ಹುಬ್ಬಳ್ಳಿ

ಅನಧಿಕೃತ 181 ಅಂಗಡಿಗಳ ತೆರವು

ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿ, ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಸೋಮವಾರ ಬೆಳಿಗ್ಗೆ ತೆರವುಗೊಳಿಸಿದರು

ಹುಬ್ಬಳ್ಳಿ: ಇಲ್ಲಿನ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿ, ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಸೋಮವಾರ ಬೆಳಿಗ್ಗೆ ತೆರವುಗೊಳಿಸಿದರು.

ಪೊಲೀಸ್‌ ಭದ್ರತೆಯೊಂದಿಗೆ ಪಾಲಿಕೆಯ ಸಿಬ್ಬಂದಿ ಮತ್ತು ವಾಹನಗಳೊಂದಿಗೆ ಕಾರ್ಯಾಚರಣೆ ನಡೆಸಿದ ಆಯುಕ್ತರು, ಅಂಗಡಿಗಳನ್ನು ತೆರವುಗೊಳಿಸಿದರು.ತೆರವು ಕಾರ್ಯಾಚರಣೆಗೆ ಅಂಗಡಿ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ವಲಯ 4 ರಲ್ಲಿ 2, ವಲಯ 5ರಲ್ಲಿ 25, ವಲಯ 6 ಮತ್ತು 8ರಲ್ಲಿ 50, ವಲಯ 7ರಲ್ಲಿ 19, ವಲಯ 9ರಲ್ಲಿ 40, ವಲಯ 10ರಲ್ಲಿ 8 ಹಾಗೂ ವಲಯ 11ರಲ್ಲಿ 37 ಸೇರಿದಂತೆ ಒಟ್ಟು 181 ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿರುವುದಾಗಿ ಮಹಾನಗರ ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.

ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಮತ್ತು ರಸ್ತೆಗಳನ್ನು ಅತಿಕ್ರಮಿಸಿಕೊಂಡು ಶಾಶ್ವತ ನಿರ್ಮಾಣವನ್ನು ಮಾಡಿಕೊಂಡಿದ್ದ ಅಂಗಡಿ, ತಳ್ಳು ಗಾಡಿಗಳನ್ನು ತೆರವುಗೊಳಿಸಲಾಗಿದೆ ಎಂದರು.ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ.  ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಧಾರವಾಡ
ಮಾಧ್ಯಮ ಪ್ರತಿನಿಧಿಗಳ ರಕ್ಷಣೆಗೆ ಆದ್ಯತೆ

ಈ ಹಿಂದೆ ನಡೆದ ಸುಮಾರು ನಾಲ್ಕು ಪ್ರಕರಣಗಳು ನ್ಯಾಯಾಲಯದಲ್ಲಿವೆ. ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮದ ಛಾಯಾಗ್ರಾಹಕರಿಗೆ ರಕ್ಷಣೆಯ ಅಗತ್ಯವಿದೆ.

28 Jul, 2017

ಹುಬ್ಬಳ್ಳಿ
‘ಬಿಜೆಪಿ ಕಿತ್ತೊಗೆಯಲು ಮುನ್ನುಡಿ’

‘ಮುಂದಿನ ಲೋಕಸಭಾ ಚುನಾವಣೆಗೆ ದೇಶದಿಂದ ಬಿಜೆಪಿಯನ್ನು ಕಿತ್ತೊಗೆಯಲು ಕರ್ನಾಟಕದಿಂದಲೇ ಮುನ್ನುಡಿ ಬರೆಯಲಾಗುವುದು

28 Jul, 2017

ಹುಬ್ಬಳ್ಳಿ
ಮುಖ್ಯಮಂತ್ರಿಗೆ ರಕ್ತದಿಂದ ಬರೆದ ಮನವಿ ಸಲ್ಲಿಕೆ

ಗ್ರಾಮ ಪಂಚಾಯಿತಿ ಸದಸ್ಯ, ಕ್ಲರ್ಕ್‌ ಮತ್ತು ನೆರೆ ಮನೆಯವರು ಸೇರಿಕೊಂಡು ನಮ್ಮ ನಿವೇಶನವನ್ನು ಒತ್ತುವರಿ ಮಾಡಿಕೊಂಡು ದೌರ್ಜನ್ಯ ನಡೆಸುತ್ತಿದ್ದು, ನ್ಯಾಯ ಒದಗಿಸಿಕೊಡಬೇಕು’

28 Jul, 2017
ಬೆಳಗಾವಿಯಲ್ಲಿ ಅತ್ಯಧಿಕ, ಉ.ಕನ್ನಡದಲ್ಲಿ ಅತಿ ಕಡಿಮೆ

ಹುಬ್ಬಳ್ಳಿ
ಬೆಳಗಾವಿಯಲ್ಲಿ ಅತ್ಯಧಿಕ, ಉ.ಕನ್ನಡದಲ್ಲಿ ಅತಿ ಕಡಿಮೆ

27 Jul, 2017
ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ಗುಂಡಿಗಳ ಕಾರುಬಾರು

ಹುಬ್ಬಳ್ಳಿ
ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ಗುಂಡಿಗಳ ಕಾರುಬಾರು

27 Jul, 2017