ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವ್ಯವಸ್ಥೆ ಬಗ್ಗೆ ಮೌನವೇಕೆ?

Last Updated 15 ಏಪ್ರಿಲ್ 2017, 10:05 IST
ಅಕ್ಷರ ಗಾತ್ರ

ಕೊಪ್ಪಳ: ಭ್ರಷ್ಟಾಚಾರ, ರಾಮ ಮಂದಿರ ದ ಬಗ್ಗೆ ಮಾತನಾಡುವ ಸರ್ಕಾರ ಜಾತಿ ವ್ಯವಸ್ಥೆಯ ಬಗ್ಗೆ ಏಕೆ ಮಾತನಾಡು ವುದಿಲ್ಲ ಎಂದು ಹೊಸಪೇಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾ ಯಕ ಪ್ರಾಧ್ಯಾಪಕ ಡಾ.ಕೆ.ವೆಂಕಟೇಶ್ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ 126ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ವಿವಿಧ ಯೋಜನೆಗಳ ಜಾರಿ ಬಗ್ಗೆ ಚಿಂತಿಸುವ ಸರ್ಕಾರಗಳು ಮಲದ ತೊಟ್ಟಿಯಲ್ಲಿ ನಿಂತು ಸ್ವಚ್ಛಗೊಳಿಸುವ ವ್ಯಕ್ತಿಗಳ ಬಗ್ಗೆ ಯಾಕೆ ಯೋಚಿಸುತ್ತಿಲ್ಲ? ಎಲ್ಲಿಯವರೆಗೆ ದಲಿತರ ಉದ್ಧಾರ ಆಗು ವು ದಿಲ್ಲವೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ ಅಸಾಧ್ಯ. ಇಡೀ ಸಮಾಜದ ಬಗ್ಗೆ ಚಿಂತನೆ ಮಾಡಿದ ವ್ಯಕ್ತಿಯನ್ನು ದಲಿತ ನಾಯಕ ಎನ್ನುವುದು ಸರಿಯಲ್ಲ.

ದಲಿತರು ಯಾವುದೇ ಶ್ರೇಷ್ಠ ಕೆಲಸ ಮಾಡಿದರೂ ಅವರನ್ನು ಸಮಾಜದ ಮುಖ್ಯವಾಹಿನಿ ಬರಲು ಬಿಡುವುದಿಲ್ಲ. ಕೆಲವರು ಸಂವಿಧಾನವನ್ನೇ ಅಲ್ಲಗ ಳೆಯುತ್ತಿದ್ದಾರೆ. ಹಳ್ಳಿಗಳಲ್ಲಿನ ಸಂರಚನೆಯೇ ಜಾತಿಯತೆಯ ಕೇಂದ್ರವಾಗಿ ಕಾಣುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.


ಅಂಬೇಡ್ಕರ್‌ ಕಾನೂನು ಪಂಡಿತ, ಪತ್ರಕರ್ತ, ವಕೀಲ, ಹೋರಾಟಗಾರ, ಸಂವಿಧಾನ ಶಿಲ್ಪಿ, ಲೇಖಕ ಹೀಗೆ ಹಲವು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿದ್ದವರು. ಈ ರೀತಿಯ ಹಲವು ವ್ಯಕ್ತಿತ್ವ ಗಳಿಂದಾಗಿಯೇ ಅವರ ಜನ್ಮದಿನವನ್ನು ‘ಜಗತ್ತಿನ ಜ್ಞಾನ ದಿನ’ ಎಂದು ಆಚ ರಿಸಲಾಗುತ್ತಿದೆ. ಅಂಬೇಡ್ಕರ್‌ ಒಂದು ವರ್ಗಕ್ಕೆ, ಗುಂಪಿಗೆ ಸೇರಿದವರು ಎಂದು ನೋಡುವುದನ್ನು ಬಿಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಸಂಗಣ್ಣ ಕರಡಿ ಮಾತನಾಡಿ, ಅಂಬೇಡ್ಕರ್‌ ಅವರು ಎಲ್ಲ ಜನಾಂಗ ದ ವರಿಗೂ ಬೇಕಾದವರು. ಸರ್ವ ಜನಾಂಗಕ್ಕೆ, ಮಹಿಳೆಯರಿಗೆ ಮತ ದಾನದ ಹಕ್ಕು ನೀಡಿದ್ದಾರೆ. ಯವಕರು ದುರಭ್ಯಾಸಗಳನ್ನು ಬಿಟ್ಟು ಅಂಬೇಡ್ಕರ್‌ ಅವರ ರೀತಿಯಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್‌ ಅವರು ದೇಶ ರಾಜ ಕೀಯ ವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದು ಕನಸು ಕಂಡವರು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್‌ ಜುಲ್ಲು ಖಾದ್ರಿ, ನಗರಸಭೆ ಸದಸ್ಯ ಮುತ್ತುರಾಜ್‌ ಕುಷ್ಟಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಮಣ್ಣ ಚೌಡ್ಕಿ, ಗೂಳಪ್ಪ ಹಲಗೇರಿ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ. ತ್ಯಾಗರಾಜನ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಮುಖಂಡರಾದ ಗವಿಸಿದ್ದಪ್ಪ ಕಂದಾರಿ, ಸಿದ್ದು ಮ್ಯಾಗೇರಿ, ಡಾ.ಬಿ.ಜ್ಞಾನಸುಂದರ, ಗಾಳೆಪ್ಪ ಪೂಜಾರ ಇದ್ದರು. ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ಕಲ್ಲೇಶ್‌ ಸ್ವಾಗತಿಸಿದರು. ಸಿ.ವಿ.ಜಡಿಯವರ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT