ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದಾಯಿ ಯೋಜನೆ ಶೀಘ್ರ ಜಾರಿಗೆ ಆಗ್ರಹ

Last Updated 16 ಏಪ್ರಿಲ್ 2017, 10:37 IST
ಅಕ್ಷರ ಗಾತ್ರ

ನರಗುಂದ: ಮಹಾದಾಯಿ ಯೋಜನೆ ಶೀಘ್ರ ಅನುಷ್ಠಾನಗೊಳ್ಳುವುದು ಸೇರಿದಂತೆ ನಾಲ್ಕು ನಿರ್ಣಯಗಳನ್ನು  ತಾಲ್ಲೂಕಿನ ಕಣಕಿಕೊಪ್ಪದಲ್ಲಿ ನಡೆದ ನರಗುಂದ ತಾಲ್ಲೂಕು 4ನೇ ಸಾಹಿತ್ಯ ಸಮ್ಮೇಳನದಲ್ಲಿ  ಮಂಡನೆ ಮಾಡಲಾಯಿತು.ಸಂಜೆ ನಡೆದ ಬಹಿರಂಗ ಅಧಿವೇಶನದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಪಟ್ಟಣಶೆಟ್ಟಿಯವರು, ಮಹಾದಾಯಿ ಯೋಜನೆ ಅನುಷ್ಠಾನ ವಿಳಂಬವಾಗದೇ ಜಾರಿಗೊಳ್ಳಬೇಕು, ನರಗುಂದದ ಬಾಬಾಸಾಹೇಬರ ಜಯಂತಿ ಅಥವಾ ಪುಣ್ಯ ತಿಥಿ ಕಾರ್ಯಕ್ರಮವನ್ನು ಸರ್ಕಾರ ತಾಲ್ಲೂಕು ಉತ್ಸವವಾಗಿ ಆಚರಿಸಬೇಕು, ತಾಲ್ಲೂಕಿನ ಯೋಧರ ವೀರಗಲ್ಲುಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಬೇಕು ಮತ್ತು  ಏಕೀಕರಣ ಹೋರಾಟಗಾರ ದಿ. ಶಿವಮೂರ್ತಯ್ಯ ಸುರೇಬಾನ ಅವರ ಸ್ಮಾರಕವನ್ನು ನರಗುಂದದಲ್ಲಿ ನಿರ್ಮಿಸಬೇಕು ಎಂದು ನಿರ್ಣಯ ಮಂಡಿಸಿದರು.

ನಿರ್ಣಯಗಳಿಗೆ ಗ್ರಾಮಸ್ಥರು, ಸಾಹಿತಿಗಳು ಒಪ್ಪಿಗೆ ಸೂಚಿಸಿ, ಇವುಗಳ ಜಾರಿಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ. ಕಲಹಾಳ ಮಾತನಾಡಿ ನಿರ್ಣಯಗಳ ಜಾರಿಗೆ ತಾಲ್ಲೂಕು ಆಡಳಿತದ ಮೂಲಕ ಒತ್ತಡ ಹೇರಲಾಗುವುದು ಎಂದರು.
ಅಧಿವೇಶನದಲ್ಲಿ  ಸಮ್ಮೇಳನಾಧ್ಯಕ್ಷ ಎಸ್‌.ಬಿ. ಕುಷ್ಟಗಿ, ಕೋಶಾಧ್ಯಕ್ಷ ಎಸ್‌.ಜಿ. ಮಣ್ಣೂರಮಠ, ಕೆ.ಬಿ. ಅರಕೇರಿ, ಪ್ರಭಾಕರ ಮುನವಳ್ಳಿ, ಪ್ರಕಾಶ ಸೊಬರದ, ಆರ್‌.ಎಸ್‌. ಪವಾರ ಇದ್ದರು.

ಸನ್ಮಾನ: ಕೊಣ್ಣೂರಿನ ರಮಜಾನಸಾಬ್ ಶಿರೋಳ, ಭೈರನಹಟ್ಟಿಯ ಇಮಾಮಸಾಬ್ ಅಗಸರ, ಸಿದ್ದಪ್ಪ ಹುಲಜೋಗಿ, ವೆಂಕಪ್ಪ ಹುಜರತ್ತಿ, ವೈ.ಐ. ಕುಂಬಾರ, ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರೇಮಾ ಮ್ಯಾಗೇರಿ, ಮನಿಷಾ ಚೋಪ್ರಾ, ಪೂಜಾ ಸವದಿ, ವೆಂಕಪ್ಪ ಹುಜರತ್ತಿ, ಅನ್ನಪೂರ್ಣ ಕರಿಗಾರ, ಪವಿತ್ರಾ ಮಾಳಪ್ಪನವರನ್ನು ಸನ್ಮಾನಿಸಲಾಯಿತು.
ವಿ.ಆರ್‌.ಚಿಕ್ಕಮಠ ಸ್ವಾಗತಿಸಿದರು. ಚಿದಂಬರ ನಿಂಬರಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT