ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

65 ವರ್ಷಗಳ ಬಳಿಕ ಸಂಭ್ರಮದ ರಥೋತ್ಸವ

Last Updated 15 ಏಪ್ರಿಲ್ 2017, 6:08 IST
ಅಕ್ಷರ ಗಾತ್ರ

ನರಸಿಂಹರಾಜಪುರ: ‘ಗಾಳಿ, ಮರ, ಗಿಡ ಹೀಗೆ ಸಕಲ ಜೀವರಾಶಿಗಳಲ್ಲೂ ಭಗವಂತನಿದ್ದಾನೆ. ನಾವು ನೋಡುವ ದೃಷ್ಟಿಕೋನ ಬದಲಾಗಬೇಕು’ ಎಂದು ಆದಿಚುಂಚನಗಿರಿಯ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ಹಳೇಪೇಟೆಯ ಗುತ್ತ್ಯಮ್ಮ ದೇವಸ್ಥಾನದಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವದ ಅಂಗವಾಗಿ ನೂತನ ರಥದ ಲೋಕಾರ್ಪಣೆ ಮಾಡಿದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

‘ದೇವಸ್ಥಾನಗಳನ್ನು ನೋಡಿದಾಗ ಉಂಟಾಗುವ ಸಂತೋಷವೇ ಆಧ್ಯಾತ್ಮ. ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಶ್ರದ್ಧೆ ಇದ್ದಲ್ಲಿ ಇಷ್ಟಾರ್ಥಗಳ ನೆರವೇರು ತ್ತವೆ’ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿ ಮಾತನಾ ಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್, ‘ತಾಲ್ಲೂಕು ಕೇಂದ್ರ ದಲ್ಲಿ ಹಲವು ದೇವಸ್ಥಾನಗಳು ಶಿಥಿಲಾ ವಸ್ಥೆಗೆ ತಲುಪಿತ್ತು. ಪ್ರಸ್ತುತ ಒಂದೊಂದಾಗಿ ದೇವಸ್ಥಾನಗಳು ಜೀರ್ಣೋದ್ಧಾರವಾಗುತ್ತಿರುವುದು ಸಂತ ಸದ ವಿಷಯವಾಗಿದೆ.

ವಸ್ಥಾನಗಳು ಎಲ್ಲರನ್ನೂ ಒಗ್ಗೂಡಿಸುವ ಶ್ರದ್ಧಾ ಕೇಂದ್ರಗಳಾಗಿವೆ. ಧರ್ಮದ ಕಾರ್ಯ ಹೆಚ್ಚಾದರೆ ಅಧರ್ಮಗಳು ಕಡಿಮೆಯಾ ಗಲಿದೆ. ಇದರಿಂದ ಕಾಲಕಾಲಕ್ಕೆ ಮಳೆ ಬಂದು ಊರು ಸುಭಿಕ್ಷೆಯಾಗಲಿದೆ. ಹುಟ್ಟಿದ ಊರಿನ ಸೇವೆ ಮಾಡಲು ನನಗೆ ಸಂತೋಷವಾಗುತ್ತಿದೆ’ ಎಂದರು.

ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ‘ಗುತ್ತ್ಯಮ್ಮ ದೇವಸ್ಥಾನಕ್ಕೆ ಬರುವ ರಸ್ತೆಯನ್ನು ಮುಂದಿನ ಒಂದು ವರ್ಷದೊಳಗೆ ಅಭಿವೃದ್ಧಿಪಡಿಸಲಾಗು ವುದು’ ಎಂದು ಭರವಸೆ ನೀಡಿದರು.

ಗುತ್ತ್ಯಮ್ಮ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಪಿ.ಆರ್.ಸದಾಶಿವ ಪ್ರಾಸ್ತಾವಿಕ ವಾಗಿ ಮಾತನಾಡಿ, ‘ಹಿಂದೂ ಸನಾತನ ಧರ್ಮದ ಸಂರಕ್ಷಣೆಯಾಗಬೇಕಾದರೆ ಎಲ್ಲ ಹಿಂದೂ ಕುಟುಂಬದವರು ಪ್ರತಿ ನಿತ್ಯ ದೇವಸ್ಥಾನಗಳಿಗೆ ಬಂದು ಹೋಗುತ್ತಿರಬೇಕು’ ಎಂದರು.

ಕರ್ಕಿ ರಮಾನಂದ ಭಟ್‌, ಮಡಬೂರು ದೇವಾಲಯದ ಸುಬ್ರಹ್ಮಣ್ಯಹೊಳ್ಳ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಡಿ.ರಾಜೇಗೌಡ,  ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಆಶೀಶ್‌ಕುಮಾರ್, ಟ್ರಸ್ಟ್ ನ ಕಾರ್ಯದರ್ಶಿ ಎಚ್.ಎನ್.ರವಿಶಂಕರ್, ಬಿ.ಟಿ.ವಿಜಯಕುಮಾರ್, ಶಿಲ್ಪ, ಎನ್.ಎಂ. ಕಾಂತರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT