ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೂರು ದೇವಳ: ವಿವಿಧ ಕಾಮಗಾರಿಗೆ ಸಿದ್ಧತೆ

ಅದಾನಿ ಯುಪಿಸಿಎಲ್‌ನಿಂದ ₹ 1.10 ಕೋಟಿ ಕೊಡುಗೆ
Last Updated 14 ಏಪ್ರಿಲ್ 2017, 5:54 IST
ಅಕ್ಷರ ಗಾತ್ರ

ಪಡುಬಿದ್ರಿ: ಅದಾನಿ ಸಮೂಹದ ಯುಪಿಸಿಎಲ್ ಕಂಪೆನಿಯು ಎಲ್ಲೂರಿನ ಮಹತೋಭಾರ ವಿಶ್ವೇಶ್ವರ ದೇವಾಲಯ ದಲ್ಲಿ ನಡೆದ ವಾರ್ಷಿಕೋತ್ಸವದ ಸಂದ ರ್ಭದಲ್ಲಿ ದೇವಾಲಯದ ವಠಾರದಲ್ಲಿ ರಂಗಮಂಟಪ, ಉದ್ಯಾನವನ್ನು ಹಾಗೂ ಉಚ್ಚಿಲ ಮತ್ತು ನಂದಿಕೂರು ಸಮೀಪ ಸ್ವಾಗತ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಅದರ ನೀಲನಕ್ಷೆಯನ್ನು ಗುರುವಾರ ಅನಾವರಣಗೊಳಿಸಲಾಯಿತು.

ಸುಮಾರು ₹ 1.10 ಕೋಟಿ ವೆಚ್ಚದ ಈ ಅಭಿವೃದ್ಧಿ ಕಾಮಗಾರಿಗಳ ನೀಲಿನಕ್ಷೆ ಯನ್ನು ಯುಪಿಸಿಎಲ್ ಕಂಪೆನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಎಲ್ಲೂರು ವಿಶೇಶ್ವರ ದೇವಾಲಯದ ಅಂಗಳದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಶಾಸಕ ವಿನಯ ಕುಮಾರ್ ಸೊರಕೆ ಅವರ ಉಪಸ್ಥಿತಿ ಯಲ್ಲಿ ಅನಾವರಣಗೊಳಿಸಿದರು.

ಕಿಶೋರ್ ಆಳ್ವ ಮಾತನಾಡಿ, ‘ಎಲ್ಲೂರು ವಿಶ್ವನಾಥ ಕ್ಷೇತ್ರ ಪುರಾತನ ಕ್ಷೇತ್ರವಾಗಿದ್ದು, ಊರಿನ ಮುಂಭಾಗದ ಉಚ್ಚಿಲ ಹಾಗೂ ನಂದಿಕೂರು ಸ್ಥಳಗಳಲ್ಲಿ ಸ್ವಾಗತಗೋಪುರ ಮತ್ತು ದೇವಸ್ಥಾನದ ವಠಾರದಲ್ಲಿ ಸುಂದರವಾದ ಉದ್ಯಾನ ವನ್ನು ನಿರ್ಮಿಣಮಾಡಬೇಕೆಂದು ಬೇಡಿಕೆಗಳನ್ನು ಇಟ್ಟಿದ್ದರು. ಅದನ್ನು ಪರಿಗಣಿಸಿದ ಅದಾನಿ ಸಮೂಹವು ನೀಲಿ ನಕ್ಷೆಯನ್ನು ತಯಾರಿಸಿ  ಅನಾವರಣ ಗೊಳಿಸಿದೆ. ಶೀಘ್ರದಲ್ಲೇ ಈ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಿ, ಉತ್ತಮ ಗುಣಮಟ್ಟದ ಕೆಲಸಗಳನ್ನು ಅದಾನಿ ವತಿಯಿಂದ ಪೂರ್ಣಗೊಳಿಸ ಲಾಗುವುದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೇವಾಲಯದಲ್ಲಿ 24 ವರ್ಷದಿಂದ ಸತತವಾಗಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ವೈ.ಪ್ರಫುಲ್ಲ ಶೆಟ್ಟಿಎಲ್ಲೂರುಗುತ್ತು ಅವರ ಸೇವೆಗೆ ಅಭಿನಂದನೆ ಸಲ್ಲಿಸಿ, ನೂತನ ವ್ಯವಸ್ಥಾ ಪನಾ ಸಮಿತಿಯ ಎಲ್ಲ ಸದಸ್ಯರನ್ನು ಗೌರವಿಸಲಾಯಿತು.

ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ ‘ಅದಾನಿ ಸಮೂಹದ ಯುಪಿಸಿಎಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸುವುದರ ಜತೆಗೆ ಪರಿಸರದ ಬಗ್ಗೆಯೂ ಕಾಳಜಿ ವಹಿಸುತ್ತಿದೆ ಎಂದು ತಿಳಿಸಿದರು.

ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಎಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತಿ ಮಧ್ವರಾಜ್, ತಾಲೂಕು ಪಂಚಾಯಿತಿ ಸದಸ್ಯ ಕೇಶವ, ಉದ್ಯಮಿಗಳಾದ ಪ್ರವೀಣ್ ಬಿ.ಶೆಟ್ಟಿ, ಕೊಂಡೆಟ್ಟು ಸುಕುಮಾರ್ ಶೆಟ್ಟಿ, ರವೀಂದ್ರ ಅರಸ, ನಾರಾಯಣ ಕೆ.ಶೆಟ್ಟಿ ಎರ್ಮಾಳು, ಕೃಷ್ಣ ಶೆಟ್ಟಿ, ಅಶೋಕ್ ಶೆಟ್ಟಿ, ಚಿತ್ರ ನಟ ರಾಜಶೇಖರ ಕೋಟ್ಯಾನ್, ಯುಪಿಸಿಎಲ್ ಕಂಪೆನಿಯ ಎಜಿಎಂ ಗಿರಿಶ್ ನಾವಡ, ಪ್ರಬಂಧಕ ರವಿ ಜೇರೆ ಉಪಸ್ಥಿತರಿದ್ದರು. ಬೆಳಪು ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು  ಸ್ವಾಗತಿಸಿದರು. ಸತೀಶ್‌ ಕಾಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT