ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪಾಲಾಗಿದ್ದ ವಿದ್ಯಾರ್ಥಿನಿ ಮಾಯಾ ಕೋಳೆ ಅಂತ್ಯಕ್ರಿಯೆ: ಮುಗಿಲು ಮುಟ್ಟಿದ ಆಕ್ರಂದನ

Last Updated 16 ಏಪ್ರಿಲ್ 2017, 6:17 IST
ಅಕ್ಷರ ಗಾತ್ರ

ಬೆಳಗಾವಿ: ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ವೇಳೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಳ್ವಾನ್‌ದ ವಾಯರಿ ಬೀಚ್‌ನಲ್ಲಿ ಶನಿವಾರ ಮುಳುಗಿ ಮೃತಪಟ್ಟ ಇಲ್ಲಿನ ಮರಾಠಾ ಮಂಡಳ ಎಂಜಿನಿಯರಿಂಗ್‌ ಕಾಲೇಜಿನ ಒಬ್ಬ ಉಪನ್ಯಾಸಕ ಹಾಗೂ ಏಳು ವಿದ್ಯಾರ್ಥಿಗಳ ಪೈಕಿ ಮಾಯಾ ಕೋಳೆ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಿತು.

ದುರಂತದಲ್ಲಿ ಸಾವಿಗೀಡಾದ ವಿದ್ಯಾರ್ಥಿನಿ ಮಾಯಾ ಕೋಳೆ ಅವರ ಅಂತ್ಯಕ್ರಿಯೆ ಬೆಳಿಗ್ಗೆ ಬೆಳಗಾವಿ ತಾಲ್ಲೂಕಿನ ಬಂಬರಗಾದಲ್ಲಿ ನಡೆಯಿತು. ಸಾವಿನ ಸುದ್ದಿ ತಿಳಿದು ಗ್ರಾಮಕ್ಕೆ ಬಂದಿದ್ದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನೆ: ಶನಿವಾರ ನಡೆದ ಘಟನೆಯಲ್ಲಿ ಮೃತಪಟ್ಟವರಲ್ಲಿ ಬಹುತೇಕರು ಬೆಳಗಾವಿ ಮತ್ತು ಆಸುಪಾಸಿನ ಗ್ರಾಮಗಳ ವಿದ್ಯಾರ್ಥಿಗಳು. ಸತ್ತವರಲ್ಲಿ ಮೂವರು ವಿದ್ಯಾರ್ಥಿನಿಯರೂ ಸೇರಿದ್ದಾರೆ.

ಮೃತಪಟ್ಟ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು

ತುರಮರಿಯ ಕಿರಣ್‌ ಖಾಂಡೆಕರ್‌, ಸಾಂಬ್ರಾದ ಆರತಿ ಚವ್ಹಾಣ, ಕರುಣಾ ಬರ್ಡೆ, ಕಾಕತಿ ನಿತಿನ್‌ ಮುತ್ನಾಳಕರ್‌, ಬಂಬರಗಾ ಗ್ರಾಮದ ಮಾಯಾ ಕೋಳೆ, ಆಜಾದ್‌ ನಗರದ ಮುಜಮಿನ್‌ ಅಣ್ಣಿಗೇರಿ, ಅವಧೂತ ತಹಶೀಲ್ದಾರ್‌ ಹಾಗೂ ಶಹಾಪುರದ ಪ್ರೊ. ಮಹೇಶ ಕುಡಚಕರ ಮೃತಪಟ್ಟವರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT