ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಂದಾವನ ಗಡ್ಡೆಯ ವಿವಾದ: ಇತ್ಯರ್ಥಕ್ಕೆ ಅನುಸಂಧಾನ

Last Updated 16 ಏಪ್ರಿಲ್ 2017, 9:29 IST
ಅಕ್ಷರ ಗಾತ್ರ

ಗಂಗಾವತಿ: ಐತಿಹಾಸಿಕ ಹಾಗೂ ಧಾರ್ಮಿಕ ಪುಣ್ಯಕ್ಷೇತ್ರ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾ ವನ ಗಡ್ಡೆಯಲ್ಲಿ ಉದ್ಭವಿ ಸಿರುವ ಪೂಜೆ ವಿವಾದಕ್ಕೆ ಸಂಬಂಧಿಸಿದಂತೆ ಶೀಘ್ರ ಅನುಸಂಧಾನ ಸಭೆ ನಡೆಸಲು ಯತ್ನಿಸುವುದಾಗಿ ವಿಪ್ರ ವಿಕಾಸ ಸೇವಾ ಟ್ರಸ್ಟ್ ಸಂಘಟನೆಯ ಯುವಕರು ಹೇಳಿದರು.

ನಗರದಲ್ಲಿ ಶುಕ್ರವಾರ  ಸುದ್ದಿಗೊ ಷ್ಠಿಯಲ್ಲಿ   ಮಾತನಾಡಿದ ಉಪನ್ಯಾಸಕ ಪವನಕುಮಾರ ಗುಂಡೂರು, ಗಡ್ಡಿಯಲ್ಲಿ ನಡೆಯುತ್ತಿರುವ ಪೂಜೆಗೆ ಸಂಬಂಧಿ ಸಿದಂತೆ ರಾಘವೇಂದ್ರ ಸ್ವಾಮಿ ಮಠಕ್ಕೂ ಹಾಗೂ ಉತ್ತರಾಧಿ ಮಠಕ್ಕೂ ವಿವಾದವಿದೆ.

ಪೂಜೆಗಾಗಿ ಉದ್ಭವಿಸುತ್ತಿರುವ ಗಲಾಟೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಇದರಿಂದಾಗಿ ಇತರೆ ಸಮಾಜಕ್ಕೆ ನಮ್ಮ ಬ್ರಾಹ್ಮಣ ಸಮಾಜದ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತಿರುವ ಕಾರಣ ಉಬಯ ಶ್ರೀಗಳಲ್ಲಿ ನಮ್ಮ ಸಂಘಟನೆಯಿಂದ ಮನವಿ ಮಾಡಲಾಗುವುದು ಎಂದರು.

ವಿಪ್ರ ವಿಕಾಸ ಸೇವಾ ಟ್ರಸ್ಟ್‌ನ ವಕ್ತಾರ ಅನಿಲ್ ದೇಸಾಯಿ ಮಾತನಾಡಿ,  ಎಲ್ಲ ಯುವಕರು ಸೇರಿಕೊಂಡು ಸಂಘಟನೆ ಮೂಲಕ ಸಮಾಜಮುಖಿ ಸೇವೆ ಮಾಡುವ ಉದ್ದೇಶಕ್ಕೆ ಸಂಘಟನೆಯನ್ನು ಎ.16ರಂದು ಅಧಿಕೃತವಾಗಿ ಉದ್ಘಾಟಿ ಸಲಾಗುವುದು ಎಂದರು.

ಭಾನುವಾರ ಬೆಳಿಗ್ಗೆ ಐಎಂಎ ಭವನದಲ್ಲಿ ನಡೆಯುವ ಕಾರ್ಯಕ್ರಮ ವನ್ನು ಬೆಂಗಳೂರಿನ ಜಯನಗರದ ಶಾಸಕ ಬಿ.ಎಸ್. ವಿಜಯಕುಮಾರ ಉದ್ಘಾಟಿ ಸುವರು ಎಂದರು.
ಸಮಾಜದ ಪ್ರಮುಖರಾದ ಶಾಮಾಚಾರ್ ಜೋಶಿ, ಶಾಮರಾವ್ ಸಿಂಗನಾಳ, ಗುರುರಾಜ ಕುಲ್ಕರ್ಣಿ, ಪ್ರಹ್ಲಾದ್ ದಿಗ್ಗೋಟಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT