ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಜಯಂತಿ ಬ್ಯಾನರ್‌ ನಾಶ: ಪ್ರತಿಭಟನೆ

Last Updated 15 ಏಪ್ರಿಲ್ 2017, 9:30 IST
ಅಕ್ಷರ ಗಾತ್ರ

ಲಿಂಗಸುಗೂರು:  ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ ನಿಮಿತ್ತ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಬಸ್‌ ನಿಲ್ದಾಣ ಬಳಿ ಅಳವಡಿಸಿದ್ದ ಬ್ಯಾನರ್‌ ಹರಿದು ನಾಶಗೊಳಿಸಿರುವುದನ್ನು ವಿರೋಧಿಸಿ ದಲಿತ ಸಂಘಟನೆಗಳ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹೊನ್ನಳ್ಳಿ ಬಸ್‌ ನಿಲ್ದಾಣ ಬಳಿ ಹಾಕಿದ್ದ ಬ್ಯಾನರ್‌ನ್ನು ಗುರುವಾರ ಮಧ್ಯರಾತ್ರಿ ಕೆಲ ದುಷ್ಕರ್ಮಿಗಳು ಹರಿದು ಹಾಕಿ ಡಾ. ಬಾಬಾ ಸಾಹೇಬ ಅವರಿಗೆ ಅಪಮಾನ ಮಾಡಿದ್ದಾರೆ.  ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

ಚುನಾವಣೆಗಳ ಪರ್ವ ಆರಂಭಗೊಳ್ಳುತ್ತಿರುವುದರಿಂದ ಸಮಾಜದಲ್ಲಿ ಶಾಂತಿ ಕದಡಲು  ಕೆಲ ಶಕ್ತಿಗಳು  ಪರೋಕ್ಷವಾಗಿ ಬೆಂಬಲಿಸುತ್ತಿವೆ ಪೊಲೀಸ್‌ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ   ಕಿಡಿಗೇಡಿಗಳಿಗೆ ಕಠಿಣ ಶಿಕ್ಷಣ ವಿಧಿಸಲು ಮುಂದಾಗುವಂತೆ ಮನವಿ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್‌ ಶಿವಾನಂದ ಸಾಗರ್‌, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಂದ್ರಕುಮಾರ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಬಾಬು ರಾಠೋಡ  ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಿಪಿಐ ವಿ.ಎಸ್‌. ಹಿರೇಮಠ, ಪಿಎಸ್‌ಐ ದಾದಾವಲಿ ರಸ್ತೆ ತಡೆ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಕೆಳಲವರನ್ನು ಬಂಧಿಸಲಾಗಿದ್ದು,  ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಪ್ರತಿಭಟನೆ ನೇತೃತ್ವವನ್ನು ಪಾಮಯ್ಯ ಮುರಾರಿ, ಎಚ್‌.ಬಿ. ಮುರಾರಿ, ಚಿನ್ನಪ್ಪ ಕಂದಳ್ಳಿ, ಹುಲಗಪ್ಪ ಕೆಸರಟ್ಟಿ, ಗ್ಯಾನಪ್ಪ ಕಟ್ಟಿಮನಿ, ಮಹಾದೇವ ರಾಂಪೂರ, ನಾಗಪ್ಪ ಈಚನಾಳ, ಶರಣಬಸವ ಗಿಬ್ಸ್‌, ಆಂಜನೇಯ ಭಂಡಾರಿ ಆಜಪ್ಪ ಕರಡಕಲ್‌, ದುರುಗಪ್ಪ ಅಗ್ರಹಾರ, ತಿಪ್ಪಣ್ಣ ಕರಡಕಲ್‌, ರಮೇಶ, ಉಮೇಶ ಹುನಕುಂಟಿಲಕ್ಕಪ್ಪ ನಾಗರಹಾಳ, ವೆಂಕಟೇಶ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT