ಕಾರವಾರ

ಸಮುದ್ರಕ್ಕೆ ಹಾರಿದ ಕಡವೆಯ ರಕ್ಷಣೆ

ಕಡವೆಯನ್ನು ಕಾಜುಬಾಗ್‌ದಲ್ಲಿನ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಇರಿಸಲಾಗಿತ್ತು. ಅದರ ಆರೋಗ್ಯ ಸುಧಾರಿಸಿದ್ದರಿಂದ ತಾಲ್ಲೂಕಿನ  ಮೈಂಗಿಣಿ ಬಳಿ ಸಂಜೆ ಕಾಡಿಗೆ ಬಿಡಲಾಯಿತು

ಕಾರವಾರ: ಬೀದಿನಾಯಿಗಳ ದಾಳಿ­ಯಿಂದ ಹೆದರಿ, ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಬೀಚ್‌ನಲ್ಲಿ ಸಮುದ್ರಕ್ಕೆ ಇಳಿದಿದ್ದ ಕಡವೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ಮೀನು­ಗಾರರ ಸಹಕಾರದಿಂದ ಸೋಮವಾರ ರಕ್ಷಿಸಿದರು.

ಬೆಳಿಗ್ಗೆ 8 ಗಂಟೆ ಸುಮಾರಿಗೆ ಜಿಲ್ಲಾಧಿ­ಕಾರಿ ಬಂಗ್ಲೆ ಇರುವ ಗುಡ್ಡದ ಕಡೆಯಿಂದ ಬಂದ ಸುಮಾರು 3 ವರ್ಷದ ಹೆಣ್ಣು ಕಡವೆಯನ್ನು ಬೀದಿನಾಯಿಗಳು ಬೆನ್ನಟ್ಟಿ­ದವು. ದಿಕ್ಕುತೋಚದೇ ಓಡಿಬಂದ ಅದು ಸಮುದ್ರಕ್ಕೆ ಇಳಿಯಿತು. ಕಡವೆ ಈಜುವುದನ್ನು ನೋಡಿದ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ವಲಯ ಅರಣ್ಯಾಧಿಕಾರಿ ಕೆ.ಡಿ. ನಾಯ್ಕ ಹಾಗೂ ಸಿಬ್ಬಂದಿ ಸುಮಾರು ಅರ್ಧ ತಾಸು ಕಾರ್ಯಾಚರಣೆ ನಡೆಸಿ ಅದನ್ನು ರಕ್ಷಿಸಿದರು.ಈ ವೇಳೆ ಸಣ್ಣಪುಟ್ಟ ಗಾಯಗಳಾಗಿದ್ದ ಕಡವೆಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ಮರಳಿ ಕಾಡಿಗೆ: ‘ಕಡವೆಯನ್ನು ಕಾಜುಬಾಗ್‌ದಲ್ಲಿನ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಇರಿಸಲಾಗಿತ್ತು. ಅದರ ಆರೋಗ್ಯ ಸುಧಾರಿಸಿದ್ದರಿಂದ ತಾಲ್ಲೂಕಿನ  ಮೈಂಗಿಣಿ ಬಳಿ ಸಂಜೆ ಕಾಡಿಗೆ ಬಿಡಲಾಯಿತು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಗಣಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಡಿನಲ್ಲಿ ಕುಡಿಯುವ ನೀರಿನ ಕೊರತೆಯಿಂದಾಗಿ ಕಡವೆಗಳು ನಾಡಿನಂಚಿಗೆ ಬರುತ್ತಿವೆ. ಪ್ರಾಣಿಗಳ ಬಾಯಾರಿಕೆ ನೀಗಿಸಲು ಅರಣ್ಯ ವ್ಯಾಪ್ತಿಯಲ್ಲಿ ಕೃತಕ ನೀರಿನ ಹೊಂಡಗಳನ್ನು ನಿರ್ಮಿಸುವ ಕುರಿತು ಚಿಂತನೆ ನಡೆದಿದೆ’ ಎಂದು ಅವರು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಗಿಡಮರಗಳಿಂದ ಭಗೀರಥನ ಕಾರ್ಯ

ಶಿರಸಿ
ಗಿಡಮರಗಳಿಂದ ಭಗೀರಥನ ಕಾರ್ಯ

25 Apr, 2017

ಕಾರವಾರ
‘ಮಾನವೀಯತೆ ಬೆಳಕು ಎಲ್ಲೆಡೆ ಬೆಳಗಲಿ’

ಬಾಲ್ಯದ ದಿನಗಳೇ ನಮಗೆ ಅತ್ಯಂತ ಅವಿಸ್ಮರಣೀಯ ದಿನಗಳಾಗಿದ್ದು, ಅಂತಹ ಜೀವನವನ್ನು ಪುನಃ ಪಡೆಯಲು ಅಪೇಕ್ಷಿಸುತ್ತೇವೆ. ರಾಜಕಾರಣದಿಂದಾಗಿ ಇಂದು ಮನುಷ್ಯತ್ವವು ಒಡೆಯುತ್ತಿದ್ದು, ಮಮತೆ ಹಾಗೂ ಸಮಾನತೆಯು...

25 Apr, 2017

ಶಿರಸಿ
ನಾಗೇಶ ಹೆಗಡೆಗೆ ಬಿ.ಎಚ್‌.ಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ

ಶದ ಅನೇಕ ರಾಜ್ಯಗಳ ವಿವಿಧ ಜಿಲ್ಲೆಗಳಿಗಿಂತ ಭಿನ್ನವಾಗಿರುವ ಉತ್ತರ ಕನ್ನಡ ಜಿಲ್ಲೆಯ ಸೆಳೆತ ನನ್ನಲ್ಲಿ ಸದಾ ಇದೆ. ಇದು ಊರಿನ ಜೊತೆಗಿನ ನಂಟನ್ನು ಉಳಿಸಿದೆ....

25 Apr, 2017

ಶಿರಸಿ
ಅರಣ್ಯದಲ್ಲಿ ಸಣ್ಣ ಕೆರೆ ನಿರ್ಮಾಣ

ತತ ಬರಗಾಲದಿಂದ ಕಂಗೆಟ್ಟಿರುವ ಬನವಾಸಿ ಹೋಬಳಿಯ ಪುಟ್ಟ ಹಳ್ಳಿ ಅಪ್ಪಿಕೊಪ್ಪ. ಸುತ್ತ ಕಾಡಿದ್ದರೂ ಬಿಸಿಲ ತಾಪ ಹಾಗೂ ಬರದಿಂದ ಇಲ್ಲಿ ನೀರಿನ ಕೊರತೆ ಬಹುವಾಗಿ...

25 Apr, 2017
ಬಿಸಿಲ ಝಳ: ಈಜುಕೊಳಕ್ಕೆ ಯುವಕರ ದಂಡು

ಕಾರವಾರ
ಬಿಸಿಲ ಝಳ: ಈಜುಕೊಳಕ್ಕೆ ಯುವಕರ ದಂಡು

24 Apr, 2017