ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಯೋಜನೆಗಳು ಸ್ಥಗಿತ: ಮಕ್ಕಳಿಗೆ ಸಂಕಷ್ಟ

Last Updated 13 ಏಪ್ರಿಲ್ 2017, 5:01 IST
ಅಕ್ಷರ ಗಾತ್ರ

ಗಂಗಾವತಿ: ಕೇಂದ್ರ ಸರ್ಕಾರದ ಸರ್ವ ಶಿಕ್ಷಣ ಅಭಿಯಾನದ (ಎಸ್ಎಸ್ಎ)  ಒಂದೊಂದೆ ಸೌಲಭ್ಯಗಳು ಸ್ಥಗಿತ ವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ ಗೊಂಡಬಾಳ ಹೇಳಿದರು.

ನಗರದ ಮಂಥನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಲಾಖೆಯ ಮಾಹಿತಿ ನೀಡಿದ ಅವರು, ಪೂರ್ವ ಪ್ರಾಥಮಿಕ ಮಕ್ಕಳಿಗೆ ನೀಡುತ್ತಿದ್ದ ಎರಡು ರೂಪಾಯಿ ಯೋಜನೆ ಕಳೆದ ವರ್ಷ  ಬಂದಿಲ್ಲ. ಇದರಿಂದ ತಾಲ್ಲೂಕಿನ ಸುಮಾ ರು 25 ಸಾವಿರ ಮಕ್ಕಳು ಯೋಜ ನೆಯಿಂದ ವಂಚಿತರಾಗಿದ್ದಾರೆ ಎಂದರು.

ಶಾಲಾ ಬ್ಯಾಗ್, ಶೂ ಅಗತ್ಯತೆಯ ಬಗ್ಗೆ ಕಳೆದ ವರ್ಷವೇ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಸರ್ಕಾರದಿಂದ ಇದುವರೆಗೂ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಅತಿಥಿ ಶಿಕ್ಷಕರು ಜೂನ್ ತಿಂಗಳಲ್ಲಿ ನೇಮಕವಾದರೆ ಮಾತ್ರ ಉಪ ಯೋಗವಾಗಲಿದೆ. ಕಳೆದ ವರ್ಷ ನವೆಂಬ ರ್‌ನಲ್ಲಿ  ನೇಮಕಾತಿ ನಡೆದಿತ್ತು ಎಂದರು.

ಆರೋಗ್ಯ ಇಲಾಖೆಯ ತಾಲ್ಲೂಕು ವೈದ್ಯಾಧಿಕಾರಿ ಡಾ. ಗೌರಿಶಂಕರ ಮಾತನಾಡಿ, ತಾಲ್ಲೂಕಿನಲ್ಲಿರುವ ನಕಲಿ ವೈದ್ಯರ ಪತ್ತೆಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಆಯುಷ್ ಅಧಿಕಾರಿಗಳ ನೇತೃತ್ವದಲ್ಲಿ ಜಾಗೃತ ದಳ  ರಚನೆ ಯಾಗಿದ್ದು, ಜಿಲ್ಲೆಯಲ್ಲಿ ಸಂಚರಿಸುತ್ತಿದೆ ಎಂದು ಹೇಳಿದರು.

ಇದುವರೆಗೂ ಗರ್ಭಿಣಿಯರ ಸಾವು ಸಂಭವಿಸಿಲ್ಲ. ಡೆಂಗಿ, ಮಲೇರಿಯಾದಂತೆ ಎಲ್ಲ ಕಾಯಿಲೆಗಳಿಗೆ ತಾಲ್ಲೂಕಿನ ಎಲ್ಲ ಆಸ್ಪತ್ರೆಗಳಲ್ಲಿ ಸೂಕ್ತ ಔಷಧಿ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.ವಿವಿಧ ಆಸ್ಪತ್ರೆಗಳಲ್ಲಿನ ಸಮಸ್ಯೆ ಬಗ್ಗೆ ಸಭೆಯಲ್ಲಿ ಉಪಾಧ್ಯಕ್ಷ ಗವಿಸಿದ್ದಪ್ಪ ಗಮನ ಸೆಳೆದರು.

ನವಲಿ ಕೃಷಿ ಕೇಂದ್ರದಲ್ಲಿ ಅಧಿಕಾರಿ ಮೇಲೆ ನಡೆದ ಹಲ್ಲೆ  ಕುರಿತಾಗಿ ಅಧ್ಯಕ್ಷ ಬಸವಂತಗೌಡ ಮಾಹಿತಿ ಕೋರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಇಲಾಖೆಯ ಅಧಿಕಾರಿ ಜಂಬಣ್ಣ ಐಲಿ, ಕೃಷಿ ಹೊಂಡದ ಬಿಲ್‌ಗಳನ್ನು  ಮಾರ್ಚ್‌ 15ರೊಳಗೆ ಖಜಾನೆಗೆ ಜಮೆ ಮಾಡ ಬೇಕು. ಅಧಿಕಾರಿ ದೇವೇಂದ್ರಪ್ಪ ಸರ್ಕಾರದ ನಿರ್ದೇಶನ ಪಾಲಿಸಿದ್ದಾರೆ. ಆದರೆ ಕೆಲವರು ಕೃಷಿ ಹೊಂಡದ ಬಿಲ್‌ಗಳನ್ನು ಮಾಡಿಸಿಕೊಡುವಂತೆ ಮಾರ್ಚ್‌ 21ರಂದು ದಾಖಲೆ ಸಲ್ಲಿಸಿದ್ದಾರೆ. ಇದಕ್ಕೆ ನಿರಾಕರಿಸಿದ್ದರಿಂದ ಸಮಸ್ಯೆ ಉದ್ಭವ ವಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಹೇಳಿದರು.

ಬಳಿಕ ಸಭೆಯಲ್ಲಿ ವಿವಿಧ ಇಲಾಖೆ ಗಳ ಪ್ರಗತಿ ಪರಿಶೀಲನೆ ನಡೆಯಿತು. ಸುಮಾರು ಹತ್ತಕ್ಕೂ ಹೆಚ್ಚು ಇಲಾಖೆಯ ಅಧಿಕಾರಿಗಳ ಪರವಾಗಿ ಪ್ರಭಾರಿಗಳು ಸಭೆಯಲ್ಲಿ  ಭಾಗವ ಹಿಸಿದ್ದರು.ಸಭೆಯಲ್ಲಿ ತಾಲ್ಲೂಕು ಪಂಚಾ ಯಿತಿ ಕಾರ್ಯನಿ ರ್ವಾಹಕ ಅಧಿಕಾರಿ ವೆಂಕೋಬಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT