ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನಿಂದ ನಾಡಿನತ್ತ ಕಾಡಾನೆಗಳ ಹೆಜ್ಜೆ

Last Updated 13 ಏಪ್ರಿಲ್ 2017, 6:47 IST
ಅಕ್ಷರ ಗಾತ್ರ

ಸೋಮವಾರಪೇಟೆ:  ಅರಣ್ಯ ಪ್ರದೇಶ ದಲ್ಲಿ  ಸೂಕ್ತ ಆಹಾರ ಮತ್ತು ನೀರು ಅಲಭ್ಯತೆಯಿಂದಾಗಿ ಕಾಡಾನೆಗಳು  ಕಾಡಿ ನಿಂದ ನಾಡಿನತ್ತ ಹೆಜ್ಜೆ ಇರಿಸಲು ಪ್ರಾರಂಭಿಸುತ್ತಿವೆ.ಸಂಜೆ, ಬೆಳಗಿನ ಹೊತ್ತು  ಮಾತ್ರ ರಸ್ತೆ ಗಳನ್ನು ದಾಟುತ್ತಿದ್ದ ಕಾಡಾನೆಗಳು ಈಚಿನ ದಿನಗಳಲ್ಲಿ ಹಗಲಿನಲ್ಲಿಯೇ ಕಂಡು ಬರುತ್ತಿವೆ. ಜನರು ಆತಂಕ ಗೊಂಡಿದ್ದಾರೆ.

ಕುಶಾಲನಗರ– ಸೋಮವಾರಪೇಟೆ ರಾಜ್ಯ ಹೆದ್ದಾರಿ ಸೂಳೆಬಾವಿ ಬಳಿ  ರಸ್ತೆ ಯಲ್ಲಿಯೇ ಕಾಡಾನೆಗಳು ಸಂಚರಿಸು ವುದು ಕಂಡುಬಂದಿದೆ.
ಐಗೂರು ಪಂಚಾಯಿತಿ ವ್ಯಾಪ್ತಿ ಕಾಜೂರು ಜಂಕ್ಷನ್, ಕೋವರ್‌ಕೊಲ್ಲಿ ತೋಟ ಮತ್ತು ಗುಳಿಗಪ್ಪನ ಕಲ್ಲು ಸಮೀಪ ಕಾಡಾನೆಗಳು ಕಾಡಿನಿಂದ ಟಾಟಾ ಕಾಫಿ ತೋಟದ ಕಡೆಗೆ ಸಂಜೆ ಸಂಚರಿಸುತ್ತಿವೆ.

ಬೇಸಿಗೆ ಸಮಯವಾಗಿದ್ದು, ಮೂರು ವರ್ಷಗಳಿಂದ ಬಿರು ಬಿಸಿಲಿಗೆ ಕಾಡು ಒಣಗುತ್ತಿದೆ. ಕಾಡಿನಲ್ಲಿ ಆಹಾರ ಮತ್ತು ಕುಡಿಯಲು ನೀರು ಸಿಗದ ಕಾರಣ  ಕಾಡಾನೆಗಳು ಹಲಸಿನ ಹಣ್ಣು, ಇತರ ಮೇವು ಅರಸಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ.

ಆನೆಗಳು ಸಂಚರಿಸುತ್ತಿರುವ ಪೈಸಾರಿ ಮತ್ತು ಊರುಡುವೆ ಜಾಗಗಳಲ್ಲಿ ಕೆಲ ವರು ಅತಿಕ್ರಮಣ ಮಾಡಿಕೊಂಡಿದ್ದು, ಇದು, ಸಮಸ್ಯೆಗೆ ಕಾರಣವಾಗಿದೆ.
ಕಾಜೂರು ಮೀಸಲು ಅರಣ್ಯ ಹಾಗೂ ಯಡವನಾಡು ಮೀಸಲು ಅರಣ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 18 ಅನೆ ಗಳು ಬೀಡು ಬಿಟ್ಟಿವೆ. ಕುಶಾಲನಗರ ಸೋಮವಾರಪೇಟೆ ಹಾಗೂ  ಮಡಿಕೇರಿ ಸೋಮವಾರಪೇಟೆ ಹೆದ್ದಾರಿಯಲ್ಲಿ ಕಾಣಸಿಗುತ್ತವೆ.

ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಎಚ್ಚರಿಕೆ ಕಡೆಗಣಿಸಿ ಸಂಜೆಗತ್ತಲಿನಲ್ಲಿ ಸಂಚರಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಎಚ್ಚರಿಕೆ ಯಿಂದ ಸಂಚರಿಸಬೇಕಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಯಡವಾರೆ ಗ್ರಾಮದ ಅಶೋಕ್‌ ಅವರು, ಕಾಜೂರು, ಯಡವಾರೆ ಸಜ್ಜಳಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ  ಹೆಚ್ಚಾ ಗಿದೆ. ಕೂಲಿ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಚರಿಸಲು ತೊಂದರೆಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಕಾಡಾನೆ ಹಾವಳಿ ನಿಯಂತ್ರಿ ಸಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಐಗೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ.ದಿನೇಶ್, ಅರಣ್ಯ ಇಲಾಖೆ ಸಿಬ್ಬಂದಿ ಕೇವಲ ಕಂದಕಗಳನ್ನು ತೆಗೆಸಿ ಅವುಗಳನ್ನು ಕಾಡಿನಲ್ಲಿ ಬಂಧಿಸಲು ಮಾತ್ರ ಪ್ರಯತ್ನಿಸುತ್ತಿದ್ದಾರೆ. ಆದರೆ, ಕಾಡು ಪ್ರಾಣಿಗಳಿಗೆ ಕಾಡಿನಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಮಾತ್ರ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತೀ ವರ್ಷ ಕಾಡಿನಲ್ಲಿ ಕಾಡು ಪ್ರಾಣಿಗಳ ಆಹಾರದ ಗಿಡಗಳ್ನು ಬೆಳೆಸಲು ಒತ್ತು ನೀಡಬೇಕು. ಕಾಡಿನಲ್ಲಿರುವ ಕೆರೆಗಳ ಪುನಃಶ್ಚೇತನಗೊಳಿಸಬೇಕು. ಆಗ ಮಾತ್ರ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಸಾಧ್ಯ ಎಂದು ಹೇಳಿದರು.

ಟಾಟಾ ಕಾಫಿ ಸಂಸ್ಥೆಯಲ್ಲಿ ಕಾಡಾನೆ ಗಳ ಇರುವಿಕೆ ನೋಡಿಕೊಳ್ಳುತ್ತಿರುವ ಮಹೇಶ್ ಅವರು, ಕಾಜೂರು ವ್ಯಾಪ್ತಿ ಯಲ್ಲಿ ಮತ್ತು ಯಡವಾರೆ, ಯಡವನಾಡಿ ನಲ್ಲಿ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅಭಿ ಪ್ರಾಯಪಟ್ಟರು. ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳಬೇಕು. 
ಕಾಡಾನೆಗಳು ಸುತ್ತಲಿನ ಗ್ರಾಮಗಳ ಮನೆ ಸುತ್ತಮುತ್ತ ಬೆಳೆದ ಬಾಳೆ ಮತ್ತು ಇನ್ನಿತರ ಕೃಷಿ ಬೆಳೆ ತಿನ್ನುತ್ತವೆ. ಮನೆ ಯಿಂದ ಹೊರಬರಲು ಕಷ್ಟವಾಗುತ್ತಿದೆ ಎಂದು ಕಿರಗಂದೂರು ಗ್ರಾ.ಪಂ ಸದಸ್ಯೆ ಗಣೇಶ್‌ ಅಭಿಪ್ರಾಯಪಟ್ಟರು.ಒಟ್ಟಿನಲ್ಲಿ ಕಾಡಾನೆಗಳ ಆಹಾರ ಮತ್ತು ನೀರಿನ ಕೊರತೆಯ ಸಮಸ್ಯೆಯು ನಾಗರಿಕರಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT