮ ಪಂಚಾಯಿತಿ ಆಡಳಿತ ಮಾತ್ರ ಕ್ರಮವಹಿಸಿಲ್ಲ ಎನ್ನುವುದು ಗ್ರಾಮಸ್ಥರ ದೂರು.

ವೆಂಟಯ್ಯನಛತ್ರ ಗ್ರಾಮದಲ್ಲಿ 2 ಕೊಳವೆಬಾವಿಗಳಲ್ಲಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ಮಳೆಯ ಅಭಾವ ದಿಂದ ಕೊಳವೆಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ನೀರಿಗಾಗಿ ಜನರು ದಿನಗಟ್ಟಲೇ ಖಾಲಿ ಬಿಂದಿಗೆ ಹಿಡಿದು ಕಾಯುವಂತಾಗಿದೆ.

ಮಹಿಳೆಯರು ಬಿಂದಿಗೆ ನೀರಿಗೂ ಕೃಷಿ ಪಂಪ್‌ಸೆಟ್‌ಗಳ ಬಳಿಗೆ ತೆರಳ ಬೇಕಿದೆ. ರೈತರು ಬೆಳೆಗೆ ನೀರು ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ನೀರು ಸಂಗ್ರಹಿಸಲು ಗ್ರಾಮಸ್ಥರು ತೆರಳಿದರೆ ಅಸಮಾಧಾನ ಸೂಚಿಸುವುದು ಉಂಟು. ಕೆಲವು ರೈತರು ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮೋಳೆ 2, ಬಸವನಪುರ 4, ಅಂಕನಶೆಟ್ಟಿಪುರ 2, ವೆಂಕಟಯ್ಯನಛತ್ರ 2 ಹಾಗೂ ವಿ.ಸಿ. ಹೊಸೂರು ಗ್ರಾಮದಲ್ಲಿ 2 ಕೊಳವೆಬಾವಿ ಕೊರೆಯಿಸಲಾಗಿದೆ. ಕಡಿಮೆ ಪ್ರಮಾಣದಲ್ಲಿ ನೀರು ಸಿಕ್ಕಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 9 ಸಾವಿರ ಜನಸಂಖ್ಯೆ ಇದೆ. ಪ್ರತಿದಿನ ಸಮರ್ಪಕ ವಾಗಿ ನೀರು ಪೂರೈಸುವುದು ಕಷ್ಟಕರ ವಾಗಿದೆ’ ಎಂದು ವೆಂಕಟಯ್ಯಛತ್ರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಣ್ಣ ತಿಳಿಸಿದರು.

‘ನೀರಿನ ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ. ಉಪ ಚುನಾವಣೆ ಬಳಿಕ ಸಮಸ್ಯೆ ಬಗೆಹರಿಸುವು ದಾಗಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.
‘ಚಿಕ್ಕಹೊಳೆ ಜಲಾಶಯ ಹಾಗೂ ಬಂಡಿಗೆರೆ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಬೇಕಿದೆ. ಆಗ ಮಾತ್ರ ಈ ಭಾಗದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚುತ್ತದೆ. ಸರ್ಕಾರ ಈ ನಿಟ್ಟಿ ನಲ್ಲಿ ಕ್ರಮಕೈಗೊಳ್ಳಬೇಕು’ ಎಂಬುದು ಅವರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT