ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಕರ ರಸ್ತೆ ಅಪಘಾತ; ವ್ಯಕ್ತಿ ಸಾವು

Last Updated 16 ಏಪ್ರಿಲ್ 2017, 6:29 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಕುರುಬರ ಹುಂಡಿ ಬಳಿಯಿರುವ ಓಂಕಾರ್ ವಲಯ ಅರಣ್ಯ ಕಚೇರಿಗೆ ಸಮೀಪದಲ್ಲಿ ಬಳಿ ಶನಿವಾರ ಸಂಭವಿಸಿದ ಭೀಕರ ಅಪಘಾತ ದಲ್ಲಿ ವ್ಯಕ್ತಿಯೊಬ್ಬರು ಸತ್ತಿದ್ದಾರೆ. ತಗ್ಗಲೂರು ಗ್ರಾಮದ ಬಸವಣ್ಣ (52) ಮೃತರು.ಬೇಗೂರು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಹಾಗೂ ಬೇಗೂರು ಕಡೆಯಿಂದ ಹೆಡಿಯಾಲ ಕಡೆಗೆ ತೆರಳುತ್ತಿದ್ದ ಸ್ಕಾರ್ಪಿಯೊ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು,ಡಿಕ್ಕಿಯ ರಭಸಕ್ಕೆ ಸ್ಕಾರ್ಪಿಯೊ ಗುರುತು ಸಿಗದಷ್ಟು ನಜ್ಜುಗುಜ್ಜಾಗಿದೆ.

ಬಸವಣ್ಣ ಸ್ಥಳದಲ್ಲೇ ಸತ್ತಿದ್ದಾರೆ. ಅಪಘಾತದ ಹಿಂದೆಯೇ ಲಾರಿ ಚಾಲಕ ಮತ್ತು ಕ್ಲೀನರ್‌್ ಕಾಡಿಗೆ ನುಗ್ಗಿ ತಲೆಮರೆಸಿ ಕೊಂಡಿದ್ದಾರೆ. ಅಪಘಾತದ ತೀವ್ರತೆ ಯಿಂದಾಗಿ ಈ ಮಾರ್ಗದಲ್ಲಿ ಕೆಲಹೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.ನಜ್ಜುಗುಜ್ಜಾಗಿದ್ದ ವಾಹನದಲ್ಲಿ ಇವರ ದೇಹ ಸಿಲುಕಿಕೊಂಡಿದ್ದು, ಅದರನ್ನು ತೆಗೆಯಲು ಸುಮಾರು ಒಂದು ಗಂಟೆ ಕಾಲ ಅಧಿಕಾರಿಗಳು ಕಸರತ್ತು ನಡೆಸಬೇಕಾಯಿತು.

ಅಪಘಾತದ ಅನತಿ ದೂರದಲ್ಲಿ ಇದ್ದ ಓಂಕಾರ್ ವಲಯ ಅರಣ್ಯ ವಲಯದ ಸಿಬ್ಬಂದಿ ಸುದ್ದಿ ಕೇಳಿ ಸ್ಥಳಕ್ಕೆ ಧಾವಿಸಿ ದ್ದಾರೆ. ಮಾಹಿತಿ ಪಡೆದ ಬೇಗೂರು ಠಾಣೆಯ ಪಿಎಸ್‌ಐ ಕಿರಣ್‌ಕುಮಾರ್‌ ಸ್ಥಳಕ್ಕೆ ಬಂದಿದ್ದು, ಸಂಚಾರ ಸುಗಮ ಗೊಳ್ಳಲು ಕ್ರಮಕೈಗೊಂಡರು.

ಆಕ್ರಂದನ: ವಿಷಯ ತಿಳಿಯುತ್ತಿ ದ್ದಂತೆಯೇ ನಾಗಣಾಪುರ ಹಾಗೂ ತಗ್ಗ ಲೂರು ಗ್ರಾಮಸ್ಥರು ಗುಂಪುಗುಂಪಾಗಿ ಸ್ಥಳಕ್ಕೆ ಧಾವಿಸಿದರು. ಜನಸಂದಣಿಯೂ ಸಂಚಾರ ಅಸ್ತವ್ಯಸ್ತಗೊಳ್ಳಲು ಕಾರಣ ವಾಯಿತು.

ಮೃತ ಬಸವಣ್ಣ ಪ್ರಗತಿಪರ ಕೃಷಿಕ ರಾಗಿದ್ದು, ಬಂಧುಗಳ ರೋದನ ಮುಗಿಲುಮುಟ್ಟಿತ್ತು. ಇವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.ರಸ್ತೆ ಡುಬ್ಬ ನಿರ್ಮಿಸಲು ಒತ್ತಾಯ: ಕುರುಬರಹುಂಡಿ ಗ್ರಾಮದಿಂದ ಕೊತ್ತನ ಹಳ್ಳಿ ಗ್ರಾಮದವರೆಗೆ ಸುಮಾರು 4 ಕಿ.ಮೀ ಹೆಡಿಯಾಲ –ಬೇಗೂರು ಮುಖ್ಯ ರಸ್ತೆ ಆಗಿದ್ದು, ನೂರಾರು ವಾಹನಗಳು ಸಂಚರಿಸುತ್ತವೆ.

ಇದು ಅಪಘಾತ ವಲಯವಾಗಿದ್ದು, ವಾಹನಗಳಿಗೆ ಸಿಕ್ಕಿ ವನ್ಯಜೀವಿಗಳು ಸತ್ತಿರುವ ನಿದರ್ಶನವೂ ಇದೆ. ವಾಹನ ಗಳ ವೇಗ ನಿಯಂತ್ರಿಸಲು ಆಗುವಂತೆ ರಸ್ತೆ ಡುಬ್ಬ ನಿರ್ಮಿಸಬೇಕು ಎಂದು ಸ್ಥಳದಲ್ಲಿ ಗುಪುಗೂಡಿದ್ದ ಸಾರ್ವಜನಿಕರು ಒತ್ತಾಯಿಸಿದರು.ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT