ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯರೋಗ: ಹೆಚ್ಚಿನ ಜಾಗೃತಿ ಅಗತ್ಯ

Last Updated 14 ಏಪ್ರಿಲ್ 2017, 9:44 IST
ಅಕ್ಷರ ಗಾತ್ರ

ಕುಕನೂರು: ಕ್ಷಯರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ವೈದ್ಯರು ಈ  ರೋಗದ ನಿಯಂತ್ರಣದ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ತಾಲ್ಲೂಕು ಕ್ಷಯರೋಗ ಅಧಿಕಾರಿ ಪ್ರವೀಣಕುಮಾರ ಹೇಳಿದರು.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ನಡೆದ ಕ್ಷಯರೋಗ ನಿಯಂತ್ರಣ ಹಾಗೂ ಅರಿವು ಕುರಿತು ಮಾತನಾಡಿದರು. ಕ್ಷಯರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಸೂಕ್ತ ಚಿಕಿತ್ಸೆ ಪಡೆದಲ್ಲಿ ಕ್ಷಯ ರೋಗದ ನಿಯಂತ್ರಣ ಸಾಧ್ಯ. ಖಾಸಗಿ ಔಷಧಿ ಅಂಗಡಿಗಳು ಹಾಗೂ ವ್ಯದ್ಯರ ಜವಾಬ್ದಾರಿ ಹೆಚ್ಚಾಗಿದ್ದು ಜನರಲ್ಲಿ ಈ ರೋಗದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ವ್ಯದ್ಯಾಧಿಕಾರಿ ಸಿ.ಎಂ.ಹಿರೇಮಠ ಮಾತನಾಡಿ, ‘ಕ್ಷಯ ರೋಗದ ಬಗ್ಗೆ ಭಯ ಬೇಡ. ಸಂಪೂರ್ಣ ಚಿಕಿತ್ಸೆಯಿಂದ ರೋಗ ಗುಣಪಡಿಸಲಾಗುವುದು.

‘ಯಾರನ್ನೂ ಬಿಡದೆ, ಎಲ್ಲರೂ ಒಂದಾಗಿ ಕ್ಷಯ ರೋಗವನ್ನು ಕೊನೆಗಾಣಿಸೋಣ’ ಎನ್ನುವುದು 2017ರ ಘೋಷ  ವಾಕ್ಯವಾಗಿದೆ. ಇದಕ್ಕೆ ತಕ್ಕಂತೆ ಸಂಬಂಧಿಸಿದ ಇಲಾಖೆಗಳು ಕಾರ್ಯನಿ ರ್ವಹಿಸಬೇಕು ಎಂದರು. ಜಿಲ್ಲಾ ಔಷಧಿ ನಿಯಂತ್ರಣಾಧಿಕಾರಿ ವೆಂಕಟೇಶ, ರವಿಂದ್ರಕುಮಾರ, ಪ್ರಶಾಂತ ಕಲ್ಮಠ, ಸುಭಾಷ ತಾಲೇಡಾ, ಗೋಂವಿಂದ ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT